ಲಕ್ನೋ: ಹುಟ್ಟುಹಬ್ಬದ ಮುನ್ನಾ ದಿನವೇ ಅಲಹಾಬಾದ್‌ನ (Allahabad) ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (IIIT) ಪ್ರಥಮ ವರ್ಷದ ವಿಶೇಷಚೇತನ ವಿದ್ಯಾರ್ಥಿ ಹಾಸ್ಟೆಲ್‌ನ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶನಿವಾರ ರಾತ್ರಿ ಹಾಸ್ಟೆಲ್ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪ್ರಯಾಗರಾಜ್‌ನ (Prayagraj) ಝಲ್ವಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತೆಲಂಗಾಣದ ವಿಶೇಷಚೇತನ ವಿದ್ಯಾರ್ಥಿ ರಾಹುಲ್ ಮದಲ ಚೈತನ್ಯ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಹುಬ್ಬಳ್ಳಿ, ಧಾರವಾಡದಲ್ಲಿ ಗುಡುಗು ಸಹಿತ ಭಾರೀ ಮಳೆ – ಸಿಡಿಲು ಬಡಿದು ವೃದ್ಧ ಸಾವು
ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ರಾಹುಲ್ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ನಂತರ ಬೇಸರಗೊಂಡಿದ್ದ ಎಂದು ತಿಳಿದುಬಂದಿದೆ. ಘಟನೆಯ ತನಿಖೆಗಾಗಿ ಸಮಿತಿಯನ್ನು ರಚಿಸಲಾಗಿದೆ ಮತ್ತು ಏಳು ದಿನಗಳಲ್ಲಿ ವರದಿಯನ್ನು ಸಲ್ಲಿಸಲು ನಿರ್ದೇಶಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ: ಬಿರುಗಾಳಿಗೆ ಉರುಳಿ ಬಿದ್ದ ಮರ – 6 ಕ್ಕೂ ಹೆಚ್ಚು ಮಂದಿ ಸಾವು
ಪೊಲೀಸರ ಪ್ರಕಾರ, ಶನಿವಾರ ರಾತ್ರಿ 11:55ರ ಸುಮಾರಿಗೆ ರಾಹುಲ್ ಐಐಐಟಿ ಕ್ಯಾಂಪಸ್‌ನಲ್ಲಿರುವ ತನ್ನ ಹಾಸ್ಟೆಲ್‌ನ ಐದನೇ ಮಹಡಿಯಿಂದ ಹಾರಿದ್ದಾನೆ. ಮಾಹಿತಿ ದೊರೆತ ತಕ್ಷಣವೇ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ರಾಹುಲ್‌ನನ್ನು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ರಾಹುಲ್ ಕೊನೆಯುಸಿರೆಳೆದಿದ್ದಾನೆ ಎಂದು ಧೂಮಂಗಂಜ್ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಅಜೇಂದ್ರ ಯಾದವ್ ಹೇಳಿದ್ದಾರೆ. ಇದನ್ನೂ ಓದಿ: ಮಹಾಭಾರತದಲ್ಲಿ ಜಯಗಳಿಸಿದ್ದು ಕೃಷ್ಣಾರ್ಜುನರೇ ಹೊರತು ಶಕುನಿ, ದೃತರಾಷ್ಟ್ರರಲ್ಲ: ಯತ್ನಾಳ್
ಆತ್ಮಹತ್ಯೆಗೂ ಮುನ್ನ ಶನಿವಾರ ರಾತ್ರಿ ರಾಹುಲ್ ತನ್ನ ಕಿರಿಯ ಸಹೋದರ ಮತ್ತು ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಾಯಿಗೆ ಸಂದೇಶ ಕಳುಹಿಸಿದ್ದ. ಸಂದೇಶವನ್ನು ನೋಡಿ ಭಯಭೀತರಾದ ತಾಯಿ ಮತ್ತು ಆತನಿಗೆ ಕರೆ ಮಾಡಿದ್ದಾರೆ. ಆದರೆ ರಾಹುಲ್‌ನ ಫೋನ್ ಸ್ವಿಚ್‌ಆಫ್ ಆಗಿತ್ತು. ಭಾನುವಾರ ಕ್ಯಾಂಪಸ್ ತಲುಪಿದಾಗ ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿಯಿತು. ಈ ವೇಳೆ ರಾಹುಲ್ ಆರು ತಿಂಗಳಿನಿಂದ ತರಗತಿಗಳನ್ನು ತಪ್ಪಿಸಿದ್ದಾನೆ ಎಂದು ಸಂಸ್ಥೆ ನನಗೆ ತಿಳಿಸಿದೆ. ಇದಕ್ಕೂ ಮುನ್ನ ಕಾಲೇಜು ಆಡಳಿತ ಮಂಡಳಿ ಈ ಕುರಿತು ನನಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ರಾಹುಲ್ ತಾಯಿ ಸ್ವರ್ಣಲತಾ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಗೆ ಹೋಗುವ ಮುನ್ನ ಸಿಎಂ, ಡಿಸಿಎಂ ಮೀಟಿಂಗ್