ಹೈದರಾಬಾದ್: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಓದುತ್ತಿದ್ದ 21 ವರ್ಷದ ವಿದ್ಯಾರ್ಥಿ 7ನೇ ಅಂತಸ್ತಿನ ಹಾಸ್ಟೆಲ್ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಯನ್ನು ಸಿಕಂದರಾಬಾದ್ ನ ಎಂ.ಅನಿರುಧ್ಯ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿ ತನ್ನ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿದ್ದಾಗ ಆಕಸ್ಮಿಕವಾಗಿ ಕಟ್ಟಡದಿಂದ ಬಿದ್ದಿದ್ದಾನೆ ಎಂದು ತಿಳಿದು ಬಂದಿತ್ತು. ಆದರೆ ತನಿಖೆಯ ಬಳಿಕ ಇದು ಆಕಸ್ಮಿಕ ಸಾವಲ್ಲ, ಆತ್ಮಹತ್ಯೆ ಎಂದು ತಿಳಿದು ಬಂದಿದೆ.
Advertisement
Advertisement
ಗುರುವಾರ ಬೆಳಗ್ಗೆ ಮೃತ ಎಂ.ಅನಿರುಧ್ಯ ತನ್ನ ಸ್ನೇಹಿತನಿಗೆ ಒಂದು ಮೇಲ್ ಮಾಡಿದ್ದು, ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ ಎಂದು ಮಾಡಿದ್ದಾನೆ. ಅನಿರುಧ್ಯ ಖಿನ್ನತೆಗೆ ಒಳಗಾಗಿದ್ದನು. ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ನೇಹಿತ ತಿಳಿಸಿದ್ದಾನೆ.
Advertisement
ಮೇಲ್ ನಲ್ಲಿ ಏನಿದೆ?
“ನಾನು ನನ್ನ ಜೀವನ ಸಂಪೂರ್ಣವಾಗಿ ತಾರ್ಕಿಕವಾಗಿದ್ದು, ಮುಂದಿನ ಭವಿಷ್ಯವನ್ನು ಅಂದಾಜಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನನ್ನ ಈ ನಿರ್ಧಾರದಲ್ಲಿ ಯಾರ ಒಳಸಂಚಿಲ್ಲ. ನನ್ನ ಲೈಫ್ ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ. ಹೀಗಾಗಿ ನಾನು ನನ್ನ ಜೀವನವನ್ನು ಇಲ್ಲಿಗೆ ಕೊನೆಗೊಳಿಸುವ ನಿರ್ಧಾರವನ್ನು ಮಾಡಿದ್ದೇನೆ” ಎಂದು ಮೇಲ್ ಮಾಡಿದ್ದಾನೆ.
Advertisement
ಅಷ್ಟೇ ಅಲ್ಲದೇ ಇತ್ತೀಚೆಗಷ್ಟೇ ಮೃತ ವಿದ್ಯಾರ್ಥಿ ಮನೋವೈದ್ಯರನ್ನು ಭೇಟಿಯಾಗಿದ್ದನು. ಸಿಕಂದರಾಬಾದ್ ನ ಬೋವೆನ್ಪಲ್ಲಿಯ ನಿವಾಸಿ ಅನರುಧ್ಯ ಎಂದು ಗುರುತಿಸಲಾಗಿದ್ದು, ವಿದ್ಯಾರ್ಥಿ ನಾಲ್ಕನೇ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv