ಹುಬ್ಬಳ್ಳಿ: ಮಹಿಳೆಯರು ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ರಾಜ್ಯ ಸರ್ಕಾರ ಕಾರಣ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಹೇಳಿದರು.
ಹುಬ್ಬಳ್ಳಿಯಲ್ಲಿ ಜೆಡಿಎಸ್ (JDS) ನಾಯಕರಿಂದ ಕೋರ್ ಕಮಿಟಿ ಸಭೆ ನಡೆಯಿತು. ಸಭೆಗೂ ಮುನ್ನ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಹೆಚ್‌ಡಿಕೆ, ಮಹಿಳಾ ಆಯೋಗ ಪತ್ರ ಬರೆಯುವ ಮೊದಲೇ ಎಸ್‌ಐಟಿ ತನಿಖೆ ಘೋಷಣೆ ಸಿಎಂ ಮಾಡಿದ್ದಾರೆ. ಯಾರೆಲ್ಲಾ ಮಹಿಳೆಯರ ಕೈಯಿಂದ ದೂರು ಬರೆಸಿಕೊಂಡಿದ್ದಾರೆ, ಯಾರೆಲ್ಲಾ ಇದ್ದರು. ಐದಾರು ವರ್ಷಗಳ ಹಿಂದೆ ನಡೆದಿರುವ ಪ್ರಕರಣ ಈಗ ಯಾಕೆ? ಇಷ್ಟು ವರ್ಷ ಯಾಕೆ ದೂರು ನೀಡಿಲ್ಲ. ಮೈತ್ರಿ ಸರ್ಕಾರದ ವಿರುದ್ಧ ಮಹಾನ್ ನಾಯಕ (ಡಿ.ಕೆ.ಶಿವಕುಮಾರ್) ಕುತಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಪ್ರಜ್ವಲ್ ಪ್ರಕರಣವನ್ನು ಕಾಂಗ್ರೆಸ್ ಎನ್‌ಡಿಎ ಅಪರಾಧ ಅನ್ನೋ ಥರ ಬಿಂಬಿಸಲು ಯತ್ನಿಸುತ್ತಿದೆ: ಸಿ.ಟಿ ರವಿ
Advertisement
Advertisement
ಹೆಣ್ಣುಮಗಳ ಮುಖ ಬ್ಲರ್ ಮಾಡಬಹುದಿತ್ತು. ಆದರೆ ಇಷ್ಟು ಕೀಳುಮಟ್ಟದಲ್ಲಿ ಹೆಣ್ಣುಮಕ್ಕಳು ಪೋಟೋ ತೋರಿಸಿದ್ದೀರಿ. ಎಷ್ಟರಮಟ್ಟಿಗೆ ಕಾಂಗ್ರೆಸ್ ನಾಯಕರು ಮರ್ಯಾದೆ ಕೊಟ್ಟಿದ್ದೀರಿ? ಚಕ್ರ ಯಾವ ಕಡೆ ತಿರುಗುತ್ತೆ ಎನ್ನುವುದು ಮಹಾನ್ ನಾಯಕರಿಗೆ ಈಗ ಅರ್ಥ ಆಗಿದೆ. ಸಿಎಂಗೂ ಈಗ ಅರ್ಥವಾಗ್ತಾ ಇದು? ಯಾವ ಕಡೆ ತಿರುಗುತ್ತಿದೆ ಅಂತ. ಈಗ ಹೊಸ ಅಧ್ಯಾಯ ಶುರುವಾಗುತ್ತದೆ ಎಂದರು.
Advertisement
ಕಾಂಗ್ರೆಸ್‌ಗೆ ನಾಡಿನ ಮಹಿಳೆಯರು, ಬಡ ಕುಟುಂಬದ ಮೇಲೆ ಗೌರವ ಇದ್ದರೆ, ವೀಡಿಯೋ ಬಿಡುಗಡೆ ಮಾಡಿರುವ ಬಗ್ಗೆ ಕ್ರಮ ಆಗಲಿ. ಪ್ರಜ್ವಲ್ ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ. ಎರಡು ಸಾವಿರ ವೀಡಿಯೋ ಯಾವ ಫ್ಯಾಕ್ಟರಿಯಲ್ಲಿ ತಯಾರು ಮಾಡಿದ್ರಿ? ಎರಡು ಸಾವಿರ ಅಂದ್ರೆ ಎಷ್ಟು ವರ್ಷ ಬೇಕು. ಹಾಗಿದ್ದರೆ ಎಂಪಿ ಆಗಿ ಅವರೇನು ಕೆಲಸ ಮಾಡಿಲ್ಲವಾ? ಕಾಂಗ್ರೆಸ್ ನಾರಿಮಣಿಗಳೇ ನೀವು ಪ್ರತಿಭಟನೆ ಮಾಡಬೇಕಿರುವುದು ಕಾಂಗ್ರೆಸ್ ನಾಯಕರ ಮನೆ ಮುಂದೆ. ನನ್ನ ಮನೆ ಮುಂದೆ ಯಾಕೆ ಸಿದ್ದರಾಮಯ್ಯನವರೇ, ನಾನು ಮುಂದೆ ಬರುತ್ತೇನೆ. ಇನ್ನೂ ಸಮಯವಿದೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಪೆನ್‍ಡ್ರೈವ್ ಹಿಂದೆ ಮಹಾನಾಯಕ ಇದ್ದಾರೆ- ಡಿಕೆಶಿ ವಿರುದ್ಧ ಹೆಚ್‍ಡಿಕೆ ಗರಂ
Advertisement
ಸಿದ್ದರಾಮಯ್ಯ ನಿಮ್ಮ ಕುಟುಂಬದ ಮಾನ ಮರ್ಯಾದೆ ಉಳಿಸಿದವರು ನರೇಂದ್ರ ಮೋದಿ, ಸುಷ್ಮಾ ಸ್ವರಾಜ್. ನಿಮ್ಮ ಕುಟುಂಬದಲ್ಲಿ ನಡೆದಿರುವ ಘಟನೆ ಬಗ್ಗೆ ನಾನು ಮಾತನಾಡಲ್ಲ. ಅದನ್ನು ಬಳಕೆ ಮಾಡಲ್ಲ. ಇದನ್ನು ಧೈರ್ಯವಾಗಿ ಎದುರಿಸುತ್ತೇನೆ, ಹೆದರಿ ಓಡಿಹೋಗಲ್ಲಾ. ಮಹಿಳೆಯರು ಯಾರಾದರೂ ಆತ್ಮಹತ್ಯೆ ಮಾಡಿಕೊಂಡ್ರೆ ರಾಜ್ಯ ಸರ್ಕಾರ ಕಾರಣ ಎಂದು ಎಚ್ಚರಿಸಿದರು.
ಡಿ.ಕೆ.ಶಿವಕುಮಾರ್ ನೀನು ನೀಚ. ಹೆತ್ತ ತಾಯಿ ಯವ್ವನದ ಬಗ್ಗೆ ಮಾತಾಡೋ ನೀನು. ಹೆಣ್ಣುಮಕ್ಕಳ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಜ್ವಲ್‌ದು ತಪ್ಪಿದ್ರೆ ನೇಣು ಹಾಕಲಿ ಎಂದರು.
ಪ್ರಜ್ವಲ್ ಸ್ಟೇ ತಂದಿರುವ ವಿಚಾರ ಗೊತ್ತಿಲ್ಲ. ದೇವೇಗೌಡರ ಕುಟುಂಬ ಅಂದರೆ ಎಲ್ಲಾ ಒಂದೇ ಅಲ್ಲ. ನಾನು, ನನ್ನ ಮಗ, ನನ್ನ ಹೆಂಡತಿ, ನನ್ನ ಸೊಸೆ, ನನ್ನ ಮೊಮ್ಮಗ ಅಷ್ಟೇ. ಅಲ್ಲಿ ರೇವಣ್ಣ ಕುಟುಂಬ ಅವರ ಮಗನ ವಿಚಾರದಲ್ಲಿ ರೇವಣ್ಣನಿಗೆ ಎಚ್ಚರಿಕೆ ಇರಬೇಕು, ನನಗಲ್ಲ. ವಯಸ್ಸಿಗೆ ಬರೋವರಿಗೂ ಮಾತ್ರ ಅವರು ನಮ್ಮ ಮಕ್ಕಳು. ವಯಸ್ಸಿಗೆ ಬಂದ್ರೆ ಅವರು ಸ್ವತಂತ್ರರು. ಇಷ್ಟು ಕೂಡ ಗೊತ್ತಿಲ್ಲವಾ ಡಿಕೆಗೆ ಎಂದು ಕಿಡಿಕಾರಿದರು.