ಬೆಳಗಾವಿ: ಬೊಮ್ಮಾಯಿಯವರೇ (Basavaraj Bommai) ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿ. ಇಲ್ಲವಾದರೆ ನೀವು ಪರ್ಮನೆಂಟ್ ಆಗಿ ಮಾಜಿ ಸಿಎಂ ಆಗ್ತೀರಿ ಎಂದು ಬಿಜೆಪಿ (BJP) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಟಾಂಗ್ ನೀಡಿದರು.
ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ 2ಎ ಸಂಬಂಧ ಹಮ್ಮಿಕೊಂಡ ಸಮಾವೇಶದಲ್ಲಿ ಮಾತನಾಡಿ, ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ವಿರುದ್ಧ ಮತ್ತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದರು. ಬೊಮ್ಮಾಯಿಯವರೇ, ಬಿಎಸ್‌ವೈಯವರೊಂದಿಗೆ ತಿರುಗಾಡಿದರೆ ನೀವೂ ಲಗಾ ಹೊಡೆಯುತ್ತೀರಿ. ಮೊನ್ನೆ ಅಧಿವೇಶನದಲ್ಲಿ ನಾನು ಪಂಚಮಸಾಲಿ ವಿರೋಧಿ ಅಲ್ಲ ಅಂತ ಯಡಿಯೂರಪ್ಪ ಭಾಷಣ ಮಾಡಿದರು. ಹಾಗಾದರೆ ಸಿಎಂ ಆದ ವೇಳೆ ಪಂಚಮಸಾಲಿ ಸಮುದಾಯಕ್ಕೆ ಏಕೆ ಮೀಸಲಾತಿ ನೀಡಲಿಲ್ಲ? ಮೀಸಲಾತಿಗಾಗಿ ಸೂಚಿಸಿದ್ದೇನೆ ಅಂದ್ರು, ಸಿಎಂ ಆದವ್ರು ಯಾರಾದರೂ ಸೂಚಿಸುತ್ತಾರಾ? ಬೊಮ್ಮಾಯಿಯವರೇ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು. ಇಲ್ಲವಾದರೆ ನೀವು ಪರ್ಮನೆಂಟ್ ಆಗಿ ಮಾಜಿ ಸಿಎಂ ಆಗುತ್ತೀರಿ ಎಂದರು.
Advertisement
Advertisement
ಯಡಿಯೂರಪ್ಪ, ಬೊಮ್ಮಾಯಿ ತಿರುಪತಿಯಲ್ಲಿ ಏನ್ ಮಾತನಾಡಿದ್ದಾರೆ ಗೊತ್ತು. ಯಡಿಯೂರಪ್ಪ, ಬೊಮ್ಮಾಯಿ 3 ಪ್ರಮುಖ ಅಂಶ ಮಾತನಾಡಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬಾರದು. ನನ್ನ ಮಗನನ್ನು ಮಂತ್ರಿ ಮಾಡಬೇಕು. ಯತ್ನಾಳ್ ಅವರನ್ನು ಮಂತ್ರಿ ಮಾಡಬೇಡಿ ಅಂದಿದ್ದಾರೆ. ನಮ್ಮನ್ನೆಲ್ಲರೂ ಬಳಸಿಕೊಂಡು ಶೇ.2 ರಷ್ಟು ಇರುವವವರು ಸಿಎಂ ಆಗಿದ್ದಾರೆ. ನನಗೂ ಸಿಎಂ ಆಗಿ ಒಳ್ಳೆಯ ಆಡಳಿತ ನೀಡುವ ತಾಕತ್ ಇದೆ. ನಮ್ಮವರು ಅಂತವರ ಮುಂದೆ ಕೈಕಟ್ಟಿ ನಿಂತು ಮಂತ್ರಿ ಸ್ಥಾನ ಕೇಳುವ ಸ್ಥಿತಿ ಬಂತು. ಕೆಲ ದಿನಗಳ ಹಿಂದೆ ಸಿಎಂ ಬಸವರಾಜ್ ಬೊಮ್ಮಾಯಿ ನನ್ನ ಜೊತೆಗೆ ಕ್ಲೋಸ್ ಡೋರ್ ಮೀಟಿಂಗ್ ಮಾಡಿದ್ರು. ಬಸನಗೌಡ್ರೆ, ನೀವು ಸ್ವಲ್ಪ ಶಾಂತವಾಗಿರಿ, ನಿಮ್ಮನ್ನು ಮಂತ್ರಿ ಮಾಡ್ತಿನಿ ಅಂದಿದ್ದಾರೆ. ನನಗೇನೂ ಮಂತ್ರಿಸ್ಥಾನ ಕೊಡಬೇಡಿ, ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೊಡಿ ಎಂದಿದ್ದೇನೆ. ಚುನಾವಣೆಗೆ 6 ತಿಂಗಳು ಬಾಕಿ ಇದೆ. ಮಂತ್ರಿ ಆಗಲು ನಾನೇನು ಹುಚ್ಚನಾ ಎಂದು ಪ್ರಶ್ನಿಸಿದರು.
Advertisement
Advertisement
ಬಿಎಸ್‌ವೈ ಜೊತೆಗೆ ಸಿಎಂ ರಾಜ್ಯದ 50 ಕ್ಷೇತ್ರದಲ್ಲಿ ಜೋಡಿ ಪ್ರವಾಸ ಮಾಡಲಿದ್ದಾರಂತೆ. ಇಬ್ಬರ ಪ್ರವಾಸದಿಂದ ಏನೂ ಆಗುವುದಿಲ್ಲ. ಸಿಎಂ ಬೊಮ್ಮಾಯಿ ಅವರೊಂದಿಗೆ ಪ್ರವಾಸ ಮಾಡಿದ್ರೆ ಲಗಾ ಹೊಡಿಸ್ತಾರೆ. ರಾಜ್ಯದ ಎಲ್ಲಾ ಕಡೆಯೂ ಲಿಂಗಾಯತ ಪಂಚಮಸಾಲಿ ಸಮಾಜದ ಬಂಧುಗಳಿದ್ದಾರೆ. ಮೀಸಲಾತಿ ಕೊಡದಿದ್ರೆ ಅವರು ಪ್ರವಾಸ ಮಾಡಿದ ಕಡೆಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಿಎಸ್ ಯಡಿಯೂರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು. ಇದನ್ನೂ ಓದಿ:
ಈರಣ್ಣ ಕಡಾಡಿ ಪಂಚಮಸಾಲಿ ಸಮಾಜದವರು ಎಂದು ರಾಜ್ಯಸಭೆಗೆ ಹೋಗಿದ್ದಾರೆ. ನನ್ನ ಮೇಲೆ ಯಾರೋ ನಾಯಕ ಇದಾರೆ ಅನ್ನೋದೇನಿಲ್ಲ. ನನ್ನನ್ನು ಸೋಲಿಸಲು ನಮ್ಮ ಪಕ್ಷದವರೂ ಸೇರಿ ಹಲವರು ಈಗಲೇ ಹಣ ವಿತರಣೆ ಮಾಡ್ತಿದ್ದಾರೆ. ನಮ್ಮ ವಿಜಯಪುರದಲ್ಲಿ ಒಬ್ಬ ಮಲ್ಲಪ್ಪ ಶೆಟ್ಟಿ ಇದ್ದಾನೆ. ಅವನಿಗೆ ಹಣ ನೀಡುತ್ತಿದ್ದಾರೆ. ಬೆಳಗಾವಿಯಲ್ಲಿ ಇನ್ನು ಮುಂದೆ ನಮ್ಮ ಸಮಾಜಕ್ಕೆ ಗೌರವ ವೃದ್ಧಿ ಆಗಲಿದೆ. ಎಸ್‌ಸಿ, ಎಸ್‌ಟಿ ಬಳಿಕ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವ ಭರವಸೆ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನಗೆ ಭರವಸೆ ನೀಡಿದ್ದಾರೆ. ಮೀಸಲಾತಿ ಕೊಡಲೇಬೇಕು ಎಂದು ನಾನು ಆಗ್ರಹ ಮಾಡಿದ್ದೇನೆ. ಇಲ್ಲವಾದರೆ ನವೆಂಬರ್ ಮೊದಲ ವಾರದಲ್ಲೇ ವಿಧಾನಸೌಧ ಮುತ್ತಿಗೆ ಹಾಕಲಾಗುವುದು. ಸಮಾಜದ 25 ಲಕ್ಷ ಜನರು ವಿಧಾನಸೌಧ ಮುತ್ತಿಗೆ ಹಾಕಲಿದ್ದಾರೆ ಎಂದು ರಾಜ್ಯ ಸರ್ಕಾರಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: