ಜೈಪುರ: ಪ್ರಯಾಗ್‌ರಾಜ್ ಕುಂಭಮೇಳದ ಸಮಯದಲ್ಲಿ ಐಐಟಿ ಬಾಬಾ (IIT Baba) ಎಂದೇ ಪ್ರಸಿದ್ಧಿಪಡೆದ 35 ವರ್ಷದ ಅಭಯ್ ಸಿಂಗ್ (Abhay Singh) ಅವರನ್ನು ಜೈಪುರ ಪೊಲೀಸರು (Jaipur Police) ಬಂಧಿಸಿದ್ದಾರೆ.
ಜೈಪುರ ನಗರ (ದಕ್ಷಿಣ) ಉಪ ಪೊಲೀಸ್ ಆಯುಕ್ತ ದಿಗಂತ್ ಆನಂದ್ ಪ್ರತಿಕ್ರಿಯಿಸಿ, ಶಿಪ್ರಾ ಪಥ್ ಪೊಲೀಸ್ ಠಾಣೆಗೆ ನಿಯಂತ್ರಣ ಕೊಠಡಿಗೆ ಅಭಯ್ ಸಿಂಗ್ ಎಂಬ ವ್ಯಕ್ತಿ ಪಾರ್ಕ್ ಕ್ಲಾಸಿಕ್ ಹೋಟೆಲ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ ಎಂಬ ಕರೆ ಬಂದಿತ್ತು.
Advertisement
ಮಾಹಿತಿಯನ್ನು ಪರಿಶೀಲಿಸಲು ಪೊಲೀಸರು ಸ್ಥಳ ತಲುಪಿದಾಗ ಹರಿಯಾಣದ ಝಜ್ಜರ್ ನಿವಾಸಿ ಅಭಯ್ ಸಿಂಗ್ ಸ್ಥಳದಲ್ಲಿ ಇರುವುದನ್ನು ನೋಡಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ `ಐಐಟಿ ಬಾಬಾ’ – ಏರೋಸ್ಪೇಸ್ ಎಂಜಿನಿಯರಿಂಗ್ ಪದವಿ ಪಡೆದವ ಈಗ ಸಾಧು
Advertisement
#WATCH | Jaipur, Rajasthan | SHO Shiprapath PS, Rajendra Godara says, “We received this information that he (Baba Abhay Singh aka IIT Baba) was staying in a hotel, and he might commit suicide. When we reached there, he said that I consume ‘ganja’, I still have it in my… pic.twitter.com/J0wa50a3OC
— ANI (@ANI) March 3, 2025
Advertisement
ಪೊಲೀಸ್ ನಿಯಂತ್ರಣ ಕೊಠಡಿಗೆ ನೀಡಿದ ಮಾಹಿತಿಯ ಬಗ್ಗೆ ಕೇಳಿದಾಗ, ಆ ವ್ಯಕ್ತಿ ತನ್ನ ಬಳಿ ಇದ್ದ ಗಾಂಜಾ ಪ್ಯಾಕೆಟ್ ಅನ್ನು ಹೊರತೆಗೆದಿದ್ದಾನೆ. ನಾನು ಗಾಂಜಾ ಸೇವಿಸಿದ್ದೇನೆ ಮತ್ತು ನಾನು ಗಾಂಜಾ ಪ್ರಭಾವದಲ್ಲಿ ಯಾವುದೇ ಮಾಹಿತಿ ನೀಡಿದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದರು.
Advertisement
ಈ ಸಂದರ್ಭದಲ್ಲಿ ಸಿಂಗ್ ಬಳಿ 1.50 ಗ್ರಾಂ ತೂಕದ ಗಾಂಜಾ ಪ್ಯಾಕೆಟ್ ಪತ್ತೆಯಾಗಿದ್ದು, ಅದನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಸ್ಥಳದಲ್ಲೇ ವಶಪಡಿಸಿಕೊಳ್ಳಲಾಗಿದೆ. ಗಾಂಜಾ ಪ್ರಮಾಣ ಕಡಿಮೆ ಇದ್ದ ಕಾರಣ ಅಭಯ್ ಸಿಂಗ್ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಭಯ್ ಸಿಂಗ್ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.