– 625 ಅಂಕಗಳಿಗೆ ಕನಿಷ್ಠ 206 ಅಂಕ ಕಡ್ಡಾಯ
ಬೆಂಗಳೂರು: ಇನ್ಮುಂದೆ ಎಸ್‌ಎಸ್‌ಎಲ್‌ಸಿಯಲ್ಲಿ (SSLC) 33% ಅಂಕ ಪಡೆದರೆ ಉತ್ತೀರ್ಣ (Pass) ಎಂದು ಘೋಷಿಸಲಾಗುವುದು ಎಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತೀರ್ಣ ನಿಯಮ ಬದಲಾವಣೆ ಸಂಬಂಧ ಸರ್ಕಾರ ಕರಡು ಆದೇಶ ಹೊರಡಿಸಿದೆ.
ಈಗ ಇರುವ ಉತ್ತೀರ್ಣ ನಿಯಮ ಬದಲಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಆಂತರಿಕ ಮೌಲ್ಯಮಾಪನ, ಬಾಹ್ಯ ಪರೀಕ್ಷೆ ಸೇರಿ 33% ಅಂಕ ಗಳಿಸಿದ್ರೆ ವಿದ್ಯಾರ್ಥಿಗಳು ಪಾಸ್ ಎಂದು ಪರಿಗಣಿಸಲಾಗುವುದು. 625 ಅಂಕಗಳಿಗೆ ಕನಿಷ್ಠ 206 ಅಂಕ ಗಳಿಸಬೇಕು. ಜೊತೆಗೆ ಆಯಾ ವಿಷಯದಲ್ಲಿ ಒಟ್ಟು ಅಂಕಗಳಲ್ಲಿ ಕನಿಷ್ಠ 30% ಅಂಕಗಳು ಪಡೆದರೆ ಅಂತಹ ವಿದ್ಯಾರ್ಥಿಯೂ ಪಾಸ್ ಅಂತ ಘೋಷಣೆ ಮಾಡಲಾಗುತ್ತದೆ ಎಂದು ರಾಜ್ಯ ಪತ್ರದಲ್ಲಿ ತಿಳಿಸಿದೆ. ಇದನ್ನೂ ಓದಿ: WWE ಲೆಜೆಂಡ್, ಕುಸ್ತಿಪಟು ಹಲ್ಕ್ ಹೊಗನ್ ನಿಧನ
15 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಆಕ್ಷೇಪಣೆ ಸಲ್ಲಿಕೆ ಬಳಿಕ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ. ಇದನ್ನೂ ಓದಿ: 1988ರ ರೇಪ್ ಕೇಸ್‌ಗೆ ಶಿಕ್ಷೆ ಪ್ರಕಟಿಸಿದ ಸುಪ್ರೀಂ – 53 ವರ್ಷದ ವ್ಯಕ್ತಿ ಈಗ ಬಾಲಾಪರಾಧಿ