– ಮೈಸೂರು ಯುವ ದಸರಾಗೆ ಅದ್ದೂರಿ ತೆರೆ
– ರೆಟ್ರೋ, ಮೆಲೋಡಿ ಕಾಂಬಿನೇಷನ್‌ಗೆ ಯುವಸಮೂಹ ಫಿದಾ
ಮೈಸೂರು: ಮೈಸೂರು ದಸರಾದಲ್ಲಿ ಕಳೆದ 5 ದಿನದಿಂದ ಯುವ ಸಮೂಹವನ್ನ ರಂಜಿಸಿದ ಯುವ ದಸರಾ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ ಬಿದ್ದಿದ್ದು, ಕೊನೆಯ ದಿನವಾದ ಗುರುವಾರ ಕೂಡ ಸ್ವರ ಮಾಂತ್ರಿಕ ಇಳಯರಾಜ ಮೋಡಿಗೆ ಮೈಸೂರಿಗರು ತಲೆ ದೂಗಿದರು.
Advertisement
ಕಳೆದ 5 ದಿನದಿಂದ ದಸರಾ ಮೆರುಗನ್ನ ಡಬಲ್ ಮಾಡಿದ್ದ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ ಬಿದ್ದಿದೆ. ಕೊನೆಯ ದಿನವಾದ ನಿನ್ನೆ ಇಳಯರಾಜರ ಮೋಡಿ ಮೈಸೂರಿಗರನ್ನ ಸ್ವರ ಸಾಲುಗಳಲ್ಲಿ ಮಿಂದೆಳಿಸುವ ಮೂಲಕ ಸಾವಿರಾರು ಸಂಖ್ಯೆಯ ಜನರನ್ನ ರಂಜಿಸಿತು.
Advertisement
ನಗರದ ಹೊರ ವಲಯದ ನಡೆದ ಕಾರ್ಯಕ್ರಮದ ಕೊನೆಯ ದಿನವಾದ ಗುರುವಾರ ಇಳಿಯರಾಜ್ ಮೂಸಿಕಲ್ ನೈಟ್ ಆರಂಭವಾಗುತ್ತಿದ್ದಂತೆ ಜನ ಕುಳಿತಲ್ಲೇ ಸಂಗೀತದಲ್ಲಿ ತೇಲಿದರು. ಮೊದಲ ಬಾರಿಗೆ ತಾವು ಕೊಲ್ಲೂರು ಮೂಕಾಂಬಿಕ ಬಗ್ಗೆ ಹಾಡಿದ ಮೊದಲ ಹಾಡದ ಅಮ್ಮ ಎಂದೂ ಕೂಗಿದರೆ ಹಾಡಿನ ಮೂಲಕ ನೆರದಿದ್ದವರನ್ನ ಭಕ್ತಿಯಲ್ಲಿ ತೇಲುವಂತೆ ಮಾಡಿದರು. ಬಳಿಕ ಡಾ. ರಾಜಕುಮಾರ್ ಅಭಿನಯದ ನನ್ನ ನೀನು ಗೆಲ್ಲಲಾರೆ, ಜೀವ ಹೂವಾಗಿದೆ ಹಾಡು ಸೇರಿದಂತೆ ಡಾ. ವಿಷ್ಣುವರ್ಧನ್ ಅಭಿನಯದ ಹಾಡುಗಳನ್ನ ಹಾಡುವ ಮೂಲಕ ರಂಚಿಸಿದರು. ಅಲ್ಲದೇ ಶಂಕರ್ ನಾಗ್ ನಟನೆಯ ಗೀತಾ ಚಿತ್ರದ ಹಾಡಾದ ಸಂತೋಷಕ್ಕೆ ಹಾಡು ಸಂತೋಷಕ್ಕೆ ಹಾಡನ್ನ ದಿವಂಗತ ಡಾ. ಎಸ್.ಪಿ ಬಾಲಸುಬ್ರಹ್ಮಣ್ಯಂ ಪುತ್ರ ಎಸ್.ಬಿ ಚರಣ್ ಹಾಡುವ ಮೂಲಕ ನೆರದಿದ್ದವರನ್ನ ಕುಣಿದು ಕುಪ್ಪಳಿಸುಂತೆ ಮಾಡಿದ್ರು. ಅಲ್ಲದೇ ಅನೇಕ ಕನ್ನಡದ ಪ್ರಖ್ಯಾತ ರೆಟ್ರೋ, ಮತ್ತು ಮೆಲೋಡಿ ಹಾಡುಗಳನ್ನ ಹಾಡುವ ಮೂಲಕ ಜಿಟಿ ಜಿಟಿ ಮಳೆಯ ನಡುವೆಯೂ ಜನ ಸಂಗೀತಕ್ಕೆ ತಲೆದೂಗುವಂತೆ ಮಾಡಿದ್ರು.
Advertisement
ಇದೇ ಸಂದರ್ಭದಲ್ಲಿ ವೇದಿಕೆ ಮೇಲೆಯೇ ಇಳಯರಾಜ ಕನ್ನಡನಾಡು ಮತ್ತು ಕನ್ನಡದ ಹಿರಿಯ ನಟ, ನಿರ್ದೇಶಕರು, ಬರಹಗಾರರ ಜೊತೆಗಿನ ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡ್ರು. 1974 ರಲ್ಲಿ ಮೊದಲ ಬಾರಿಗೆ ಮೈಸೂರಿಗೆ ಬಂದಿದ್ದ ಇಳಯರಾಜ ಮೈಸೂರಿನ ಕಾರ್ಯಕ್ರಮದಲ್ಲಿ ಕೀಬೋರ್ಡ್ ವಾದಕರಾಗಿ ಭಾಗಿಯಾಗಿದ್ರಂತೆ. ಕಾರ್ಯಕ್ರಮ ಮುಗಿಸಿ ಬಳಿಕ ಕೊಲ್ಲೂರು ಮೂಕಾಂಬಿಕಾ ದರ್ಶನ ಮಾಡಿದ್ದ ಅನುಭವ ಹಂಚಿಕೊಂಡರು. ಅಲ್ಲದೇ ಮೊದಲ ಬಾರಿಗೆ ಖುದ್ದು ನಟ ಸಾರ್ವಭೌಮ ರಾಜಕುಮಾರ್ ಅವರ ಬಳಿ ಹಾಡಿಸಿದ್ದು ಕೂಡ ಇದೇ ಇಳಯರಾಜರೇ ಯಂತೆ. ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ ಹಾಡಿನ ಸಂಯೋಜನೆ ಸಂಧರ್ಭದ ಘಟನೆ ನೆನಪು ಮಾಡಿಕೊಂಡ ಅವರು, ಆ ಸಮಯದಲ್ಲಿ ಬೇರೆ ಅವರು ಹಾಡೋದು ಬೇಡ, ರಾಜಕುಮಾರ್ ಅವರೇ ಹಾಡಲಿ ಎಂದು ಹೇಳಿದ್ದ ಅನುಭವದ ಬಗ್ಗೆ ವೇದಿಕೆಯಲ್ಲಿ ಹಂಚಿಕೊಳ್ಳುವ ಮೂಲಕ ಕರ್ನಾಟಕ ಮತ್ತು ಕನ್ನಡದ ನಟರ ಜೊತೆಗಿನ ಬಾಂಧ್ಯವ ಬಗ್ಗೆ ಹೇಳಿಕೊಂಡರು.