ಪಾಟ್ನಾ: ಯಾರು ಮದ್ಯಪಾನ (Liquor) ಮಾಡುತ್ತಾರೋ ಅವರು ಸಾಯುತ್ತಾರೆ. ಈ ಪ್ರಕರಣ ನಮಗೆ ಉದಾಹರಣೆ ಆಗಿದೆ ಎಂದು ಬಿಹಾರ (Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಹೇಳಿದರು.
ಬಿಹಾರದ ಛಾಪ್ರಾದಲ್ಲಿ ಕಳ್ಳಬಟ್ಟಿ ಸೇವಿಸಿ 37 ಮಂದಿ ಬಲಿಯಾದ ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮದ್ಯ ಸೇವಿಸುವವರು ಸಾಯುತ್ತಾರೆ. ಜನರು ಜಾಗರೂಕರಾಗಿರಬೇಕು ಎಂದ ಅವರು, ಕಳ್ಳಬಟ್ಟಿಯಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ನೀಡುವುದಿಲ್ಲ ಎಂದು ತಿಳಿಸಿದರು.
Advertisement
Advertisement
ಮದ್ಯ ನಿಷೇಧದ ಬಗ್ಗೆ ನಾವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಆದರೆ ಜನರು ಹೆಚ್ಚು ಜಾಗರೂಕರಾಗಿರಬೇಕು. ನಿಷೇಧವಿರುವಾಗ ಮಾರಾಟವಾಗುವ ಮದ್ಯದಲ್ಲಿ ಏನಾದರೂ ತಪ್ಪು ಇರುತ್ತದೆ. ಹೀಗಾಗಿ ನೀವು ಮದ್ಯ ಸೇವಿಸಬಾರದು. ಹೆಚ್ಚಿನ ಜನರು ನಿಷೇಧ ನೀತಿಯನ್ನು ಒಪ್ಪಿದ್ದಾರೆ. ಆದರೆ ಕೆಲವರು ತಪ್ಪು ಮಾಡುತ್ತಾರೆ ಅವರು ವಾದಿಸಿದರು. ಇದನ್ನೂ ಓದಿ: ಕತ್ತು ಕೊಯ್ದ ಸ್ಥಿತಿಯಲ್ಲಿ ಖಾಸಗಿ ಕಾಲೇಜಿನ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿ ಶವ ಪತ್ತೆ
Advertisement
Advertisement
ಛಾಪ್ರಾ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಳ್ಳಬಟ್ಟಿ ಸೇವಿಸಿ ಕನಿಷ್ಠ 38 ಮಂದಿ ಸಾವನ್ನಪ್ಪಿದ್ದು, ಇನ್ನಷ್ಟು ಸಾವು ಸಂಭವಿಸುವ ಭೀತಿ ಎದುರಾಗಿದೆ. ಏಪ್ರಿಲ್ 2016ರಲ್ಲಿ ನಿತೀಶ್ ಕುಮಾರ್ ಸರ್ಕಾರವು ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿತು. ಆದರೆ ನಿಷೇಧವನ್ನು ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ವಿಧಾನಸಭೆ ಮತ್ತು ಹೊರಗೆ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಚೀನಾ ವಿರುದ್ಧ ಮಾತನಾಡಲು ಅವಕಾಶವೇ ಇಲ್ಲ – ಖರ್ಗೆ ಕಿಡಿ