ಮಡಿಕೇರಿ: ರಾಜ್ಯದ ಜನರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈ ಮರೆತರೆ ವಿಧಾನಸೌಧದ ಗೋಪುರ ಗುಂಬಜ್ ಆಗುತ್ತೆ. ಮೈಕ್ ಇಟ್ಟು ಆಜಾನ್ ಕೂಗುತ್ತಾರೆ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ (MP Pratap Simha) ಹೊಸ ಬಾಂಬ್ ಸಿಡಿಸಿದ್ದಾರೆ.
ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಕಾಂಗ್ರೆಸ್ (Congress) ಸರ್ಕಾರದಿಂದ ಮುಂದಿನ ದಿನಗಳಲ್ಲಿ ಗಂಡಾಂತರ ಕಾದಿದೆ. ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನಾನು ಜನರಿಗೆ ಬಹಳ ಸ್ಪಷ್ಟವಾಗಿ ಹೇಳಿದೆ. ನೀವು ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ರೆ ಕನ್ನಡಿಗರ ಸರ್ಕಾರ ಅಲ್ಲ, ತಾಲಿಬಾನ್ ಸರ್ಕಾರ ರಚನೆ ಅಗುತ್ತದೆ ಎಂದು ಹೇಳಿದ್ದೆ. ಇವತ್ತು ತಾಲಿಬಾನ್ ಸರ್ಕಾರ ಅಳ್ವಿಕೆ ನಡೆಸುತ್ತಿರುವುದಕ್ಕೆ ಟ್ರಯಲ್ ಗಳು ಕಾಣಿಸುತ್ತಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅನ್ನುತ್ತಾರೆ. ಕಾಂಗ್ರೆಸ್ ಅವರು ಲಜ್ಜೆಗೆಟ್ಟು ಸಮರ್ಥನೆ ಕೊಟ್ಟಿಕೊಂಡು ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿರುವುದು ಹೊಸದು ಅಲ್ಲ. ಕಾಂಗ್ರೆಸ್ ಈ ಹಿಂದಿನ 2013 ರಿಂದ 18ರ ವರೆಗೆ ಅಧಿಕಾರದಲ್ಲಿ ಇರುವಾಗಲೂ ಕೊಡಗಿನಲ್ಲಿ ಮಹಿಳೆಯರ ಮೇಲೆಯೂ ರೌಡಿಶೀಟರ್ ಓಪನ್ ಮಾಡಿದ್ರು. ಈಗ ರಾಮಜನ್ಮ ಭೂಮಿ ಹೋರಾಟದಲ್ಲಿ ಭಾಗಿಯಾದ ಹುಬ್ಬಳ್ಳಿ ವ್ಯಕ್ತಿಯನ್ನು ಜೈಲಿಗೆ ಕಳಿಸುವಂತಹ ಪ್ರಯತ್ನ ಮಾಡಿದ್ರು. ಮಂಡ್ಯದ ಕೆರೆಗೋಡಿನಲ್ಲಿ ಹನುಮ ಧ್ವಜ (Hanuma Flag) ಹಾರಿಸಿದಕ್ಕೆ ಅದನ್ನು ಇಳಿಸುವಂತಹ ಕೆಲಸ ಮಾಡಿದ್ರು. ಈಗ ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವುದು ಅಗುತ್ತಿದೆ ಎಂದರು. ಇದನ್ನೂ ಓದಿ: ರಾಮೇಶ್ವರಂ ಬಾಂಬ್ ಬ್ಲಾಸ್ಟ್ ತನಿಖೆಗಿಳಿದ ಎನ್ಐಎ – ಸಿಸಿಬಿಯಿಂದ ತನಿಖಾ ಫೈಲ್ NIAಗೆ ಹಸ್ತಾಂತರ
ಚುನಾವಣೆ (Loksabha Election) ಹತ್ತಿರ ಬಂದಿರುವುದರಿಂದ ನಮ್ಮ ಕಾರ್ಯಕರ್ತರನ್ನ ಎದೆಗುಂದುವ ಹಾಗೆ ಮಾಡಿ ಅವರನ್ನು ಸುಮ್ಮನೆ ಕೂರಿಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅವರು ಗೆಲುವು ಸಾಧಿಸಬೇಕು ಎಂದು ವ್ಯವಸ್ಥಿತ ಸಂಚು ಮಾಡುತ್ತಿದ್ದಾರೆ. ಕಾಂಗ್ರೆಸ್ ಅವರಿಗೆ ಅಲ್ಪಸಂಖ್ಯಾತ ಓಲೈಕೆ ಬಿಟ್ಟು ಬೇರೆ ಯಾವ ಅಜೆಂಡಾ ಇಲ್ಲ, ಅದು ಅವರು ಕಳೆದ 8 ತಿಂಗಳಿಂದ ನಡೆದುಕೊಳ್ಳುತ್ತಿರುವ ರೀತಿಯಲ್ಲೇ ಗೊತ್ತಾಗುತ್ತಿದೆ. ಯಾವ ದಲಿತರು ಮತ ಹಾಕಿದ್ರು. ಹಿಂದೂ ವಿರೋಧಿ, ದಲಿತರ ವಿರೋಧಿ ಸರ್ಕಾರ ಕರ್ನಾಟಕದಲ್ಲಿ ಇದೆ ಎಂದು ರಾಜ್ಯ ಸರ್ಕಾರ ವಿರುದ್ಧ ಪ್ರತಾಪ್ ಸಿಂಹ ಅಕ್ರೋಶ ಹೊರಹಾಕಿದ್ದಾರೆ.