ಬಳ್ಳಾರಿ: ಜನಾರ್ದನ ರೆಡ್ಡಿ (Janardhana Reddy) ಮನೆ ಮುಂದೆ ನಡೆದ ಬ್ಯಾನರ್ ಗಲಭೆ (Banner Clash) ಹಾಗೂ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಸಿಐಡಿ (CID) ತನಿಖೆ ಚುರುಕುಗೊಂಡಿದೆ.
ಈಗಾಗಲೇ ಗಲಭೆಯ ಕುರಿತು ಮಹತ್ವದ ದಾಖಲೆ ಕಲೆ ಹಾಕಿರುವ ಸಿಐಡಿ ತಂಡ ಘಟನೆ ಸಂಬಂಧ ಸಾರ್ವಜನಿಕರಿಂದಲೂ ವಿಡಿಯೋ, ಪೋಟೋ ಸಂಗ್ರಹಕ್ಕೆ ಮುಂದಾಗಿದೆ. ವಾಟ್ಸಪ್ ನಂಬರ್ ನೀಡಿ ವಿಡಿಯೋ ತುಣುಕುಗಳ ಹಾಕುವಂತೆ ಮನವಿ ಮಾಡಿಕೊಂಡಿದೆ. ಇದನ್ನೂ ಓದಿ: ಕೋಲಾರ | ಮದುವೆ ನಿರಾಕರಿಸಿದ್ದಕ್ಕೆ ಎರಡು ಮಕ್ಕಳ ತಾಯಿಯನ್ನು ಕೊಂದ ವಿವಾಹಿತ!

