– ಸಮುದ್ರದಾಳದಲ್ಲೂ ಸೆಲ್ಯುಟ್ ಮಾಡಿ ಖದರ್ ತೋರಿಸಿದ ಡಿ.ರೂಪ
ಕಾರವಾರ: ಸದಾ ಇಲಾಖೆಯ ಕೆಲಸ-ಕಾರ್ಯದ ಒತ್ತಡದಲ್ಲಿದ್ದ ಕರ್ನಾಟಕದ ಮೊದಲ ಐಪಿಎಸ್ ಅಧಿಕಾರಿ ಡಿ. ರೂಪ ಅವರು ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರದ ನೇತ್ರಾಣಿ ನಡುಗಡ್ಡೆಯಲ್ಲಿ ಮಕ್ಕಳ ಸಮೇತ ಆಗಮಿಸಿ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈ ಮಾಡುವ ಮೂಲಕ ಬ್ಯುಸಿ ಮೂಡ್‍ನಿಂದ ಹೊರಬಂದು ಎಂಜಾಯ್ ಮಾಡಿದರು.
ಸದ್ಯ ರೈಲ್ವೆ ಇಲಾಖೆಯ ಕರ್ನಾಟಕ ಐಜಿಪಿ ಆಗಿರುವ ಡಿ. ರೂಪ ಮೌದ್ಗೀಲ್ ಅವರು ಮಗ ಹಾಗೂ ಪುತ್ರಿ ಜೊತೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ಆಗಮಿಸಿದ್ದಾರೆ. ಇಲ್ಲಿನ ನೇತ್ರಾಣಿ ಅಡ್ವೆಂಚರ್ ಸಂಸ್ಥೆಯಿಂದ ಅರಬ್ಬಿ ಸಮುದ್ರದ ಆಳಕ್ಕೆ ಇಳಿದು ಅಲ್ಲಿನ ವಿಸ್ಮಯ ಕಣ್ತುಂಬಿಕೊಂಡರು.
Advertisement
Advertisement
ಮೊದಲ ಬಾರಿ ಸ್ಕೂಬಾ ಡೈ ಮಾಡಿರುವುದಕ್ಕೆ ಡಿ. ರೂಪ ಸಂತಸ ವ್ಯಕ್ತಪಡಿಸಿದರು. ರೂಪ ಅವರು ಮಕ್ಕಳ ಜೊತೆ ಸಮಯ ಕಳೆದು ಅರಬ್ಬಿ ಸಮುದ್ರದಾಳದಲ್ಲಿ ಸ್ಕೂಬಾ ಡೈ ಮಾಡಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ಸಮುದ್ರದಾಳದಲ್ಲಿ ರೂಪ ಸೆಲ್ಯೂಟ್ ಮಾಡಿ ತಮ್ಮ ಖದರ್ ತೋರಿಸಿದ್ದಾರೆ. ಸದಾ ಕಳ್ಳರ, ಬ್ರಷ್ಟ ರಾಜಕಾರಣಿಗಳ ಬೆನ್ನು ಬಿದ್ದು ಕರ್ತವ್ಯ ನಿಷ್ಠೆ ಮೂಲಕ ಹೆಸರು ಮಾಡಿರುವ ಡಿ. ರೂಪ ಸಮುದ್ರದಾಳದಲ್ಲೂ ತಮ್ಮ ಕದರ್ ತೋರಿಸಿದರು.
Advertisement
ಮೊದಲ ಬಾರಿ ಸಮುದ್ರದಾಳದಲ್ಲಿ ಸ್ಕೂಬಾ ಡೈ ಮಾಡಿದ ಅವರು ಆಳದಲ್ಲಿ ಉಸಿರಾಡಲು ಕಷ್ಟವಾಗಿ ಸಮುದ್ರದಿಂದ ಹೊರಬಂದರು. ಆದರೆ ಛಲ ಬಿಡದ ಅವರು ಮೊತ್ತೊಮ್ಮ ಆಕ್ಸಿಜನ್ ತುಂಬಿದ ಸಿಲೆಂಡರ್ ಬೆನ್ನಿಗೆ ಹೊತ್ತು ಸಮುದ್ರದಾಳಕ್ಕೆ ಇಳಿದು ಈಜಾಡಿದರು. ಈ ವೇಳೆ ಸಮುದ್ರದಾಳದಲ್ಲಿ ಸೆಲ್ಯುಟ್ ಮಾಡಿ ತಮ್ಮ ಖದರ್ ತೋರಿಸಿದ ಡಿ.ರೂಪ ಬರೋಬ್ಬರಿ 45 ನಿಮಿಷ ಆಳ ಸಮುದ್ರದಲ್ಲಿ ಈಜಾಡಿ ವಿವಿಧ ಭಂಗಿಯಲ್ಲಿ ಕ್ಯಾಮರಕ್ಕೆ ಪೋಸ್ ಕೊಟ್ಟು ಸಮುದ್ರದಾಳದ ಸೌಂದರ್ಯವನ್ನು ಸವಿದರು.