ಇಳಯರಾಜ ಬಯೋಪಿಕ್: ಚಿತ್ರಕ್ಕೆ ಚಾಲನೆ ನೀಡಿದ ಕಮಲ್ ಹಾಸನ್

Public TV
1 Min Read
ilayaraja biopic 2

ಸಂಗೀತದ ಜೀವಂತ ದಂತಕಥೆ ಇಳಯರಾಜ ಅವರ ಬಯೋಪಿಕ್ (Biopic) ಗೆ ಕೊನೆಗೂ ಚಾಲನೆ ಸಿಕ್ಕಿದೆ. ಇಂದು ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಫಸ್ಟ್ ಲುಕ್ ಅನ್ನು ಕಮಲ್ ಹಾಸನ್ (, Kamal Haasan) ಮತ್ತು ಇಳಯರಾಜ ಅವರೇ ಬಿಡುಗಡೆ ಮಾಡಿದ್ದಾರೆ. ಅಚ್ಚರಿಯ ಸಂಗತಿ ಅಂದರೆ, ಈ ಚಿತ್ರಕ್ಕೆ ಇಳಯರಾಜ ಅವರೇ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ilayaraja biopic 1

ಇಳಯರಾಜ ಅವರ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವ ಸಹಜ ಕುತೂಹಲ ಎಲ್ಲರಲ್ಲೂ ಇತ್ತು. ನಟ ಧನುಷ್ (Dhanush) ಅವರು ಆ ಪಾತ್ರವನ್ನು ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಅದು ಕೂಡ ನಿಜವಾಗಿದೆ. ಧನುಷ್ ಅವರೇ ಇಳಯರಾಜ ಪಾತ್ರವನ್ನು ಮಾಡಲಿದ್ದಾರೆ. ಇಂದು ಅವರು ಕೂಡ ಸಮಾರಂಭಕ್ಕೆ ಆಗಮಿಸಿದ್ದರು.

dhanush

ತಮ್ಮ ತಂದೆಯ ಜೀವನವನ್ನು ಆಧರಿಸಿದ ಸಿನಿಮಾ ಮಾಡುವುದಾದರೆ, ಆ ಪಾತ್ರದಲ್ಲಿ ನಾನು ಧನುಷ್ ಅವರನ್ನು ಕಾಣಲು ಬಯಸುತ್ತೇನೆ ಎಂದು ಈ ಹಿಂದೆಯೇ ಇಳಯರಾಜ (Ilayaraja) ಅವರ ಪುತ್ರ ಯುವನ್ ಶಂಕರ್ ರಾಜ್ ಹೇಳಿದ್ದರು. ತಮ್ಮ ತಂದೆಯನ್ನು ಧನುಷ್ ಅವರಲ್ಲಿ ಕಾಣಲು ಹೆಚ್ಚು ಉತ್ಸುಕನಾಗಿದ್ದೇನೆ ಎಂದೂ ಅವರು ಹೇಳಿಕೊಂಡಿದ್ದರು. ಅದು ಈಗ ನಿಜವಾಗಿದೆ.

ಈ ಚಿತ್ರಕ್ಕೆ ಇಳಯರಾಜ ಎಂದು ಹೆಸರಿಡಲಾಗಿದ್ದು, ಅರುಣ್ ಮಾದೇಶ್ವರನ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರಲಿದೆ. ನೀರವ್ ಶಾ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಪಿಕೆ ಪ್ರೈಮ್ ಪ್ರೊಡಕ್ಷನ್ ಮತ್ತು ಮರ್ಕ್ಯೂರಿ ಮೂವಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ.

Share This Article