ಕ್ಯಾನ್ಬೆರಾ: ವಿಶ್ವಕಪ್ (T20 WorldCup) ಗೆಲ್ಲಲು ನಾವು ಬಂದಿಲ್ಲ, ಭಾರತ ಬಂದಿದೆ. ಒಂದು ವೇಳೆ ನಾವು ಭಾರತದ (Team India) ವಿರುದ್ಧ ಗೆದ್ದರೆ ಅದು ಅಸಮಾಧಾನಕ್ಕೆ ಕಾರಣವಾಗಬಹುದು. ಭಾರತಕ್ಕೆ ಅಸಮಾಧಾನ ಮಾಡಲು ನಾವು ಉತ್ತಮವಾಗಿ ಆಡಲು ಪ್ರಯತ್ನಿಸುತ್ತೇವೆ ಎಂದು ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ (Shakib Al Hasan) ಭವಿಷ್ಯ ನುಡಿದಿದ್ದಾರೆ.
Advertisement
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 WorldCup) ರಣರೋಚಕತೆಯಿಂದ ಕೂಡಿದೆ. ಸೂಪರ್ 12 ಅರ್ಹತಾ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದ್ದರೇ, ತಲಾ 2 ಪಂದ್ಯಗಳನ್ನು ಗೆದ್ದಿರುವ ಭಾರತ (Team India) ಹಾಗೂ ಬಾಂಗ್ಲಾದೇಶ (Bangladesh) 4 ಅಂಕಗಳನ್ನು ಪಡೆದು ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಅಕ್ಟೋಬರ್ 2ರಂದು ಭಾರತ ಮತ್ತು ಬಾಂಗ್ಲಾದೇಶ ಸೆಣಸಲಿವೆ. ಅಲ್ಲದೇ ಭಾರತ ಹಾಗೂ ಬಾಂಗ್ಲಾದೇಶಕ್ಕೆ ಈ ಪಂದ್ಯ ನಿರ್ಣಾಯಕವಾಗಿದ್ದು, ಇದರ ಗೆಲುವು ಸೆಮಿಫೈನಲ್ ಕನಸನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತದೆ. ಇದನ್ನೂ ಓದಿ: ನಾನ್ ಸ್ಟ್ರೈಕರ್ ರನೌಟ್‍ನಿಂದ ಪಾರಾಗಲು ಹೊಸ ಐಡಿಯಾ ಹುಡುಕಿದ ಗ್ಲೆನ್ ಫಿಲಿಪ್ಸ್
Advertisement
Advertisement
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಶಕಿಬ್ ಅಲ್ ಅಸನ್ (Shakib Al Hasan), ನಮಗೆ ಪ್ರತಿ ಪಂದ್ಯವೂ ಮುಖ್ಯವಾಗಿದೆ. ಅದರಂತೆ ನಾವು ಆಡಲು ಬಯಸುತ್ತೇವೆ. ನಾವು ನಮ್ಮ ಯೋಜನೆಗಳಿಗೆ ಬದ್ಧರಾಗಿದ್ದೇವೆ. ಸ್ಟ್ರೈಕ್‌ರೇಟ್‌ಗಳ ಬಗ್ಗೆಯೂ ಚಿಂತಿಸುವಂತಿಲ್ಲ. ನಮ್ಮ ಮುಂದಿನ ಎಲ್ಲ ಪಂದ್ಯಗಳಲ್ಲೂ ಉತ್ತಮವಾಗಿ ಆಡಲು ಬಯಸುತ್ತೇವೆ. ಆದರೆ ಭಾರತ ಮತ್ತು ಪಾಕಿಸ್ತಾನದ ವಿರುದ್ಧ ಗೆಲ್ಲಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆ. ಏಕೆಂದರೆ ಐರ್ಲೆಂಡ್ ಹಾಗೂ ಜಿಂಬಾಬ್ವೆಯಂತಹ ತಂಡಗಳೂ ಪಾಕಿಸ್ತಾನ (Pakistan) ಹಾಗೂ ಇಂಗ್ಲೆಂಡ್ ನಂತಹ ಬಲಿಷ್ಠ ತಂಡಗಳನ್ನೇ ಸೋಲಿಸಿರುವುದನ್ನು ನೋಡಿದ್ದೇವೆ. ಸಾಧ್ಯವಾದರೆ ನಾವು ಅದೇ ರೀತಿ ಆಡಲು ಪ್ರಯತ್ನಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸತತ ಸೋಲಿನ ರುಚಿ – ಭಾರತದ ಗೆಲುವಿಗಾಗಿ ಪಾಕ್ ತಂಡ ಪ್ರಾರ್ಥನೆ
Advertisement
ಭಾರತ ಎಲ್ಲಿ ಆಡಿದರೂ ಉತ್ತಮ ಬೆಂಬಲ ಸಿಗುತ್ತದೆ. ಟೀಂ ಇಂಡಿಯಾ (Team India) ವಿಶ್ವಕಪ್ ಗೆಲ್ಲಲ್ಲು ಇಲ್ಲಿಗೆ ಬಂದಿದೆಯೇ ಹೊರತು ನಾವಲ್ಲ. ನೀವು ಪರಿಸ್ಥಿತಿ ಅರ್ಥ ಮಾಡಿಕೊಳ್ಳಬಹುದು. ಭಾರತದ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅಮೋಘ ಫಾರ್ಮ್ನಲ್ಲಿದ್ದಾರೆ. ಇಲ್ಲಿಯವರೆಗೆ 2 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ನಾವು ಭಾರತದ ವಿರುದ್ಧ ಗೆದ್ದರೇ ಅದು ಅಸಮಾಧಾನವಾಗುತ್ತದೆ. ನಾವು ಭಾರತವನ್ನು ಸೋಲಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.