ನಮ್ಮ ವಿರುದ್ಧ ಮಾತಾಡಿದ್ರೆ ಮೂಳೆ ಮುರಿತೀವಿ: ಟಿಎಂಸಿ ಮುಖಂಡನಿಂದ ಜನರಿಗೆ ಧಮ್ಕಿ

Public TV
1 Min Read
West Bengal TMC Leader Threat

ಕೋಲ್ಕತ್ತಾ: ನಮ್ಮ ವಿರುದ್ಧ ಮಾತನಾಡಿದರೆ ಕೈಗಳನ್ನು ಕತ್ತರಿಸಿ ಹಾಕುತ್ತೇವೆ ಎಂದು ಬಂಗಾಳದ (West Bengal) ಟಿಎಂಸಿ (TMC) ಮುಖಂಡನೊಬ್ಬ ಜನರಿಗೆ ಧಮ್ಕಿ (Threat) ಹಾಕಿದ ಘಟನೆ ನಡೆದಿದೆ.

ಭೀರ್‌ಭುಮ್ ಜಿಲ್ಲೆಯ ಮಯುರೇಶ್ವರ್ ಪಂಚಾಯತ್ ಟಿಎಂಸಿ ಮುಖಂಡ ಜಟಿಲೇಶ್ವರ್ ಮೊಂಡಲ್ ಎಂಬಾತ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಈ ರೀತಿಯಾಗಿ ಜನರಿಗೆ ಬೆದರಿಕೆ ಹಾಕಿದ್ದಾನೆ. ಕೇಂದ್ರ ಪಡೆಗಳು ನಿಮ್ಮಪ್ಪನ ಮುದ್ದಿನ ಪ್ರಾಣಿಗಳಲ್ಲ. ಯಾವಾಗ್ಲೂ ಇಲ್ಲೇ ಇರಲ್ಲ. ಎಲೆಕ್ಷನ್ ಆದಮೇಲೆ ಇಲ್ಲಿಂದ ಹೋಗುತ್ತವೆ. ಗ್ರಾಮ ಪಂಚಯತ್, ಪಂಚಾಯತ್ ಸಮಿತಿ, ಜಿಲ್ಲಾ ಪರಿಷತ್, ವಿಧಾನಸಭೆ ಹೀಗೆ ಎಲ್ಲವೂ ನಮ್ಮ ನಿಯಂತ್ರಣದಲ್ಲಿವೆ. ನೀವು ನಮ್ಮ ವಿರುದ್ಧ ತಿರುಗಿಬೀಳಲು ನೋಡಿದರೆ ನಿಮಗೇನು ಸಿಗಲ್ಲ. ನಿಮ್ಮ ಮೂಳೆ ಮುರಿತೀವಿ ಎಂದು ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಇಸ್ರೋ ರಾಕೆಟ್‌ನಲ್ಲಿ ಚೀನಾ ಧ್ವಜ – ಭಾರತದ ಸಾಧನೆ ಒಪ್ಪಿಕೊಳ್ಳಲು ಡಿಎಂಕೆಗೆ ಆಗಲ್ಲ ಎಂದ ಮೋದಿ

ನೀವು ಠಾಣೆ, ಕೋರ್ಟ್ ಮೆಟ್ಟಿಲು ಹತ್ತಿದರೂ ಅಷ್ಟೇ ನಮ್ಮನ್ನೇನು ಮಾಡಲು ಸಾಧ್ಯವಿಲ್ಲ. ನಿಮಗೆ ಟಿಎಂಸಿ ಇಷ್ಟ ಇಲ್ಲ ಅಂದರೆ ಮನೆಯಲ್ಲಿರಿ. ನಿಮ್ಮ ವೋಟ್ ನಮಗೆ ಅಗತ್ಯ ಇಲ್ಲ. ಆದ್ರೆ ನಮ್ಮ ವಿರುದ್ಧ ಅಪಪ್ರಚಾರ ಮಾಡಬೇಡಿ. ಇದು ನಿಮಗೆ ಗುರುಮಂತ್ರ. ಸರಿಯಾಗಿ ಕೇಳಿಸ್ಕೊಳಿ ಎಂದು ಮೊಂಡಾಲ್ ಅಬ್ಬರಿಸಿದ್ದಾನೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ಬಿಜೆಪಿಯ ನಾಯಕ ಸುವೆಂದು ಅಧಿಕಾರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಕೇಸ್‌ – ಅಖಿಲೇಶ್‌ ಯಾದವ್‌ಗೆ ಸಿಬಿಐ ಸಮನ್ಸ್‌

Share This Article