ಕೊಪ್ಪಳ: ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಲೇ ಇರೋ ಮಾಜಿ ಡಿಸಿಎಂ ಈಶ್ವರಪ್ಪ ಇದೀಗ ಹೊಸದೊಂದು ವಿವಾದ ಸೃಷ್ಟಿಸಿದ್ದಾರೆ. ಬಿಜೆಪಿ ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪ ಕಾರ್ಯಕರ್ತರಿಗೆ ಸುಳ್ಳಿನ ಪಾಠ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಾರಟಗಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ, ಏನೂ ಗೊತ್ತಿಲ್ಲ ಅಂದ್ರೆ ಬಿಜೆಪಿ ಸಾಧನೆಯ ಬಗ್ಗೆ ಸುಳ್ಳಾನ್ನಾದ್ರೂ ಹೇಳಿ ಅಂತಾ ಕಾರ್ಯಕರ್ತರಿಗೆ ಪ್ರಚಾರದ ಪಾಠ ಮಾಡಿದ್ದಾರೆ.
ಬಿಜೆಪಿ ಸರ್ಕಾರ ಇದ್ದಾಗ ನಾವೇನು ಮಾಡದ್ವಿ.. ಮುಂದೆ ಏನ್ಮಾಡ್ತೀವಿ. ರೈತ್ರು, ದಲಿತರು, ಹೆಣ್ಣು ಮಕ್ಕಳು, ಮಹಿಳೆಯರು, ವಯಸ್ಸಾದವರಿಗೆ ಏನ್ಮಾಡ್ತೀವಿ. ಕೇಂದ್ರ ಸರ್ಕಾರದ ಸಾಧನೆ ಏನು ಅನ್ನೋದು ನಿಮಗೆ ಗೊತ್ತಿರಬೇಕು. ಹೀಗಾಗಿ ನಾವು ಇದನ್ನು ತಿಳಿದುಕೊಳ್ಳಲೇಬೇಕು. ಆಕಸ್ಮಾತ್ ನಮಗೇನೂ ಗೊತ್ತಿಲ್ಲ ಅಂತಂದ್ರೆ ಸುಳ್ಳನ್ನಾದ್ರೂ ಹೇಳಿ ಅಂತ ಅವರು ಕಿವಿ ಮಾತು ಹೇಳಿದ್ದಾರೆ.
ವಾಜಪೇಯಿ ಸರ್ಕಾರ ಇದ್ದಾಗ ಪಾಕಿಸ್ತಾನ ಸೈನಿಕರನ್ನ ಕೊಂದ್ರು. ಆಮೇಲೆ ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಪಾಕಿಸ್ತಾನದವರು ನಮ್ಮ ಸೈನಿಕರನ್ನ ಕೊಂದಿದ್ದಾರೆ. ಈಗ ನರೇಂದ್ರ ಮೋದಿಯವರು ಪಾಕಿಸ್ತಾನದವರನ್ನ ಇಲ್ಲ ಅನಿಸ್ಬಿಟ್ಟು ಗಂಡುಗಲಿಯಾಗಿದ್ದಾರೆ. ಮೋದಿ ಗಂಡುಗಲಿ ಅನ್ನೋದು ಇಡೀ ಪ್ರಪಂಚಕ್ಕೆ ಗೊತ್ತು. ಮನಮೋಹನ್ ಸಿಂಗ್ ಚೆನ್ನಾಗಿ ಆಡಳಿತ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಿಂದುಳಿದ, ದಲಿತರಿಗೆ ಒಳ್ಳೆಯ ಕೆಲ್ಸ ಮಾಡಿದ್ದಾರೆ. ನಾವು ಬಿಜೆಪಿ ಕಾರ್ಯಕರ್ತರು. ನೀವು ಇಷ್ಟು ಸುಳ್ಳು ಹೇಳೋಕೆ ಆಗಲ್ಲ ಅಂದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಮಲ್ಕೋಬಹುದು ಅಂತಾ ಈಶ್ವರಪ್ಪ ಪಾಠ ಮಾಡಿದ್ದಾರೆ.
https://www.youtube.com/watch?v=LPZG8rA3xfs