ಯಾದಗಿರಿ: ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲೀನ್ (Udhayanidhi Stalin) ಅವಹೇಳನಕಾರಿ ಹೇಳಿಕೆಗೆ ಯಾದಗಿಯಲ್ಲಿ (Yadagiri) ಶ್ರೀ ರಾಮಸೇನೆ (Sriramasene) ರಾಷ್ಟ್ರೀಯ ಗೌರಾವಾಧ್ಯಕ್ಷ ಆಂದೋಲ ಶ್ರೀ (Andola Shree) ತೀವ್ರವಾಗಿ ಖಂಡಿಸಿದ್ದಾರೆ.
ನಿಮಗೆ ತಾಕತ್ತು ದಮ್ಮು ಇದ್ರೇ ಸನಾತನ ಧರ್ಮದ ಬದಲು ಇಸ್ಲಾಂ ಭಯೋತ್ಪಾದಕತೆ, ಕ್ರಿಶ್ಚಿಯನ್ನರ್ ಬಗ್ಗೆ ಮಾತನಾಡಿ ಎಂದು ನೇರವಾಗಿ ಸವಾಲ್ ಎಸೆದಿದ್ದಾರೆ. ಕೇವಲ ಸನಾತನ ಭಾರತೀಯ ಧರ್ಮವನ್ನು ಟೀಕಿಸುವುದು ಶೋಭೆ ತರುವಂತದ್ದಲ್ಲ ಎಂದಿದ್ದಾರೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ವಿರುದ್ಧ ಆಕ್ರೋಶ; ಆನ್‌ಲೈನ್ ಮೂಲಕ ದೂರು ದಾಖಲಿಸಲು ಮುಂದಾದ ಹಿಂದೂ ಸಂಘಟನೆಗಳು
ಸನಾತನ ಧರ್ಮ ನಾಶಕ್ಕೆ ಯತ್ನಿಸಿ ಮುಸ್ಲಿಮರು, ಕ್ರಿಶ್ಚಿಯನ್ ಇದೇ ಮಣ್ಣಲಿ ಹೆಣವಾಗಿದ್ದಾರೆ. ನಿಮ್ಮ ಅಜ್ಜ ಕರುಣಾನಿಧಿ ಸಹ ಶ್ರೀರಾಮ ಹಾಗೂ ಭಾರತೀಯ ಸಂಸ್ಕೃತಿ ಬಗ್ಗೆ ಟೀಕೆ ಮಾಡಿ ಏನೂ ಸಾಧಿಸೋಕೆ ಆಗಲಿಲ್ಲ. ನಿಮ್ಮಿಂದಲೂ ಸಾಧ್ಯವಿಲ್ಲ ಅಂತ ಉದಯನಿಧಿ ವಿರುದ್ಧ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮಿಗಳು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಾ ರಾಜ್ಯದ ಮಂತ್ರಿಗಳು ಜಾತ್ಯಾತೀತ ಪಕ್ಷ ಅಂದುಕೊಂಡು ಸನಾತನ ಧರ್ಮದ ಬಗ್ಗೆ ನಾಲಿಗೆ ಉದ್ದುದ್ದ ಚಾಚುತ್ತಿದ್ದಾರೆ. ದುರಹಂಕಾರದಿಂದ ನಾಲಿಗೆ ಹರಿಬಿಟ್ಟು ಸನಾತನ ಧರ್ಮದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ತಮಿಳುನಾಡಿನ ಸಿಎಂ ಸ್ಟಾಲೀನ್ ಪುತ್ರ ಉದಯನಿಧಿ ಸ್ಟಾಲೀನ್ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಇದ್ದಂಗೆ, ಅದನ್ನು ನಿರ್ಮೂಲನೆ ಮಾಡಬೇಕು ಅಂತ ಸನಾತನ ಧರ್ಮಕ್ಕೆ ನಿಂದನೆ ಮಾಡಿದ್ದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]