ಬಿಗ್ ಬಾಸ್ (Big Boss) ಮನೆಯಿಂದ ಬಂದ ನಂತರವೂ ಬಿಗ್ ಬಾಸ್ ಕಂಟೆಸ್ಟೆಂಟ್ ಗಳ ಫ್ಯಾನ್ಸ್ ವಾರ್ ನಿಂತಿಲ್ಲ. ಇದರಿಂದಾಗಿ ಸಹಜವಾಗಿಯೇ ಕಾರ್ತಿಕ್ (Karthik) ಮತ್ತು ತನಿಷಾಗೆ (Tanisha Kuppanda) ಬೇಸರವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಲೈವ್ ಗೆ ಬಂದಿದ್ದ ಈ ಜೋಡಿ ಕಲಾವಿದರ ಮಧ್ಯ ತಂದಿಡುತ್ತಿರುವ ಫ್ಯಾನ್ಸ್ ಬಗ್ಗೆ ಗರಂ ಆಗಿದ್ದಾರೆ.
ಈ ಜೋಡಿಯು ಅಭಿಮಾನಿಗಳ ಜೊತೆ ಲೈವ್ ನಲ್ಲಿ ಇದ್ದಾಗ ಬೇರೆ ಕಂಟೆಸ್ಟೆಂಟ್ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಕಾರ್ತಿಕ್ ಮತ್ತು ತನಿಷಾಗೆ ಟಾಂಗ್ ಕೊಟ್ಟಿದ್ದಾರೆ ಹಲವರು. ಇದರಿಂದಾಗಿ ಬೇಸರಿಸಿಕೊಂಡ ಕಾರ್ತಿಕ್ ಮತ್ತು ತನಿಷಾ ಶೂಟ್ ಮಾಡುವ ಮಾತುಗಳನ್ನು ಆಡಿದ್ದಾರೆ. ಈ ಮೂಲಕ ಕಂಟೆಸ್ಟೆಂಟ್ ಗಳ ಮಧ್ಯೆ ಜಗಳಕ್ಕೆ ಕಾರಣರಾದವರ ವಿರುದ್ಧ ಕೋಪದಲ್ಲೇ ಮಾತನಾಡಿದ್ದಾರೆ.
ಬೇರೆ ಬೇರೆ ಕಂಟೆಸ್ಟೆಂಟ್ ಗಳ ಮಧ್ಯ ಪಿನ್ ಇಡುವವರನ್ನು ನಾನಂತೂ ಸುಮ್ಮನೆ ಬಿಡಲ್ಲ ಎಂದು ತನಿಷಾ ಹೇಳಿದಾಗ, ಪಿನ್ ಅಲ್ಲ, ಗನ್ (Gun) ಇಟ್ಟು ಶೂಟ್ ಮಾಡ್ತೀನಿ ಅಂತ ಹೇಳು ಎಂದು ತನಿಷಾಗೆ ಹೇಳ್ತಾರೆ ಕಾರ್ತಿಕ್. ನಿಜವಾಗಿಯೂ ನನಗೆ ಶೂಟ್ ಮಾಡೋಕೆ ಬರತ್ತೆ. ಹುಷಾರ್ ಅಂದಿದ್ದಾರೆ ತನಿಷಾ.
ಸಂಗೀತಾ, ಡ್ರೋನ್ ಪ್ರತಾಪ್, ನಮ್ರತಾ, ಕಾರ್ತಿಕ್ ಫ್ಯಾನ್ಸ್ ಗಳ ಮಧ್ಯೆ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆರೋಪ, ಪ್ರತ್ಯಾರೋಪಗಳು ನಡೆಯುತ್ತಲೇ ಇವೆ. ತಮ್ಮ ತಮ್ಮ ನೆಚ್ಚಿನ ತಾರೆಯರ ವಹಿಸಿ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಬೆದರಿಕೆಯ ಮಾತುಗಳನ್ನು ಈ ಜೋಡಿ ಆಡಿದೆ.