ನವದೆಹಲಿ: ಭಾರತ ಅಂತರಾಷ್ಟ್ರೀಯ ಫಿಲ್ಮ್ ಅವಾರ್ಡ್ಸ್ (ಐಫಾ) ಭಾನುವಾರ ರಾತ್ರಿ ಬ್ಯಾಂಕಾಕ್‍ನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರಾದ ರೇಖಾ, ರಣ್‍ಬೀರ್ ಕಪೂರ್, ವರುಣ್ ಧವನ್, ಅನಿಲ್ ಕಪೂರ್, ಅರ್ಜುನ್ ಕಪೂರ್, ಶ್ರದ್ಧಾ ಕಪೂರ್, ಕೃತಿ ಸನೋನ್, ಕಾರ್ತಿಕ್ ಆರ್ಯನ್, ಕರಣ್ ಜೋಹರ್ ಮುಂತಾದ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬ್ಯಾಂಕಾಕ್‍ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದಿವಂಗತ ಶ್ರೀದೇವಿ ಅವರಿಗೆ ‘ಮಾಮ್’ ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ‘ಹಿಂದಿ ಮೀಡಿಯಂ’ ಚಿತ್ರಕ್ಕಾಗಿ ನಟ ಇರ್ಫಾನ್ ಖಾನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನೂ ವಿದ್ಯಾ ಬಾಲನ್ ನಟನೆಯ ‘ತುಮಾರಿ ಸುಲು’ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. ಇದನ್ನೂ ಓದಿ: 63ನೇ ವಯಸ್ಸಿನಲ್ಲಿಯೂ 23ರ ನಟಿಯಂತೆ ಹೆಜ್ಜೆ ಹಾಕಿದ ರೇಖಾ-ವಿಡಿಯೋ ನೋಡಿ
Advertisement
ಐಫಾ ಕಾರ್ಯಕ್ರಮವನ್ನೂ ಖ್ಯಾತ ನಿರ್ದೇಶಕ ಕರಣ್ ಜೋಹರ್ ಹಾಗೂ ನಟ ರಿತೇಶ್ ದೇಶ್‍ಮುಕ್ ನಿರೂಪಣೆ ಮಾಡಿದ್ದಾರೆ. ಇನ್ನೂ 20 ವರ್ಷಗಳ ನಂತರ ಹಿರಿಯ ನಟಿ ರೇಖಾ ಸ್ಟೇಜ್ ಮೇಲೆ ಹೆಜ್ಜೆ ಹಾಕಿದ್ದಾರೆ.
Advertisement
She was the queen of grace and worthy of every praise. There's no doubt the award for Performance in a Leading Role – Female posthumously goes to the late #Sridevi#IIFA2018 #NEXAIIFAAwards pic.twitter.com/x88ClJgR1d
— IIFA (@IIFA) June 24, 2018
Advertisement
ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಮಾಹಿತಿ:
ಅತ್ಯುತ್ತಮ ಚಿತ್ರ: ತುಮಾರಿ ಸುಲು
ಅತ್ಯುತ್ತಮ ನಟಿ: ಶ್ರೀದೇವಿ (ಮಾಮ್)
ಅತ್ಯುತ್ತಮ ನಟ: ಇರ್ಫಾನ್ ಖಾನ್ (ಹಿಂದಿ ಮೀಡಿಯಂ)
ಅತ್ಯುತ್ತಮ ಪೋಷಕ ನಟಿ: ಮೆಹೆರ್ ವಿಜ್ (ಸಿಕ್ರೇಟ್ ಸೂಪರ್ ಸ್ಟಾರ್)
Advertisement
And it’s a wrap! #IIFA2018 has been a magical weekend with all our amazing stars. pic.twitter.com/XVbRczrGZG
— IIFA (@IIFA) June 25, 2018
ಅತ್ಯುತ್ತಮ ಪೋಷಕ ನಟ: ನವಾಜುದ್ದೀನ್ ಸಿದ್ದಿಕಿ (ಮಾಮ್)
ಅತ್ಯುತ್ತಮ ನಿರ್ದೇಶಕ: ಸಕೇತ್ ಚೌಧರಿ (ಹಿಂದಿ ಮೀಡಿಯಂ)
ಅತ್ಯುತ್ತಮ ಡೆಬ್ಯೂ ನಿರ್ದೇಶಕ: ಕೋನಕೋನ ಸೇನ್‍ಶರ್ಮಾ (ಎ ಡೆತ್ ಇನ್ ದ ಗುಂಜ್)
ಅತ್ಯುತ್ತಮ ಕಥೆ: ಅಮಿತ್ ವಿ ಮುಸರ್‍ಕರ್ (ನ್ಯೂಟನ್)
And the award for the Best Picture goes to #TumhariSulu#IIFA2018 pic.twitter.com/MIoehhJxQM
— IIFA (@IIFA) June 24, 2018
ಅತ್ಯುತ್ತಮ ಸಂಗೀತ ನಿರ್ದೇಶಕ: ಅಮಾಲ್ ಮಲ್ಲಿಕ್, ತನೀಶ್ಕ್ ಬಗಾಚಿ, ಅಕೀಲ್ ಸಚ್‍ದೇವ (ಬದ್ರಿನಾಥ್ ಕೀ ದುಲ್ಹನೀಯಾ)
ಅತ್ಯುತ್ತಮ ಸ್ಕ್ರೀನ್‍ಪ್ಲೇ: ನಿತೇಶ್ ತಿವಾರಿ, ಶ್ರೇಯಸ್ ಜೈನ್ (ಬರೇಲಿ ಕೀ ಬರ್ಫಿ)
ಅತ್ಯುತ್ತಮ ಗಾಯಕಿ: ಮೇಘನಾ ಮಿಶ್ರಾ (ಮೇ ಕೋನ್ ಹೂ- ಸಿಕ್ರೇಟ್ ಸೂಪರ್ ಸ್ಟಾರ್)
ಅತ್ಯುತ್ತಮ ಗಾಯಕ: ಅರ್ಜಿತ್ ಸಿಂಗ್ (ಹವಾಯೈ- ಜಬ್ ಹ್ಯಾರಿ ಮೆಟ್ ಸೇಜಲ್)
. @kritisanon & @arjunk26 performance has given us some serious on-stage chemistry goals! #IIFA2018 pic.twitter.com/AvFkhyvZFy
— IIFA (@IIFA) June 24, 2018
ಅತ್ಯುತ್ತಮ ನೃತ್ಯ ನಿರ್ದೇಶಕ: ವಿಜಯ್ ಗಂಗೂಲಿ ಹಾಗೂ ರುಯಿಲ್ ದೌಸಾನ್ ವರಿನ್‍ದಾನಿ (ಗಲ್ತಿ ಸೇ ಮಿಸ್ಟೇಕ್)
ಬೆಸ್ಟ್ ಸ್ಟೈಲ್ ಐಕಾನ್: ಕೃತಿ ಸನೋನ್
ಭಾರತೀಯ ಸಿನಿಮಾದ ಜೀವಮಾನ ಶ್ರೇಷ್ಠ ಪ್ರಶಸ್ತಿ: ಅನುಪಮ್ ಖೇರ್
A great story needs great melody. The award for Music Direction goes to @AmaalMallik @tanishkbagchi @AkhilNasha for Badrinath Ki Dulhania #IIFA2018 pic.twitter.com/QKI1Q66kOf
— IIFA (@IIFA) June 24, 2018