– ಪಾವತಿ ಮಾಡದೆ ನಿಧನರಾದ ಹೆಸರಾಂತ ವ್ಯಕ್ತಿಗಳ ಖಾತೆಯಲ್ಲೂ ಬ್ಲೂ ಟಿಕ್
ವಾಷಿಂಗ್ಟನ್: ಮೈಕ್ರೊಬ್ಲಾಗಿಂಗ್ ಸೈಟ್ ಟ್ವಿಟ್ಟರ್ (Twitter) ಇತ್ತೀಚೆಗೆ ಬಳಕೆದಾರರ ಖಾತೆಗೆ ಬ್ಲೂ ಟಿಕ್ (Blue Tick) ಬೇಕೆಂದರೆ ಪಾವತಿ ಮಾಡುವಂತಹ ನಿಯಮವನ್ನು ಜಾರಿಗೆ ತಂದಿತ್ತು. ಆದರೆ ಇದೀಗ ಟ್ವಿಟ್ಟರ್ 10 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿರುವ ಬಳಕೆದಾರರಿಗೆ ಬ್ಲೂ ಟಿಕ್ ಅನ್ನು ಮರಳಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಕೆಲ ದಿನಗಳ ಹಿಂದೆ ಟ್ವಿಟ್ಟರ್ ಬಹುತೇಕ ಎಲ್ಲಾ ಖಾತೆಗಳಿಂದ ನೀಲಿ ಟಿಕ್ ಮಾರ್ಕ್ ಅನ್ನು ತೆಗೆದುಹಾಕಿತ್ತು. ಕೇವಲ ಪಾವತಿ ಮಾಡಿದ ಬಳಕೆದಾರರಿಗೆ ಮಾತ್ರವೇ ನೀಲಿ ಟಿಕ್ ಅನ್ನು ನೀಡುವಂತಹ ಚಂದಾದಾರಿಕೆಯನ್ನು ಜಾರಿಗೆ ತಂದಿತ್ತು. ಇದರಿಂದ ಪಾವತಿ ಮಾಡದೇ ಹೋದ ಅನೇಕ ಸೆಲೆಬ್ರಿಟಿಗಳು, ಹೆಸರಾಂತ ವ್ಯಕ್ತಿಗಳು ಕೂಡಾ ನೀಲಿ ಟಿಕ್ ಅನ್ನು ಕಳೆದುಕೊಂಡಿದ್ದರು. ಆದರೀಗ 10 ಲಕ್ಷಕ್ಕೂ ಅಧಿಕ ಫಾಲವರ್ಸ್ ಇರುವ ಬಳಕೆದಾರರು ನೀಲಿ ಟಿಕ್ ಮಾರ್ಕ್ ಅನ್ನು ಮರಳಿ ಪಡೆದಿದ್ದಾರೆ ಎನ್ನಲಾಗಿದೆ.
Advertisement
Advertisement
ಸೆಲೆಬ್ರಿಟಿಗಳು ಹಾಗೂ ಹೆಸರಾಂತ ವ್ಯಕ್ತಿಗಳು ಇತ್ತೀಚೆಗೆ ಟ್ವಿಟ್ಟರ್‌ಗೆ ಪಾವತಿ ಮಾಡದೇ ಹೋಗಿದ್ದಕ್ಕಾಗಿ ಏಪ್ರಿಲ್ 20ರಂದು ತಮ್ಮ ಖಾತೆಯ ನೀಲಿ ಟಿಕ್ ಅನ್ನು ಕಳೆದುಕೊಂಡಿದ್ದರು. ಬಾಲಿವುಡ್ ನಟರಾದ ಆಲಿಯಾ ಭಟ್, ಶಾರೂಖ್ ಖಾನ್, ಕ್ರಿಕೆಟಿಗ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬಿಲಿಯನೇರ್ ಬಿಲ್ ಗೇಟ್ಸ್ ಸೇರಿದಂತೆ ಹಲವರು ಈ ಪಟ್ಟಿಯಲ್ಲಿ ಸೇರಿಕೊಂಡಿದ್ದರು. ಇದೀಗ ಅವರೆಲ್ಲರ ಖಾತೆಗಳಲ್ಲೂ ನೀಲಿ ಟಿಕ್ ಮತ್ತೆ ಗೋಚರವಾಗಿದೆ. ಆದರೆ ಇವರೆಲ್ಲರೂ ತಮ್ಮ ಖಾತೆಯನ್ನು ಅಧಿಕೃತವಾಗಿ ಪರಿಶೀಲಿಸಲು ಪಾವತಿ ಮಾಡಿದ್ದಾರೆಯೇ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
Advertisement
ಇಲ್ಲಿ ವಿಚಿತ್ರವೆನಿಸಿರುವ ವಿಚಾರವೆಂದರೆ ನೀಲಿ ಟಿಕ್‌ಗೆ ಪಾವತಿ ಮಾಡುವ ಫೀಚರ್ ಬರುವುದಕ್ಕೂ ಮೊದಲೇ ನಿಧನರಾಗಿರುವ ಅನೇಕ ಹೆಸರಾಂತ ವ್ಯಕ್ತಿಗಳ ಖಾತೆಗಳಲ್ಲಿ ಈಗ ಬ್ಲೂ ಟಿಕ್ ಕಾಣಿಸಿಕೊಳ್ಳುತ್ತಿದೆ. ಭಾರತದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ನಟ ಸುಶಾಂತ್ ಸಿಂಗ್ ರಜಪೂತ್, ಇರ್ಫಾನ್, ರಿಷಿ ಕಪೂರ್, ಗಾಯಕ ಮೈಕಲ್ ಜಾಕ್ಸನ್, ಕ್ರಿಕೆಟಿಗ ಶೇನ್ ವಾರ್ನ್ ಸೇರಿದಂತೆ ಅನೇಕರ ಖಾತೆಗಳಲ್ಲೂ ಈಗ ನೀಲಿ ಟಿಕ್ ಕಾಣಿಸುತ್ತಿದೆ. ಇದನ್ನೂ ಓದಿ: ನಮ್ಮದು ವೈಭವೀಕರಿಸಿದ ಕಾರ್ಯಕರ್ತರ ಸಂಘಟನೆಯಲ್ಲ: ಟ್ವಿಟ್ಟರ್ 6 ಸಾವಿರ ಉದ್ಯೋಗ ಕಡಿತಕ್ಕೆ ಮಸ್ಕ್ ಸ್ಪಷ್ಟನೆ
Advertisement
ಇದೀಗ ಗಮನಿಸಬೇಕಾಗಿರುವ ವಿಚಾರವೆಂದರೆ 65 ಲಕ್ಷ ಅನುಯಾಯಿಗಳನ್ನು ಹೊಂದಿರುವ ಟ್ವಿಟ್ಟರ್‌ನ ಸಹ ಸಂಸ್ಥಾಪಕ ಜಾಕ್ ಡಾರ್ಸೆ ಅವರ ಖಾತೆಯಲ್ಲಿ ನೀಲಿ ಟಿಕ್ ಕಾಣಿಸುತ್ತಿಲ್ಲ. ಈ ಹಿಂದೆ ಟ್ವಿಟ್ಟರ್ ಸಿಇಒ ಎಲೋನ್ ಮಸ್ಕ್ (Elon Musk) ಕೆಲ ಬಳಕೆದಾರರ ಖಾತೆಗಳಿಗೆ ಬ್ಲೂ ಟಿಕ್ ಅನ್ನು ಇರಿಸಿಕೊಳ್ಳಲು ತಾವೇ ಪಾವತಿ ಮಾಡುವುದಾಗಿ ಹೇಳಿದ್ದರು. ಅವರಲ್ಲಿ ಬಾಸ್ಕೆಟ್ ಬಾಲ್ ಪ್ಲೇಯರ್ ಲೆಬ್ರಾನ್ ಜೇಮ್ಸ್, ಕೆನಡಾದ ನಟ ವಿಲಿಯಂ ಶಾಟ್ನರ್, ಲೇಖಕ ಸ್ಟೀಫನ್ ಕಿಂಗ್ ಸೇರಿದ್ದಾರೆ.
ಇದೀಗ 10 ಲಕ್ಷಕ್ಕೂ ಅಧಿಕ ಅನುಯಾಯಿಗಳಿರುವ ಬಳಕೆದಾರರಿಗೆ ಟ್ವಿಟ್ಟರ್ ಬ್ಲೂ ಟಿಕ್ ಅನ್ನು ಉಚಿತವಾಗಿ ನೀಡುತ್ತಿದೆ ಎನ್ನಲಾಗುತ್ತಿದೆಯಾದರೂ ಈ ಬಗ್ಗೆ ಟ್ವಿಟ್ಟರ್ ಸ್ಪಷ್ಟನೆ ನೀಡಿಲ್ಲ. ಉಚಿತವಾಗಿ ಬ್ಲೂ ಟಿಕ್ ಅನ್ನು ಪಡೆಯಲು ಯಾವೆಲ್ಲಾ ಮಾನದಂಡಗಳಿವೆ ಎಂಬುದೂ ಅಸ್ಪಷ್ಟವಾಗಿದೆ. ಇದನ್ನೂ ಓದಿ: ಟಿ20 – 6000 ರನ್ ಗಡಿ ದಾಟಿದ ಸೂರ್ಯಕುಮಾರ್