ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಅವರಿಗೆ ಪ್ರತಿದಿನ ನನ್ನನ್ನು ಹಾಗೂ ಡಿ.ಕೆ.ಶಿವಕುಮಾರ್ (DK Shivakumar) ಅವರನ್ನು ನೆನಪು ಮಾಡಿಕೊಳ್ಳದಿದ್ದರೆ ಅವರ ದಿನಚರಿಯೇ ನಡೆಯಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಈ ಕುರಿತು ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಅಧಿಕಾರಿಗಳಿಗೆ ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರಿಗೆ ಡಿ.ಕೆ.ಶಿವಕುಮಾರ್ ಹಾಗೂ ನನ್ನ ನೆನಪಿಸಿಕೊಳ್ಳದಿದ್ದರೆ ಅವರ ರಾಜಕಾರಣವೂ ನಡೆಯಲ್ಲ, ದಿನಚರಿಯೂ ನಡೆಯಲ್ಲ. ಹೀಗಾಗಿ ಅವರ ರಾಜಕಾರಣಕ್ಕೆ ನನ್ನನ್ನು ಎಳೆದು ತರುತ್ತಾರೆ ಎಂದರು. ಇದನ್ನೂ ಓದಿ: ಮೂರು ಡಿಸಿಎಂ ಹುದ್ದೆ ಹೈಕಮಾಂಡ್ ತೀರ್ಮಾನ ಮಾಡುತ್ತೆ: ಯತೀಂದ್ರ ಸಿದ್ದರಾಮಯ್ಯ
ಚನ್ನಪಟ್ಟಣ ತ್ಯಜಿಸಿ ಮಂಡ್ಯಕ್ಕೆ ಹೋದ ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಮಾಡಿದ ಕಾರ್ಯಕ್ರಮದ ಬಗ್ಗೆ, ಸಭೆ ಬಗ್ಗೆ ಎಲ್ಲವೂ ದಾಖಲೆ ಇದೆ. ಚನ್ನಪಟ್ಟಣಕ್ಕೆ ಕುಮಾರಸ್ವಾಮಿ ಏನು ಮಾಡಿದ್ದಾರೆ ಎಂದು ಮಾಧ್ಯಮಗಳೇ ವ್ಯಾಖ್ಯಾನ ಮಾಡಲಿ. ಜನ ಮೋದಿಗೆ ಆಶೀರ್ವಾದ ಮಾಡಿದ್ದಾರೆ. ಇವರು ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಜನರನ್ನು, ಅಧಿಕಾರಿಗಳನ್ನು ಬೆದರಿಸುವ ಕೆಲಸ ಹಿಂದೆಯೂ ಅವರು ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಸುಳ್ಳು ಹೇಳುವುದನ್ನೂ ಕೂಡ ನಿಲ್ಲಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಸಚಿವ ರಾಜಣ್ಣ ಹೈಕಮಾಂಡ್ ಬಳಿ ಹೋಗಿ ಸಿಎಂ ಹುದ್ದೆಯೇ ಕೇಳಲಿ: ಪ್ರಿಯಾಂಕ್ ಖರ್ಗೆ ಕಿಡಿ