ಮುಂಬೈ: ಭಾರತ ಅಂತರಾಷ್ಟ್ರೀಯ ಫಿಲ್ಮ್ ಅವಾಡ್ರ್ಸ್ (ಐಫಾ) ಬುಧವಾರ ರಾತ್ರಿ ಮುಂಬೈನಲ್ಲಿ ನಡೆದಿದೆ.
ಕಳೆದ ಬಾರಿ ಜೋಹಾನ್ಸ್ ಬರ್ಗ್, ಮ್ಯಾಡ್ರಿಡ್, ದುಬೈ, ಕೊಲಂಬೊ, ನ್ಯೂಯಾರ್ಕ್ ಅಂತಹ ನಗರಗಳಲ್ಲಿ ಐಫಾ ಕಾರ್ಯಕ್ರಮ ನಡೆದಿತ್ತು. ಆದರೆ ಈ ಬಾರಿ ಐಫಾ ಕಾರ್ಯಕ್ರಮ ಮುಂಬೈನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ನಟ ಅರ್ಜುನ್ ಕಪೂರ್ ಹಾಗೂ ಆಯುಷ್ಮಾನ್ ಖುರಾನಾ ನಿರೂಪಣೆ ಮಾಡಿದ್ದಾರೆ.
Advertisement
Advertisement
ಇತ್ತ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್, ರಣ್‍ವೀರ್ ಸಿಂಗ್, ವಿಕ್ಕಿ ಕೌಶಾಲ್, ಮಾಧುರಿ ದೀಕ್ಷಿತ್, ಕತ್ರಿನಾ ಕೈಫ್ ಹಾಗೂ ಸಾರಾ ಅಲಿ ಖಾನ್ ಸೇರಿದಂತೆ ಹಲವು ಕಲಾವಿದರು ನೃತ್ಯ ಪ್ರದರ್ಶನ ಮಾಡಿದ್ದಾರೆ. ‘ರಾಝಿ’ ಚಿತ್ರಕ್ಕೆ ನಟಿ ಅಲಿಯಾ ಭಟ್ ಅತ್ಯತ್ತಮ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡರೆ, ‘ಪದ್ಮಾವತ್’ ಚಿತ್ರಕ್ಕಾಗಿ ನಟ ರಣ್‍ವೀರ್ ಸಿಂಗ್ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ.
Advertisement
Advertisement
ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಮಾಹಿತಿ;
ಅತ್ಯುತ್ತಮ ಚಿತ್ರ: ರಾಝಿ
ಅತ್ಯುತ್ತಮ ಕತೆ: ಅಂಧಾಧುನ್
ಅತ್ಯುತ್ತಮ ನಟಿ: ಆಲಿಯಾ ಭಟ್(ರಾಝಿ)
ಅತ್ಯುತ್ತಮ ನಟ: ರಣ್‍ವೀರ್ ಸಿಂಗ್(ಪದ್ಮಾವತ್)
ಅತ್ಯುತ್ತಮ ನಿರ್ದೇಶಕ: ಶ್ರೀರಾಮ್ ರಾಘವನ್(ಅಂಧಾಧುನ್)
ಅತ್ಯುತ್ತಮ ಪೋಷಕ ನಟಿ: ಅದಿತಿ ರಾವ್ ಹೈದ್ರಿ(ಪದ್ಮಾವತ್)
ಅತ್ಯುತ್ತಮ ಪೋಷಕ ನಟ: ವಿಕ್ಕಿ ಕೌಶಾಲ್(ಸಂಜು)
ಅತ್ಯುತ್ತಮ ಡೆಬ್ಯೂ ನಟಿ: ಸಾರಾ ಅಲಿ ಖಾನ್(ಕೇದಾರ್‍ನಾಥ್)
ಅತ್ಯುತ್ತಮ ಡೆಬ್ಯೂ ನಟ: ಇಶಾನ್ ಖಟ್ಟರ್ (ದಢಕ್)
ಭಾರತೀಯ ಸಿನಿಮಾದ ಜೀವಮಾನ ಶ್ರೇಷ್ಠ ಪ್ರಶಸ್ತಿ: ಪ್ರಸಿದ್ಧ ನಟ ಮತ್ತು ಹಾಸ್ಯನಟ ಜಗದೀಪ್ ಜಾಫೆರಿ
20 ವರ್ಷಗಳ ಅತ್ಯುತ್ತಮ ನಟಿ: ದೀಪಿಕಾ ಪಡುಕೋಣೆ
20 ವರ್ಷಗಳ ಅತ್ಯುತ್ತಮ ನಟ: ರಣ್‍ಬೀರ್ ಕಪೂರ್
20 ವರ್ಷಗಳ ಅತ್ಯುತ್ತಮ ಮ್ಯೂಸಿಕ್: ಪ್ರೀತಂ
20 ವರ್ಷಗಳ ಅತ್ಯುತ್ತಮ ನಿರ್ದೇಶಕ: ರಾಜ್‍ಕುಮಾರ್ ಹಿರಾನಿ(ಸಂಜು)
20 ವರ್ಷಗಳ ಅತ್ಯುತ್ತಮ ಚಿತ್ರ: ಕಹೋ ನಾ ಪ್ಯಾರ್ ಹೇ
ಅತ್ಯುತ್ತಮ ಸಾಹಿತ್ಯ: ಅಮಿತಾಬ್ ಭಟ್ಟಾಚಾರ್ಯ(ದಡಕ್)
ಅತ್ಯುತ್ತಮ ಗಾಯಕ: ಅರ್ಜಿತ್ ಸಿಂಗ್ (ರಾಝಿ ಚಿತ್ರದ ‘ಎ ವತನ್’ ಹಾಡಿಗೆ)
ಅತ್ಯುತ್ತಮ ಗಾಯಕಿ: ಹರ್ಷದೀಪ್ ಕೌರ್ ಹಾಗೂ ವಿಭಾ ಸರಫ್ (ರಾಝಿ ಚಿತ್ರದ ದಿಲ್ಬರೋ ಹಾಡಿಗೆ)
ಅತ್ಯುತ್ತಮ ಸಂಗೀತ: ಸೋನು ಕೀ ಟೀಟು ಕೀ ಶಾದಿ