ದಾವಣಗೆರೆ: ವಿಚಾರಣಾಧೀನ ಕೈದಿಗಳನ್ನು ನೋಡಲು ಸಂಬಂಧಿಕರು ಹಾತೊರೆಯುತ್ತಿರುತ್ತಾರೆ. ಆದರೆ ಅದನ್ನೇ ಬಂಡವಾಳ ಮಾಡಿಕೊಂಡ ಕಾರಾಗೃಹದ ಸಿಬ್ಬಂದಿ ಕಾರಾಗೃಹದ ಒಳಗೆ ಬಿಡಲು ಜನರಿಂದ ಲಂಚ ವಸೂಲಿ ಮಾಡುತ್ತಿದ್ದಾರೆ.
ಲಂಚ ನೀಡಿಲ್ಲ ಅಂದ್ರೆ ಒಳಗೆ ತೆರಳಲು ಅವಕಾಶ ನೀಡಲ್ಲವಂತೆ. ಇದಕ್ಕೆ ಪುಷ್ಠಿ ನೀಡುವಂತೆ ದಾವಣಗೆರೆ ಜಿಲ್ಲಾ ಕಾರಾಗೃಹದಲ್ಲಿ ಲಂಚ ಪಡೆಯುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: SSLC ಪರೀಕ್ಷೆಯಲ್ಲಿ ಪಾಸ್ ಆದ 43 ವರ್ಷದ ಅಪ್ಪ – ಫೇಲ್ ಆದ ಮಗ
ಸಂಬಂಧಿಕರು ಯಾರೇ ಆದ್ರೂ ಸರಿ ಕಾರಾಗೃಹದಲ್ಲಿರುವ ಕೈದಿಗಳನ್ನು ನೋಡಬೇಕು ಅಂದ್ರೆ ಜೈಲರ್‌ಗಳಿಗೆ ಲಂಚ ಕೊಡಲೇಬೇಕಾಗಿದೆ. ಕೈದಿಗಳನ್ನ ನೋಡಲು ಹೋದ್ರೆ ಗೇಟ್ ಬಾಗಿಲಲ್ಲೇ ನಿಂತು ಹಣ ಪೀಕುತ್ತಿದ್ದಾರೆ. ಇದನ್ನೂ ಓದಿ: 52ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ಗಾಂಧಿ – ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದೇಕೆ?
ಸದ್ಯ ಪೊಲೀಸರು ಬರುವವರಿಂದ ಹಣ ಪಡೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಲ್ಲದೆ ವೀಡಿಯೋ ಮಾಡಿದ ಸಾರ್ವಜನಿಕರು ಹಣ ಕೊಡದೇ ಇದ್ರೆ ನೋಡಲೂ ಅವಕಾಶ ಕೊಡೋದಿಲ್ಲ ಎಂದು ಹೇಳಿಕೊಂಡಿದ್ದಾರೆ. ಪೊಲೀಸರ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.