ಮಂಡ್ಯ: ಉತ್ತರ ಪ್ರದೇಶದ ಮುಖ್ಯಮಂತ್ರಿ ಮದುವೆಯಾಗಿದ್ದರೆ ಬೆಲೆ ಏರಿಕೆ ಆಗುತ್ತಿರಲಿಲ್ಲ ಎಂದು ಯೋಗಿ ಆದಿತ್ಯನಾಥ್ (Yogi Adityanath) ವಿರುದ್ಧ ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ (C.M.Ibrahim) ವ್ಯಂಗ್ಯವಾಡಿದ್ದಾರೆ.
ಪಾಂಡವಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿ ಸಿಎಂಗೆ ಮದುವೆ ಆಗಿದ್ದರೆ ಬೆಲೆ ಏರಿಕೆ ಆಗ್ತಿರಲಿಲ್ಲ. ಹೆಂಡತಿ, ಮಕ್ಕಳಿಲ್ಲದವರ ಕೈಗೆ ದೇಶ ಕೊಟ್ರೆ ಬೆಲೆ ಏರಿಕೆ ಆಗದೆ ಇನ್ನೇನು? ಲವ್ ಲವ್ ಅಂತಾವೆ, ಲವ್ ಅಂದರೆ ಏನ್ ಗೊತ್ತು ಯೋಗಿಗೆ? ಲವ್ ಮಾಡಿ ಎಲ್ರೂ ಮದುವೆ ಆಗ್ತಾರೆ, ಲವ್ ಅನುಭವ ಅವನಿಗೆ ಇಲ್ಲ. ಸಂಸಾರ ನಡೆಸುವ ಅನುಭವ ಇಲ್ಲ. ಹಾಗಾಗಿ ಇಂತಹವರ ಕೈಗೆ ದೇಶ ಕೊಟ್ರೆ ಆಡಳಿತ ನಡೆಸಲು ಆಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನನಗೀಗ 52 ವಯಸ್ಸು.. ಈಗಲೂ ಸ್ವಂತ ಮನೆಯೇ ಇಲ್ಲ: ರಾಹುಲ್ ಗಾಂಧಿ
Advertisement
Advertisement
ಹಾಸನ (Hassan) ಟಿಕೆಟ್ ಫೈಟ್ ಕುರಿತು ಮಾತನಾಡಿ, ಕ್ಷೇತ್ರದ ಟಿಕೆಟ್ ಇನ್ನೂ ಅಂತಿಮವಾಗಿಲ್ಲ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಇನ್ನೂ ಚರ್ಚೆ ಮಾಡಬೇಕಿದೆ. ಜೆಡಿಎಸ್ ಟಿಕೆಟ್ ಆಕಾಂಕ್ಷಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೇಳುವ ಹಕ್ಕಿದೆ. ದೇವೇಗೌಡರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಮಾಜಿ ಸಚಿವ ರೇವಣ್ಣ ಹೇಳಿದ್ದಾರೆ. ಹಾಸನ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ದೇವೇಗೌಡರ (H.D.Deve Gowda) ಕುಟುಂಬದಲ್ಲಿ ಅಂತಹ ಯಾವುದೇ ಗೊಂದಲ ಮೂಡುವುದಿಲ್ಲ ಎಂದಿದ್ದಾರೆ.
Advertisement
ರಾಜ್ಯದಲ್ಲಿ ಜೆಡಿಎಸ್ ಪರವಾದ ನಿಲುವಿದೆ. ಹಳೇ ಮೈಸೂರಲ್ಲಿ ಪಕ್ಷ ಬಲಿಷ್ಠವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಯಾಗುತ್ತಿದೆ. ಈ ಎರಡೂ ಕಡೆ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
Advertisement
ಬಿಜೆಪಿಗೆ (BJP) ಅಧಿಕಾರ ಇದೆ ಎಂದು ಜನ ಸೇರುತ್ತಿದ್ದಾರೆ. ಬಿಜೆಪಿಯವರು ಬೇರೆಯವರು ಹುಟ್ಟಿಸಿದವರನ್ನು ತೆಗೆದುಕೊಂಡು ಹೋಗಿ ನಮ್ಮವರು ಎನ್ನುತ್ತಿದ್ದಾರೆ. ಜೆಡಿಎಸ್ ನಾಯಕರನ್ನು ಸೃಷ್ಟಿಸುವ ಪಕ್ಷ, ಪಂಚರತ್ನದ ರೀತಿ ಭಾರತದ ಯಾವುದೇ ರಾಜಕೀಯ ಪಕ್ಷ ಕಾರ್ಯಕ್ರಮವನ್ನು ಕೊಟ್ಟಿಲ್ಲ. ಮಂಡ್ಯದಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಉಳಿಸಲು ಮೋದಿ ಪ್ರಯತ್ನ ಪಡುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ ಎಂದು ಕುಟುಕಿದ್ದಾರೆ.
ವಯಸ್ಸಿನ ಕಾರಣ ನೀಡಿ ಯಡಿಯೂರಪ್ಪರನ್ನು ಶಾಶ್ವತವಾಗಿ ಕೂರಿಸಿದ್ದಾರೆ. ಲಿಂಗಾಯತ ಮತ ಪಡೆದು ಅಧಿಕಾರ ಪಡೆದ ಬಿಜೆಪಿ ಪಂಚಮಸಾಲಿಗಳನ್ನು ಬೀದಿಗೆ ತಂದಿದೆ. ಬೇಡ ಜಂಗಮ ಸಮುದಾಯವನ್ನು ಕಡೆಗಣಿಸಿದೆ. ವಿದಾಯದ ಬಳಿಕ ಲಿಂಗಾಯತರ ಬೆಂಬಲ ಕೇಳಿದ ಮಾಜಿ ಸಿಎಂ ಯಡಿಯೂರಪ್ಪರ (B.S.Yediyurappa) ನಡಗೆ, 30 ವರ್ಷದಲ್ಲಿ ಗಂಡ ಸತ್ತರೆ ಮದುವೆ ಆಗಬಹುದು. 8ಂನೇ ವಯಸ್ಸಿನಲ್ಲಿ ಗಂಡ ಸತ್ತರೆ ಮದುವೆಯಾಗಿ ಏನು ಮಾಡುತ್ತೀರಿ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸಿ.ಟಿ.ರವಿಯನ್ನು ಆರ್‍ಎಸ್‍ಎಸ್ ಮೀಟಿಂಗ್‍ಗಳಿಗೆ ಸೇರಿಸುವುದಿಲ್ಲ. ಸ್ಮಾರ್ಟ್ ಬ್ರಾಹ್ಮಣರಿಗೆ ಅವಕಾಶ ನೀಡಿಲ್ಲ. ಇನ್ನೂ ಈ ಮುಂಡೆತ್ತದ್ದು ಗೌಡ್ರಿಗೆ ಬಿಡ್ತಾರಾ? ರೈತರ ಮಕ್ಕಳಿಗೆ ಗೌರವ ಇರುವುದು ಜೆಡಿಎಸ್ ಪಕ್ಷದಲ್ಲಿ ಮಾತ್ರ. ಕಂಡವರ ಮನೆ ಕೆಲಸಕ್ಕೆ ಹೋಗಿದ್ದೀರಿ ಎಂದು ಸಿಟಿ ರವಿ ವಿರುದ್ಧ ಗುಡುಗಿದ್ದಾರೆ. ಇದನ್ನೂ ಓದಿ: ಈ ವರ್ಷದಲ್ಲೇ ಮೋದಿ ಪಾಕಿಸ್ತಾನವನ್ನ ಸಂಕಷ್ಟದಿಂದ ಪಾರು ಮಾಡ್ತಾರೆ – RAW ಮಾಜಿ ನಿರ್ದೇಶಕ