ಆಕ್ಟಿಂಗ್ ಬೇಕಾದರೆ ಬಿಡ್ತೀನಿ, ಸೆ..* ಬಿಡೋಕೆ ಆಗಲ್ಲ: ಶಾಹಿದ್ ಕಪೂರ್

Public TV
1 Min Read
shahid kapoor 3

ಬಾಲಿವುಡ್ ಖ್ಯಾತ ನಟ ಶಾಹಿದ್ ಕಪೂರ್ (Shahid Kapoor)  ತಮ್ಮ ಪಕ್ಕದಲ್ಲಿ ಸೋನಾಕ್ಷಿ ಸಿನ್ಹ (Sonakshi Sinha) ಕೂರಿಸಿಕೊಂಡು ಅಚ್ಚರಿ ಎನ್ನುವಂತೆ ಹೇಳಿಕೆ ನೀಡಿದ್ದಾರೆ. ಕಾಫಿ ವಿತ್ ಕರಣ್ ಶೋನಲ್ಲಿ ಅವರು ಖುಲ್ಲಂ ಖುಲ್ಲಾ ಮಾತನಾಡಿದ್ದು, ಕರಣ್ ಜೋಹಾರ್ (Karan Johar) ಕೇಳಿದ ಪ್ರಶ್ನೆಗೆ ಯಾವುದೇ ಮುಜುಗರ ಇಲ್ಲದಂತೆ ಉತ್ತರಿಸಿದ್ದಾರೆ. ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹರಿದಾಡುತ್ತಿದೆ.

shahid kapoor 4

ಕಾಫಿ ವಿತ್ ಕರಣ್ ಶೋನಲ್ಲಿ ಫಿಲ್ಟರ್ ಇಲ್ಲದ ಪ್ರಶ್ನೆಗಳನ್ನು ಕೇಳುತ್ತಾರೆ ಕರಣ್. ಲವ್, ಸೆಕ್ಸ್, ಬ್ರೇಕ್, ಗಾಸಿಪ್ ಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ ಕರಣ್. ಶಾಹಿದ್ ಕಪೂರ್ ಮತ್ತು ಸೋನಾಕ್ಷಿ ಸಿನ್ಹಾ ಅತಿಥಿಯಾಗಿ ಬಂದ ಎಪಿಸೋಡ್ ನಲ್ಲಿ ಕರಣ್, ಶಾಹಿತ್ ಅವರಿಗೆ ಎರಡು ಪ್ರಶ್ನೆಗಳನ್ನು ಇಡುತ್ತಾರೆ. ಆಕ್ಟಿಂಗ್ ಮತ್ತು ಸೆಕ್ಸ್ ಯಾವುದನ್ನು ಬಿಡ್ತೀರಿ ಎಂದು ಕೇಳ್ತಾರೆ.

 

ಯಾವುದೇ ಅಳುಕಿಲ್ಲದೇ ಆಕ್ಟಿಂಗ್ ಬಿಡ್ತೀನಿ ಎಂದು ಹೇಳುವ ಮೂಲಕ ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ. ಈ ಉತ್ತರದಿಂದ ಕ್ಷಣಕಾಲ ಸೋನಾಕ್ಷಿ ಕಕ್ಕಾಬಿಕ್ಕಿಯಾಗುತ್ತಾರೆ. ಅದರಲ್ಲಿ ತಪ್ಪೇನಿದೆ ಎನ್ನುವಂತೆ ನೋಡುತ್ತಾರೆ ಶಾಹಿದ್. ಈ ವಿಡಿಯೋ ವೈರಲ್ ಆಗುವುದರ ಜೊತೆಗೆ ಸಾಕಷ್ಟು ಕಾಮೆಂಟ್ ಗಳು ಬಂದಿವೆ.

Share This Article