– ಹನಿಟ್ರ್ಯಾಪ್ ಸರ್ಕಾರದ ಯೋಜನೆಯಲ್ಲ ಎಂದ ಶಾಸಕ!
ಹುಬ್ಬಳ್ಳಿ: ಯತ್ನಾಳ್ (Basangouda Patil Yatnal) ಅವರು ಕಾಂಗ್ರೆಸ್‌ಗೆ (Congress) ಬಂದ್ರೆ ಕರೆದುಕೊಳ್ಳುತ್ತೇವೆ ಎಂದು ಶಾಸಕ ರಾಜು ಕಾಗೆ (Raju Kage) ಹೇಳಿದ್ದಾರೆ.
- Advertisement -
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ (BJP) ಉಚ್ಚಾಟಿಸಿದ ಬಗ್ಗೆ ಪ್ರತಿಕ್ರಿಸಿದರು. ನಾನೇ ಯತ್ನಾಳ್‍ರನ್ನ ಕಾಂಗ್ರೆಸ್‍ಗೆ ಕರೆದುಕೊಂಡು ಬರುತ್ತೇನೆ. ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ
- Advertisement -
- Advertisement -
ಬೆಲೆ ಏರಿಕೆ ವಿಚಾರವಾಗಿ, ಬೆಲೆ ಏರಿಕೆ ಅಷ್ಟು ಹೊರೆ ಆಗುವುದಿಲ್ಲ. ನಮಗೂ ಇತಿ ಮಿತಿ ಇದೆ. ಹೊಸ ಬಸ್ ನಿಲ್ದಾಣದ ನಿರ್ಮಾಣ, ಹೊಸ ಬಸ್ ಖರೀದಿ ಮಾಡುತ್ತಿದ್ದೆವೆ. ವ್ಯವಸ್ಥೆಯನ್ನು ಸರಿ ಮಾಡಬೇಕು. ಲಾಭ ನಷ್ಟವಿಲ್ಲದೇ ಸಂಸ್ಥೆ ನಡೆಯಬೇಕು ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
- Advertisement -
ಕಾಂಗ್ರೆಸ್‍ನ ಐದು ಗ್ಯಾರಂಟಿ ಜನರಿಗೆ ಉಪಯೋಗ ಆಗುತ್ತಿದೆ. ಯಾರು ವಿರೋಧ ಮಾಡುತ್ತಿದ್ದರೋ ಅವರೇ ಈಗ ನಮ್ಮನ್ನು ನಕಲು ಮಾಡುತ್ತಿದ್ದಾರೆ. ಇನ್ನೂ ಸರ್ಕಾರದಲ್ಲಿ ಅಡೆತಡೆಗಳು ಸಹಜ. ಇದೆಲ್ಲ ಮೀರಿ ಸಿಎಂ ಸಿದ್ದರಾಮಯ್ಯ ಪಾರದರ್ಶಕವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದರು.
ಹನಿಟ್ರ್ಯಾಪ್ ಪ್ರಕರಣದ ವಿಚಾರವಾಗಿ, ಅದು ವೈಯಕ್ತಿಕ ವಿಚಾರ, ಅದು ಸರ್ಕಾರದ ಯೋಜನೆ ಅಲ್ಲ. ರಾಜಣ್ಣರ ಹೆಸರು ತೆಗೆದುಕೊಂಡಿದ್ದು ಯತ್ನಾಳ್, ಅದಕ್ಕೆ ರಾಜಣ್ಣ ಉತ್ತರ ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆಯನ್ನು ರಾಷ್ಟ್ರೀಯ ನಾಯಕರು ಮರುಪರಿಶೀಲಿಸಿದ್ರೆ ಪಕ್ಷಕ್ಕೆ ಲಾಭ – ಶ್ರೀರಾಮುಲು