ಕೋಲ್ಕತ್ತಾ: ಬಂಗಾಳದಲ್ಲಿ ನನ್ನನ್ನು ಗುರಿಯಾಗಿಸಿಕೊಂಡು ನೀವು ದಾಳಿ ಮಾಡಿ. ಆದರೆ ಜನರ ಮೇಲೆ ಯಾವುದೇ ವೈಯಕ್ತಿಕ ದಾಳಿ ನಡೆಸಿದರೆ ನಾನು ಇಡೀ ರಾಷ್ಟ್ರವನ್ನು ನಡುಗಿಸುತ್ತೇನೆ. ಚುನಾವಣೆಯ ನಂತರ ನಾನು ಇಡೀ ಭಾರತವನ್ನು ಸುತ್ತುತ್ತೇನೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಬಿಜೆಪಿ(BJP) ವಿರುದ್ಧ ಗುಡುಗಿದ್ದಾರೆ.
ಬೊಂಗಾನ್‌ನಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವಿರೋಧಿ ರ‍್ಯಾಲಿ ನಡೆಸಿ ಮಾತನಾಡಿದ ಅವರು, ಚುನಾವಣಾ ಆಯೋಗವು ಒಂದೇ ಹೆಸರನ್ನು ಅಳಿಸುವ ಅಧಿಕಾರವನ್ನು ಹೊಂದಿಲ್ಲ. ನೀವು ಯಾವುದೇ ಕಾರಣಕ್ಕೂ ಭಯಪಡಬೇಡಿ ಎಂದು ಭರವಸೆ ನೀಡಿದರು.
North 24 Parganas, West Bengal: CM Mamata Banerjee says, “2029 will be scary; your government will not last. Where will you run, Shakuni mamas? Plan your escape route from now. If you attack the people of Bengal, you are attacking me. If you do that, I will shake the entire… pic.twitter.com/XVnLgCrjPM
— IANS (@ians_india) November 25, 2025
ಎಸ್‌ಐಆರ್ ನಡೆಸಲು 3 ವರ್ಷಗಳು ಬೇಕಾಗುತ್ತದೆ. 2002 ರಲ್ಲಿ ಕೊನೆಯದಾಗಿ ಎಸ್‌ಐಆರ್ ನಡೆಸಲಾಯಿತು. ನಾವು ಎಂದಿಗೂ ಎಸ್‌ಐಆರ್ ಅನ್ನು ವಿರೋಧಿಸಲಿಲ್ಲ. ಆದರೆ ಈಗ ಬಿಜೆಪಿ ತಮ್ಮ ಪಕ್ಷದ ಕಚೇರಿಯಿಂದ ಪಟ್ಟಿಯನ್ನು ಸರಿಪಡಿಸುತ್ತಿದೆ ಮತ್ತು ಚುನಾವಣಾ ಆಯೋಗವು ಅದಕ್ಕೆ ಅನುಗುಣವಾಗಿ ನಿರ್ಧರಿಸುತ್ತದೆ. ಚುನಾವಣಾ ಆಯೋಗ ಬಿಜೆಪಿಯ ಆಯೋಗವಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ದರೋಡೆ ಕೇಸಲ್ಲಿ ಮತ್ತೆ 47 ಲಕ್ಷ ಸೀಜ್ – ಒಟ್ಟು 7.01 ಕೋಟಿ ಪತ್ತೆ
ಬಂಗಾಳದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಅಲ್ಲಿ ಪ್ರತಿಯೊಬ್ಬ ಮತದಾರರು ಡಿಸೆಂಬರ್ 4 ರೊಳಗೆ ಭಾಗಶಃ ಮೊದಲೇ ಭರ್ತಿ ಮಾಡಿದ ವಿಶಿಷ್ಟ ಎಣಿಕೆ ನಮೂನೆಯನ್ನು ತಮ್ಮ ಬೂತ್ ಮಟ್ಟದ ಅಧಿಕಾರಿಗೆ (BLO) ಸಲ್ಲಿಸಬೇಕು. ಕರಡು ಪಟ್ಟಿಯನ್ನು ಡಿಸೆಂಬರ್ 9 ರಂದು ಚುನಾವಣಾ ಆಯೋಗ ಪ್ರಕಟಿಸಲಿದೆ.

