4 ಮಕ್ಕಳು ಹೆತ್ತರೆ 1 ಲಕ್ಷ ರೂ. ಬಹುಮಾನ – ಕೊಡವ ಸಮಾಜದಿಂದ ವಿಶಿಷ್ಟ ಆಫರ್

Public TV
2 Min Read
Kodava Samaja 3

ಮಡಿಕೇರಿ: ಜಿಲ್ಲೆಯಲ್ಲಿ ಕೊಡವರ ಜನಸಂಖ್ಯೆ (Kodava Population) ಹೆಚ್ಚಿಸಲು ಕೊಡವ ಸಮಾಜ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ. ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವ ಪೋಷಕರಿಗೆ 25,000 ರೂ.ನಿಂದ 1 ಲಕ್ಷ ರೂ. ವರೆಗೆ ಬಹುಮಾನ ನೀಡುವ ಆಫರ್‌ವೊಂದನ್ನು ಪ್ರಕಟಿಸಿದೆ.

Kodava Samaja

ಕೊಡಗು (Kodagu) ಜಿಲ್ಲೆ ಅತಿ ವಿಶಿಷ್ಟ ಸಂಸ್ಕೃತಿ, ಪರಂಪರೆಗೆ ಹೆಸರಾದ ಜಿಲ್ಲೆ. ಇಲ್ಲಿನ ಕೊಡವ ಸಂಸ್ಕೃತಿ ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಹಾಗಾಗಿಯೇ ಸಾಂಸ್ಕೃತಿಕವಾಗಿ ಕೊಡಗು ಜಿಲ್ಲೆ ಅತಿಸೂಕ್ಷ್ಮ ಪ್ರದೇಶ ಎಂದು ಗುರುತಿಸಿಕೊಂಡಿದೆ. ಆದ್ರೆ ಇತ್ತೀಚಿನ ವರ್ಷಗಳಿಂದ ಕೊಡವರು ಸಾಂಸ್ಕೃತಿಕವಾಗಿ ಅಧಃಪತನದತ್ತ ಸಾಗುತ್ತಿದ್ದಾರೆ ಅನ್ನೋ ಆತಂಕ ಜನರನ್ನ ಕಾಡುತ್ತಿದೆ. ಕೆಲವರು ತಮ್ಮ ಉದ್ಯೋಗಕ್ಕಾಗಿ ದೂರದ ಊರಿಗೆ ತೆರಳಿ ಅಲ್ಲೇ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಜೊತೆಗೆ ಒಂದೇ ಮಗು (Child) ಸಾಕು ಅಂತ ನಿರ್ಬಂಧ ಹಾಕಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಹಬ್ಬ ಹರಿದಿನಗಳಿಗೆ ಬರುವ ಕೊಡವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದೊಂದು ದಿನ ಕೊಡವರು ಬೆರಳೆಣಿಕೆ ಸಂಖ್ಯೆಗೆ ಇಳಿದರೂ ಅಚ್ಚರಿ ಇಲ್ಲ. ಹಾಗಾಗಿ ಜಿಲ್ಲೆಯ ವಿವಿಧ ಊರುಗಳಲ್ಲಿರುವ ತಮ್ಮ ಸಮಾಜದವರು ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವಂತೆ ಆಫರ್‌ವೊಂದನ್ನ ಕೊಡವ ಸಮಾಜ ನೀಡಿದೆ.

Ponnanna

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಕೊಡವ ಸಮಾಜ (T Shettigeri Kodava Samaja) ಈ ವಿಶಿಷ್ಟ ಆಫರ್ ನೀಡಿದೆ. ಮೂರು ಮಕ್ಕಳಿಗೆ ಜನ್ಮ ನೀಡುವ ಕೊಡವ ಪೋಷಕರಿಗೆ 50 ಸಾವಿರ ರೂ., 4 ಮಕ್ಕಳಿಗೆ ಜನ್ಮ ನೀಡುವ ಪೋಷಕರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ. ಈ ಹಣವನ್ನ ಆ ಮಗುವಿನ ಹೆಸರಲ್ಲಿ ಬ್ಯಾಂಕ್​ನಲ್ಲಿ ಠೇವಣಿ ಇಟ್ಟು 18 ವರ್ಷ ತುಂಬಿದ ಬಳಿಕ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೆ ಸಮಾಜದ ಕೆಲ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಮೇಲೆ ಆಪರೇಷನ್ ಕಮಲದ ಆರೋಪ ಮಾಡ್ತಿರೋ ರವಿ ಗಣಿಗ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ರೇಣುಕಾಚಾರ್ಯ ಸವಾಲ್

Kodava Samaja 2

ಹೊಸ ಆಫರ್‌ ಘೋಷಣೆ ಮಾಡಿರುವ ಕೊಡವ ಸಮಾಜ, ಈಗಾಗಲೇ 3 ಮತ್ತು 4 ಮಕ್ಕಳನ್ನು ಮಾಡಿಕೊಂಡಿರುವ ತಲಾ ಒಂದೊಂದು ಕುಟುಂಬವನ್ನು ಗುರುತಿಸಿ ಹಣ ನೀಡಿ ಹಾಗೂ ಸನ್ಮಾನ ಕೂಡ ಮಾಡಿದೆ. ಹಲವು ಕೊಡವ ಕುಟುಂಬಗಳಿಗೆ ವೈಯಕ್ತಿಕವಾಗಿಯೂ ಹಣಕಾಸು ನೆರವು ನೀಡಿದೆ. ತಮ್ಮ ಜನಾಂಗ ಮತ್ತು ಸಂಸ್ಕೃತಿ ಉಳಿಸಲು ಇಂತಹ ಕ್ರಮಕ್ಕೆ ಶೆಟ್ಟಿಗೇರಿ ಕೊಡವ ಸಮಾಜ ಮುಂದಾಗಿದೆ‌. ಇದನ್ನೂ ಓದಿ: ರದ್ದು ಮಾಡಿರೋ ಕಾರ್ಡ್ ವಾಪಸ್ ಕೊಡದೇ ಹೋದ್ರೆ ಹಳ್ಳಿಹಳ್ಳಿಗಳಲ್ಲಿ ಬಿಜೆಪಿ ಹೋರಾಟ – ರೇಣುಕಾಚಾರ್ಯ

ಈ ಕುರಿತು ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ʻಪಬ್ಲಿಕ್ ಟಿವಿʼಯೊಂದಿಗೆ ಮಾತಾನಾಡಿ, ಕೊಡವ ಸಮಾಜಗಳ ನಿರ್ಣಯದ ಬಗ್ಗೆ ಹೆಚ್ಚು ಮಾತಾನಾಡುವುದಿಲ್ಲ. ಆದ್ರೆ ಕೊಡವ ಸಮುದಾಯ ಅತ್ಯಂತ ಸಣ್ಣ ಸಮುದಾಯ‌. ಜನಸಂಖ್ಯೆ ಬಹಳ ಕಡಿಮೆ ಇದೆ. ವಿಶಿಷ್ಟ ಸಂಸ್ಕೃತಿ ಆಚಾರ ವಿಚಾರ ಪದ್ದತಿ ಪರಂಪರೆ ಇಡೀ ದೇಶದಲ್ಲಿ ವಿಶಿಷ್ಟವಾಗಿದೆ. ಹಾಗಾಗಿ ಆ ಜನಾಂಗವನ್ನ ರಕ್ಷಣೆ ಮಾಡಬೇಕೆಂಬ ಬಯಕೆಯೂ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆಮೀರ್ ಖಾನ್ ಜೊತೆಗಿನ ಸುದೀಪ್ ಫೋಟೋ ವೈರಲ್- ಸಿನಿಮಾ ಬಗ್ಗೆ ಸಿಗಲಿದ್ಯಾ ಗುಡ್‌ ನ್ಯೂಸ್?

Share This Article