ಬಿಗ್ ಬಾಸ್ ಓಟಿಟಿಯ ಮೂಲಕ ಸಖತ್ ಫೇಮಸ್ ಆದವರು ಉರ್ಫಿ. ಅದರ ಜತೆಗೆ ತೊಡುವ ಕಾಸ್ಟ್ಯೂಮ್ ನಿಂದಾಗಿಯೂ ಎಲ್ಲರ ಗಮನ ಸೆಳೆದಿದ್ದಾರೆ. ತುಂಡು ಬಟ್ಟೆಯೇ ನನಗೆ ಕಂಫರ್ಟ್, ಬಟ್ಟೆಗಳೆಂದರೆ ಅಲರ್ಜಿ ಎನ್ನುವ ರೀತಿಯಲ್ಲೇ ಸ್ಟೇಟ್ ಮೆಂಟ್ ಕೊಡುವ ಇವರು, ವಾರದಲ್ಲಿ ಎರಡ್ಮೂರು ಬಾರಿ ವಿವಾದಕ್ಕೆ ಗುರಿಯಾಗುತ್ತಾರೆ. ತಮ್ಮ ನೇರ ನುಡಿಯಿಂದಲೇ ಇಂತಹ ಸನ್ನಿವೇಶಕ್ಕೆ ಸಿಲುಕಿಕೊಳ್ಳುತ್ತಾರೆ. ಇದನ್ನೂ ಓದಿ : ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ
Advertisement
ಉರ್ಫಿ ಇದೀಗ ಮಾಧ್ಯಮವೊಂದರ ಮೇಲೆ ಸಿಟ್ಟುಮಾಡಿಕೊಂಡಿದ್ದಾರೆ. ಅದನ್ನು ತಣ್ಣಗೆ ಹೊಟ್ಟೆಯಲ್ಲಿ ಇಟ್ಟುಕೊಳ್ಳದೇ ಸೋಷಿಯಲ್ ಮೀಡಿಯಾ ಮೂಲಕ ಹೊರ ಹಾಕಿದ್ದಾರೆ. ಗೇಟ್ ನಲ್ಲಿ ಅವರನ್ನು ಕಾಯಿಸಿದರು ಎನ್ನುವ ಕಾರಣಕ್ಕಾಗಿ ‘ನಾನು ಶ್ರೀಮಂತರ ಮಗಳಲ್ಲ. ದಿನದ ಇಪ್ಪತ್ನಾಲ್ಕು ಗಂಟೆ ಬೌನ್ಸರ್ ಇಟ್ಟುಕೊಳ್ಳುವುದಿಲ್ಲ. ದೊಡ್ಡ ದೊಡ್ಡ ಕಾರುಗಳಲ್ಲಿ ಬರುವುದಿಲ್ಲವೆಂದು ನನಗೆ ಹೀಗೆ ಮುಜಗರ ಮಾಡುತ್ತೀರಾ? ನಾನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ : ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್
Advertisement
Advertisement
ಇದನ್ನು ಕೇಳಿದ ಕೆಲವರು ಉರ್ಫಿ ಅವರ ಬೆಂಬಲಕ್ಕೆ ನಿಂತರೆ, ನಿಮಗೆ ವಿವಾದ ಮಾಡಿಕೊಳ್ಳದೇ ನಿದ್ದೆಯೇ ಬರುವುದಿಲ್ಲ. ನಿಮ್ಮ ನಡೆ ಹೀಗೆಯೇ ಇರಲಿ ಎಂದು ವ್ಯಂಗ್ಯವಾಡಿದ್ದಾರೆ. ಕೆಲವರು ನಿಮ್ಮ ನಡೆ ಸರಿ ಇದೆ ಎಂದೂ ಹೇಳಿದ್ದರು. ಇದನ್ನೂ ಓದಿ : ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?
Advertisement
ನೆನ್ನೆಯಷ್ಟೇ ಕಾಸ್ಟ್ಯೂಮ್ ವಿಚಾರವಾಗಿ ಉರ್ಫಿ ಸಖತ್ ಸದ್ದು ಮಾಡಿದ್ದರು. ತಮ್ಮದೇ ಫೋಟೋ ಇರುವ ಬಟ್ಟೆಯನ್ನು ಧರಿಸಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು. ಇವತ್ತು ಮತ್ತೊಂದು ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ.