ಬೆಂಗಳೂರು: ಯಡಿಯೂರಪ್ಪ (B.S Yediyurappa) ಅವರನ್ನು ಸಿಎಂ ಸ್ಥಾನದಿಂದ ಇಳಿಸಿದಾಗಿನಿಂದ ಪಕ್ಷದ (BJP) ಅವನತಿ ಶುರುವಾಗಿದೆ. ಆಗ ಆರಂಭಗೊಂಡ ಡೌನ್ ಫಾಲ್ ಈಗಲೂ ಮೇಲೇಳಲೇ ಇಲ್ಲ ಎಂದು ಮಾಜಿ ಶಾಸಕ ರಾಜೂಗೌಡ (Raju Gowda) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ಹಾಗೂ ವಿಜಯೇಂದ್ರ ಅವರು ಪಕ್ಷ ಕಟ್ಟುತ್ತಿದ್ದಾರೆ. ಸೋತವರ ಜೊತೆ ಈಗಲೂ ಬಿಎಸ್‍ವೈ ಮಾತನಾಡುತ್ತಿದ್ದಾರೆ. ಅವರ ಕಡೆಗಣನೆಯೇ ಪಕ್ಷದ ಕುಸಿತಕ್ಕೆ ಕಾರಣ ಎಂದಿದ್ದಾರೆ. ಇದನ್ನೂ ಓದಿ: INDIA ಹಿಂದೂ ಧರ್ಮವನ್ನ ದ್ವೇಷಿಸುತ್ತಿದೆ, ಪರಂಪರೆಯ ಮೇಲೆ ದಾಳಿ ಮಾಡ್ತಿದೆ: ಶಾ ಗುಡುಗು
Advertisement
ಬಿ.ಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ವಿಚಾರವಾಗಿ, ನಮ್ಮ ರೇಣುಕಣ್ಣ ಅವರು ಯಾವ ಬಾಲ್‍ಗೆ ಫೋರ್, ಸಿಕ್ಸ್ ಹೊಡೀತಾರೆ ಎಂದು ಗೊತ್ತಾಗುವುದಿಲ್ಲ. ಫಿಲ್ಟರ್ ಇಲ್ಲದೇ ಮಾತನಾಡುತ್ತಾರೆ. ರೇಣುಕಣ್ಣನನ್ನು ಯಾರೂ ಖರೀದಿ ಮಾಡಲು ಆಗುವುದಿಲ್ಲ. ಅವರೇ ಬೇಕಾದರೆ ಎಲ್ಲರನ್ನೂ ಖರೀದಿ ಮಾಡುತ್ತಾರೆ. ಅವರು ಕಾಂಗ್ರೆಸ್‍ಗೆ ಹೋಗುವುದಿಲ್ಲ ಎಂದಿದ್ದಾರೆ.
Advertisement
Advertisement
ಆಪರೇಷನ್ ಹಸ್ತ ವದಂತಿ ವಿಚಾರವಾಗಿ, ಆಪರೇಷನ್ ಆಗಲೂ ನನಗೆ ಕ್ಯಾನ್ಸರ್ ಗಡ್ಡೆ ಬೆಳೆದಿಲ್ಲ ಅಥವಾ ಯಾವ ರೋಗವೂ ಬಂದಿಲ್ಲ. ಸಹಜವಾಗಿ ಸುದೀಪ್ ಹುಟುಹಬ್ಬದ ಪಾರ್ಟಿಯಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದೇನೆ. . ಈ ವೇಳೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ನನಗೆ ಕಾಂಗ್ರೆಸ್‍ನಿಂದ ಆಹ್ವಾನ ಬಂದಿಲ್ಲ. ಯಾರೂ ಕೂಡ ಈ ವಿಚಾರವಾಗಿ ಸಂಪರ್ಕಿಸಿಲ್ಲ. ನಾನು ಆಪರೇಷನ್ ಆಗುವ ಪ್ರಶ್ನೆಯೇ ಇಲ್ಲ. ಬಿಜೆಪಿಯನ್ನು ತೊರೆಯುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
Advertisement
ಈ ವೇಳೆ ಶಿವಕುಮಾರ್ ಅವರು, ಚೆನ್ನಾಗಿ ಕೆಲಸ ಮಾಡಿಯೂ ಯಾಕೆ ಸೋತಿದ್ದೀರಿ ಎಂದು ವಿಚಾರಿಸಿದರು. ಇದಕ್ಕೆ ನಿಮ್ಮ ಪ್ರಭಾವ ಹಾಗೂ ಸಿದ್ದರಾಮಯ್ಯ ಅವರ ಪ್ರಭಾವ ಎಂದಿದ್ದೇನೆ. ನಾವು ಮೊದಲಿನಿಂದಲೂ ಆತ್ಮೀಯರು. ಪಾರ್ಟಿಯಿಂದ ಅವರು ಬೇಗನೆ ಹೋದರು. ಇದು ಬೆಳಗ್ಗೆ ಹೆಚ್ಚು ಸುದ್ದಿಯಾಗಿದೆ. ನಮ್ಮದು ತಪ್ಪಲ್ಲ, ಆಪರೇಷನ್ ಹಸ್ತ ಅನ್ನೋ ವಿಚಾರವೇ ಹೆಚ್ಚಿದೆ. ಗೆದ್ದವರು ಗೆಲುವಿನ ಮಜಾ ಪಡೀತಿದ್ದಾರೆ. ನಾವು ಸೋತ ಮಜಾ ಪಡೀತಿದ್ದೇವೆ ಅಷ್ಟೇ. ಗೆಲುವಿನ ಮಜವೇ ಯಾವಾಗಲೂ ಇರಬಾರದು ಎಂದಿದ್ದಾರೆ.
ಪಕ್ಷದಲ್ಲಿ ಅಸಮಾಧಾನ ವಿಚಾರವಾಗಿ, ಬೇಸರ ಇರೋದು ನಿಜ. ಚರ್ಚೆ ವೇಳೆ ವಿಪಕ್ಷ ನಾಯಕ ಬೇಗ ಆಗಬೇಕು ಎಂದು ಹೇಳಿದ್ದೇವೆ. ಬೇಗ ಮಾಡಿದಾಗ ನಮಗೂ ಅನುಕೂಲ ಆಗಲಿದೆ. ವಿಪಕ್ಷ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ಶೀಘ್ರವೇ ತುಂಬಬೇಕಿದೆ. ವಿಪಕ್ಷ ನಾಯಕನ ಜೊತೆಯಲ್ಲಿ ವಿಪ್ ಕೂಡ ಬರಲಿದ್ದಾರೆ. ನಾಲ್ಕೈದು ಹುದ್ದೆ ಕೂಡ ಜೊತೆಯಲ್ಲೇ ಬರಲಿದೆ. ಬೇಗನೇ ನೇಮಕ ಮಾಡುತ್ತಾರೆ. ಈ ವಿಚಾರದಲ್ಲಿ ಬಾಂಬೆ ಟೀಮ್ ಎನ್ನುವುದು ತಪ್ಪು. ಅವರು ಬಾರದಿದ್ದರೆ ನಾವು ಅಧಿಕಾರ ಹಿಡಿಯಲು ಆಗುತ್ತಿರಲಿಲ್ಲ. ಕಾಂಗ್ರೆಸ್ ಸಂಪರ್ಕದಲ್ಲಿ ಇರದೇ ಸಂತೋಷ್‍ಜೀ ಸುಮ್ಮನೆ ಹೇಳಿಲ್ಲ. ರಾಯರೆಡ್ಡಿ ಅವರ ಲೆಟರ್ ಬಂದ ಮೇಲೆ ಚರ್ಚೆ ಶುರುವಾಯ್ತು ಎಂದರು.
ಪಕ್ಷ ನನಗೆ ಎಲ್ಲಾ ಸ್ಥಾನಮಾನ ಕೊಟ್ಟಿದೆ. ಪಕ್ಷ ಅಧಿಕಾರದಲ್ಲಿ ಇರುವಾಗ ಅಷ್ಟೇ ಅಲ್ಲ. ಅಧಿಕಾರದಲ್ಲಿ ಇಲ್ಲದಿದ್ದಾಗ ಸಹ ನಾವು ಪಕ್ಷದ ಜೊತೆ ಇರಬೇಕು ಎಂದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ರಾಯಚೂರು ಕ್ಷೇತ್ರದಿಂದ ಸ್ಪರ್ಧಿಸುವ ವದಂತಿ ಬಗ್ಗೆ, ಕ್ಷೇತ್ರದಲ್ಲಿ ನಮ್ಮ ಎಂಪಿ ರಾಜಾ ಅಮರೇಶ್ವರ ನಾಯ್ಕ ಅವರು ಒಳ್ಳೇಯ ಕೆಲಸ ಮಾಡಿದ್ದಾರೆ. ಈ ಬಾರಿಯೂ ಅವರೇ ಅಭ್ಯರ್ಥಿ ಆಗಲಿ ಎಂದು ಕೇಳಿದ್ದೇವೆ. ನಾವೆಲ್ಲ ಅವರ ಪರ ಕೆಲಸ ಮಾಡುತ್ತೇವೆ. ಕ್ಷೇತ್ರದಿಂದ ನನ್ನ ಹೆಸರೂ ಚರ್ಚೆಯಲ್ಲಿದೆ. ಆದರೆ ನಮ್ಮ ಹಾಲಿ ಸಂಸದರಿಗೇ ಟಿಕೆಟ್ ಕೊಡಲಿ. ಇನ್ನೂ ಸಮಯ ಇದೆ, ಮುಂದೆ ನೋಡೋಣ ಈಗಲೇ ಅದರ ಬಗ್ಗೆ ಚರ್ಚೆ ಮಾಡುವುದು ಬೇಡ ಎಂದಿದ್ದಾರೆ. ಇದನ್ನೂ ಓದಿ: ಆಪರೇಷನ್ ಹಸ್ತ ವದಂತಿ ಬೆನ್ನಲ್ಲೇ ಬಿಜೆಪಿ ನಾಯಕರ ಜೊತೆ ಡಿಕೆಶಿ ಆಪ್ತ ಮಾತುಕತೆ!
Web Stories