ಬೆಂಗಳೂರು: ನಗರದ ರಸ್ತೆಗಳಲ್ಲಿ ಕಸ (Garbage) ಎಸೆದರೆ ಇನ್ನು ಮುಂದೆ ನಿಮ್ಮ ಮನೆಗೆ ಬಂದು ಬಿಬಿಎಂಪಿ (BBMP) ಸಿಬ್ಬಂದಿ ದಂಡ ವಿಧಿಸುತ್ತಾರೆ.
ಹೊಸಕೆರೆಹಳ್ಳಿಯಲ್ಲಿ ಸರವಣ ಎಂಬವರು ರಸ್ತೆ ಬದಿ ಕಸ ಎಸೆದು ಹೋಗಿದ್ದರು. ಕಸ ಎಸೆದು ಹೋಗುತ್ತಿರುವ ದೃಶ್ಯ ಸಮಿಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
Advertisement
ಈ ದೃಶ್ಯದ ಆಧಾರದ ಮೇಲೆ ಬಿಬಿಎಂಪಿ ಹೆಲ್ತ್ ಸೂಪರ್‌ವೈಸರ್ ಲೋಕೇಶ್ ಅವರು ಸರವಣ ಮನೆಗೆ ತೆರಳಿ 100 ರೂ. ದಂಡ ವಿಧಿಸಿದ್ದಾರೆ.