ಪ್ರಜ್ವಲ್ ದೇವರಾಜ್ (Prajwal Devaraj) ಕರಾವಳಿ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕೊನೆ ಹಂತದ ಚಿತ್ರೀಕರಣವನ್ನ ಬೆಂಗಳೂರಿನ (Bengaluru) ದೊಡ್ಡಾಲದ ಮರದ ಸುತ್ತಮುತ್ತ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಈ ವೇಳೆ ಪಬ್ಲಿಕ್ ಟಿವಿ ಜೊತೆ ಎಕ್ಸ್‌ಕ್ಯೂಸಿವ್ ಮಾತುಗಳನ್ನಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಗ್ತಿರುವ ಮುಜುಗರದ ಸಂದೇಶಗಳು, ಟ್ರೋಲ್ಸ್ ಹಾಗೂ ಮೀಮ್ಸ್‌ಗಳ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇತ್ತೀಚೆಗೆ ನಟಿ ರಮ್ಯಾಗೆ ಕೆಲವರು ಅಶ್ಲೀಲವಾಗಿ ಕಮೆಂಟ್ ಮಾಡಿದ್ದರು. ಅದಕ್ಕೆ ತಕ್ಕ ಶಾಸ್ತಿ ಆಗಿದೆ, ಅದೇ ಕಾರಣಕ್ಕೆ ಕೆಲವರು ಕಂಬಿ ಹಿಂದೆ ಕುಳಿತಿದ್ದಾರೆ. ಮತ್ತೊಂದೆಡೆ ಮೊನ್ನೆಯಷ್ಟೇ ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬ ಆಚರಣೆ ವೇಳೆ ತಮ್ಮ ಅಭಿಮಾನಿಗಳಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯಾರೇ ಎಷ್ಟೇ ಕೆಟ್ಟದಾಗಿ ನಿಂದಿಸಿದರೂ ಯಾರೂ ಪ್ರತಿಕ್ರಿಯೆ ನೀಡಬೇಡಿ. ನಮ್ಮ ಅಭಿಮಾನಿಗಳು ಯಾರಿಗೂ ಕೆಟ್ಟದಾಗಿ ಕಾಮೆಂಟ್ ಮಾಡಬೇಡಿ. ನಾನೇ ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ಅಂತಾದ್ರಲ್ಲಿ ನೀವ್ಯಾಕೆ ಆ ಬಗ್ಗೆ ತಲೆಕೆಡಿಸಿಕೊಳ್ಳುತ್ತೀರಾ? ಅದರ ಬದಲಾಗಿ ಯಾರಿಗಾದರೂ ಸಹಾಯವಾಗುವ ಒಂದೆರಡು ಒಳ್ಳೆಯ ಕೆಲಸ ಮಾಡಿ ಎಂದು ತಮ್ಮ ಅಭಿಮಾನಿಗಳಿಗೆ ಕಿವಿಮಾತನ್ನ ಹೇಳಿದ್ದರು.ಇದನ್ನೂ ಓದಿ: ಕಲ್ಟ್ ಸಿನಿಮಾದ ಅಯ್ಯೊ ಶಿವನೇ ಹಾಡಿನ ರಿಲೀಸ್ ಡೇಟ್ ಫಿಕ್ಸ್
ಕೆಲತಿಂಗಳ ಹಿಂದೆ ಪ್ರಜ್ವಲ್ ದೇವರಾಜ್ ಮಾಧ್ಯಮಕ್ಕೆ ಹೇಳಿಕೆಕೊಟ್ಟ ವೇಳೆ ಅವರಿಗೂ ಕೆಲವು ಕಿಡಿಗೇಡಿಗಳು ಮಾಡಿದ ಹೇಯ ಕೆಲಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಸಹೋದರಿಗೆ ಕೆಲವು ಕಿಡಿಗೇಡಿಗಳು ಅಶ್ಲೀಲ ಫೋಟೋಗಳನ್ನ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದರಂತೆ. ಇದಕ್ಕೆ ಕಾನೂನು ರೀತಿಯಲ್ಲಿ ಕಂಪ್ಲೆಂಟ್ ಮಾಡಲಾಗಿದ್ದು, ಅವರನ್ನ ಪತ್ತೆಹಚ್ಚಲು ಕಾನೂನು ಮೂಲಕ ಪ್ರಯತ್ನ ಮಾಡಲಾಗ್ತಿದೆಯಂತೆ. ಈ ಬಗ್ಗೆ ಮಾತಾಡಿರುವ ಪ್ರಜ್ವಲ್ ದೇವರಾಜ್ ಬೇಸರ ಹೊರಹಾಕಿದ್ದಾರೆ. ಇತ್ತೀಚೆಗೆ ಟ್ರೋಲ್ಸ್ ಹಾಗೂ ಮೀಮ್ಸ್‌ನಲ್ಲಿ ರಾಗಿಣಿ ಹಾಗೂ ನನ್ನ ಬಗ್ಗೆ ಕೆಟ್ಟದಾಗಿ ಬರೆದಿದ್ದಾರೆ. ಮದುವೆಯಾಗಿ 10 ವರ್ಷವಾದರೂ ಮಗು ಮಾಡಿಕೊಂಡಿಲ್ಲ. ಯಾಕಂದ್ರೆ ರಾಗಿಣಿ ಅವರ ಫಿಗರ್ ಹಾಳಾಗುತ್ತೆ ಅಂತಾ ಮಗು ಮಾಡಿಕೊಂಡಿಲ್ಲ ಅಂತಾ ಮೀಮ್ಸ್‌ನಲ್ಲಿ ಹಾಕಿದ್ದಾಗ ಅದನ್ನ ನೋಡಿ ರಾಗಿಣಿ ಬೇಜಾರಾದ್ರು ನಾನು ಸಮಾಧಾನ ಮಾಡಿದ್ದೇನೆ ಎಂದಿದ್ದಾರೆ.
ಧೈರ್ಯ ಇದ್ರೆ ಮುಂದೆ ಬಂದು ಹೇಳ್ಬೇಕು, ನಮ್ ಅಭಿಮಾನಿಗಳು ಇನ್ನೊಬ್ರ ಅಭಿಮಾನಿಗಳಂತಲ್ಲ ಎಲ್ಲೋ ಬಚ್ಚಿಟ್ಕೊಂಡು ಬೇಕಾಬಿಟ್ಟಿ ಕಾಮೆಂಟ್ ಹಾಕೋರಿಗೆ ಗಂಡ್ಸು ಅಂತಾ ಹೇಳೋಕೆ ಆಗುತ್ತಾ? ಎಲ್ಲರ ಕೈಯಲ್ಲೂ ಫೋನ್ ಇದೆ. ಅವನಿಗಿರುವ ಪ್ರೆಸ್ಟ್ರೇಷನ್‌ಗೆ ಯಾರಿಗೋ ಬೈಬೇಕು ಅನ್ಸುತ್ತೆ ನಾವು ಈಜಿಯಾಗಿ ಸಿಕ್ತೀವಿ. ಎಲ್ಲೋ ಕುತ್ಕೊಂಡು ಕೆಟ್ಟದಾಗಿ ಮೆಸೇಜ್ ಹಾಕ್ತಾರೆ. ಈ ರೀತಿ ಆಗಬಾರದು ಅಂದರೆ ಪ್ರತಿಯೊಬ್ಬ ನಾಗರಿಕರಿಗೂ ಜವಾಬ್ದಾರಿ ಬೇಕಾಗುತ್ತೆ. ಎಂದು ಖಾರವಾಗಿ ನುಡಿದಿದ್ದಾರೆ ಪ್ರಜ್ವಲ್ ದೇವರಾಜ್.ಇದನ್ನೂ ಓದಿ: ಮತ್ತೆ ರೊಮ್ಯಾನ್ಸ್‌ಗೆ ರೆಡಿಯಾದ ರಶ್ಮಿಕಾ-ವಿಜಯ್ ದೇವರಕೊಂಡ