ಬೆಂಗಳೂರು: ರ್ಯಾಪಿಡ್ ರೋಡ್ (Rapid Road) ರಿಪೋರ್ಟ್ ವಿಚಾರದಲ್ಲಿ ಬಿಬಿಎಂಪಿ ಡಬಲ್ ಗೇಮ್ ಆಡ್ತಿದೆ. ಐಐಎಸ್ಸಿ (IISc) ರಿಪೋರ್ಟ್ ಕಾಯುತ್ತಿದ್ದೇವೆ ಅಂತಾ ಬೊಗಳೇ ಬಿಡ್ತಿದೆ. ಆದರೆ ಬಿಬಿಎಂಪಿಯ (BBMP) ಬಣ್ಣವನ್ನು ಐಐಎಸ್ಸಿ ತಜ್ಞರು ಬಯಲು ಮಾಡಿದ್ದಾರೆ.
ದೇಶದಲ್ಲೇ ಮೊದಲ ರ್ಯಾಪಿಡ್ ರಸ್ತೆಯನ್ನು ಬಿಬಿಎಂಪಿ ಸಿವಿ ರಾಮನ್ ನಗರದ ಹಳೇ ಮದ್ರಾಸ್ ರಸ್ತೆಯಲ್ಲಿ ನಿರ್ಮಾಣ ಮಾಡಿತ್ತು. ನಿರ್ಮಾಣ ಮಾಡಿದ ಕೆಲವೇ ದಿನಗಳಲ್ಲಿ ಬಿರುಕು ಬಿಟ್ಟ ಬಿಬಿಎಂಪಿ ಬಂಡವಾಳ ಬಟಾಬಯಲಾಯ್ತು. ಕೋಟಿ ಕೋಟಿ ಸುರಿದು ನಿರ್ಮಾಣ ಮಾಡಿದ ರ್ಯಾಪಿಡ್ ರೋಡ್ ಬಿರುಕಿಗೆ ಕಾರಣ ಪತ್ತೆಹಚ್ಚಲು ತನಿಖೆ ಮಾಡಿ ವರದಿ ನೀಡಲು ಭಾರತೀಯ ವಿಜ್ಞಾನ ಸಂಸ್ಥೆಗೆ (IISc) ಮನವಿ ಮಾಡಿಕೊಳ್ಳಲಾಗಿತ್ತು. ಬಳಿಕ ಐಐಎಸ್ಸಿ ವರದಿ ನೀಡಲು ಬೇಕಾಗುವ ದಿನ, ತನಿಖೆ ವಿಧಾನ ಜೊತೆಗೆ ಅದಕ್ಕೆ ತಗಲುವ ವೆಚ್ಚ 20 ಲಕ್ಷ ರೂ. ಆಗುತ್ತೆ ಇದಕ್ಕೆ ನೀವು ಒಪ್ಪಿದ್ದರೆ ತನಿಖೆ ಮಾಡುತ್ತೇವೆ ಅಂತಾ ಬಿಬಿಎಂಪಿ ಮುಂದೆ ಪ್ರಪೋಸಲ್ ಇಡ್ತು. ಬಿಬಿಎಂಪಿ ಐಐಎಸ್ಸಿ ಪ್ರಪೋಸಲ್ ಅನ್ನು ಅಪ್ರೂವ್ ಮಾಡದೇ, ತನಿಖೆಗೆ ಸೂಚಿಸದೇ ಐಐಎಸ್ಸಿ ವರದಿ ಬರುತ್ತೆ ಅಂತಾ ಜನರಿಗೆ ಸುಳ್ಳು ಹೇಳುವಂತಾ ಕೆಲಸ ಮಾಡ್ತಾ ಇದೆ. ಐಐಎಸ್ಸಿ ತಜ್ಞರು ನಮ್ಮ ಪ್ರಪೋಸಲ್ ಅನ್ನು ಅಪ್ರೂವ್ ಮಾಡಿಲ್ಲ. ಹಾಗಾಗಿ ವರದಿ ನೀಡಲು ತನಿಖೆ ಶುರು ಮಾಡಿಲ್ಲ ಅಂತಾ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಎಲೆಕ್ಷನ್ ಎಫೆಕ್ಟ್: ಸಂಕ್ರಾಂತಿ ಹಬ್ಬಕ್ಕೆ ಜನರಿಗೆ ಗಿಫ್ಟೋ ಗಿಫ್ಟ್ – ಮನೆ ಮನೆಗೆ ತಟ್ಟೆ, ಲೋಟ, ಸ್ಪೂನ್ ಕೊಟ್ಟ MLA
ಐಐಎಸ್ಸಿ ತಜ್ಞರು ಹೇಳುವ ಪ್ರಕಾರ ರ್ಯಾಪಿಡ್ ರೋಡ್ ಅನ್ನು ಪರಿಶೀಲನೆ ಮಾಡಿ ವರದಿ ನೀಡಲು 3 ತಿಂಗಳು ಸಮಯ ಬೇಕಾಗುತ್ತೆ. ರ್ಯಾಪಿಡ್ ರೋಡ್ಗೆ ಹಾಕಿದ್ದ ಮಣ್ಣಿನ ಟೆಸ್ಟ್, ಕಾಂಕ್ರಿಟ್ ಟೆಸ್ಟ್ ಮಾಡಬೇಕು. ಯಾವೆಲ್ಲ ಮಿಶ್ರಣಗಳು ಹಾಕಿದ್ರು ಅದನ್ನು ಟೆಸ್ಟ್ ಮಾಡಬೇಕು ಈ ರೀತಿ ಸುಮಾರು 10 ರಿಂದ 12 ಟೆಸ್ಟ್ ಮಾಡಿ ಡಿಟೇಲ್ ವರದಿಯನ್ನು ನೀಡುತ್ತೇವೆ. ಬೇರೆ ಬೇರೆ ದೇಶಗಳಲ್ಲಿ ಈ ರೋಡ್ ಸಕ್ಸಸ್ ಆಗಿದೆ. ಆದರೆ ಇಲ್ಲಿ ಏಕೆ ಬಿರುಕು ಬಿಡ್ತು ಅಂತಾ ಚೆಕ್ ಮಾಡಬೇಕಾಗುತ್ತೆ. ನಮ್ಮ ಪ್ರಪೋಸಲ್ ಅನ್ನು ಅಪ್ರೂವ್ ಮಾಡಿದರೆ ತನಿಖೆ ಶುರು ಮಾಡುತ್ತೇವೆ ಅಂತಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಜೈಲಿನಲ್ಲಿದ್ದುಕೊಂಡೇ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊಲೆ ಬೆದರಿಕೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k