– ಕಾಂಗ್ರೆಸ್ ಸಂಸದ ಪಿ. ಕಾರ್ತಿ ಚಿದಂಬರಂ ಆಕ್ಷೇಪ
ಚೆನ್ನೈ: ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ (V Kamakoti) ಗೋಮೂತ್ರದಲ್ಲಿನ ಔಷಧೀಯ ಗುಣಗಳನ್ನ ಕೊಂಡಾಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಐಐಟಿ ನಿರ್ದೇಶಕನ ಹೇಳಿಕೆಗೆ ತಮಿಳುನಾಡು ಕಾಂಗ್ರೆಸ್ ಸಂಸದ ಪಿ. ಕಾರ್ತಿ ಚಿದಂಬರಂ (Karti P Chidambaram) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Peddling pseudoscience by @iitmadras Director is most unbecoming @IMAIndiaOrg https://t.co/ukB0jwBh8G
— Karti P Chidambaram (@KartiPC) January 18, 2025
ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಐಐಟಿ ಮದ್ರಾಸ್ ನಿರ್ದೇಶಕರು ನಕಲಿ ವಿಜ್ಞಾನವನ್ನು ಹರಡುತ್ತಿರುವುದು ಅಸಂಬದ್ಧವಾಗಿದೆ ಎಂದು ಆಕ್ಷೇಪಿಸಿದ್ದಾರೆ.
ಕಾಮಕೋಟಿ ಹೇಳಿದ್ದೇನು?
ಗೋಮೂತ್ರವು (Cow Urine) ಬ್ಯಾಕ್ಟೀರಿಯಾ ನಿರೋಧಕ, ಶಿಲೀಂಧ್ರಯ ನಿರೋಧಕ ಹಾಗೂ ಜೀರ್ಣಕಾರಕ ಗುಣಗಳನ್ನು ಹೊಂದಿದೆ. ಹೊಟ್ಟೆ ಉರಿ ಸಮಸ್ಯೆಯಂತಹ ಆರೋಗ್ಯ ಸಮಸ್ಯೆಗಳಿಗೆ ಗೋಮೂತ್ರ ಸೂಕ್ತ. ಅಲ್ಲದೇ ಗೋಮೂತ್ರದ ಔಷಧೀಯ ಗುಣಗಳನ್ನು ಪರಿಗಣಿಸಬೇಕು ಎಂದೂ ಕಾಮಕೋಟಿ ಎಂದೂ ಪ್ರತಿಪಾದಿಸಿದ್ದಾರೆ.
ಇದೇ ತಿಂಗಳು ಜನವರಿ 15ರಂದು ಮಾತು ಪೊಂಗಲ್ ಪ್ರಯುಕ್ತ ಗೋ ಸಂರಕ್ಷಣಾ ಶಾಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುವಾಗ, ಸನ್ಯಾಸಿಯೊಬ್ಬರು ತೀವ್ರ ಜ್ವರವಿದ್ದಾಗ ಗೋಮೂತ್ರ ಸೇವಿಸಿ ಹೇಗೆ ಚೇತರಿಸಿಕೊಂಡರು ಎಂಬ ಉದಾಹರಣೆ ನೀಡುವಾಗ ಕಾಮಕೋಟಿ ಅವರು ಈ ಹೇಳಿಕೆಗಳನ್ನು ನೀಡಿದ್ದರು.
ಸಂಶೋಧನಾ ವರದಿ ಹೇಳಿದ್ದೇನು?
ಈ ಹಿಂದೆ ಉತ್ತರ ಪ್ರದೇಶದ ಬರೇಲಿಯಲ್ಲಿ ಇರುವ ಭಾರತೀಯ ಪಶು ಸಂಶೋಧನಾ ಸಂಸ್ಥೆ (IVRI) ಗೋಮೂತ್ರದ ಕುರಿತು ವರದಿಯೊಂದನ್ನ ಪ್ರಕಟಿಸಿತ್ತು. ಸಂಸ್ಕರಣೆ ಮಾಡದ, ತಾಜಾ ಗೋ ಮೂತ್ರದಲ್ಲಿ ವಿಷಕಾರಿ ಬ್ಯಾಕ್ಟೀರಿಯಾಗಳು ಇರುತ್ತವೆ. ಹೀಗಾಗಿ, ಗೋ ಮೂತ್ರದ ನೇರ ಸೇವನೆ ಮಾನವನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರ ವರದಿ ತಿಳಿಸಿತ್ತು.