ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರ ಹೇಳಿಕೆಗೆ ಬಿಜೆಪಿ ಮಾಜಿ ಸಚಿವ ಸುರೇಶ್ ಕುಮಾರ್ ವ್ಯಂಗ್ಯಭರಿತ ಟ್ವೀಟ್ ಮಾಡಿ ಹೆಚ್‍ಡಿಡಿ ಅವರ ಕಾಲೆಳೆದಿದ್ದಾರೆ.
ನನ್ನನ್ನು ವಿರೋಧಿಸಿದವರೆಲ್ಲ ಸ್ವರ್ಗದಲ್ಲಿದ್ದಾರೆ. ನನ್ನೊಂದಿಗೆ ದೈವ ಶಕ್ತಿ ಇರೋದ್ರಿಂದ ನಾನಿನ್ನೂ ಬದುಕಿದ್ದೇನೆ ಎಂಬ ದೇವೇಗೌಡರ ಹೇಳಿಕೆ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುರೇಶ್ ಕುಮಾರ್, ಸ್ವರ್ಗಕ್ಕೆ ತಲುಪಲು ಇಚ್ಛಿಸುವವರು ದೇವೇಗೌಡರನ್ನು ವಿರೋಧಿಸಿದರೆ ಸಾಕು. ಅವರೇ ಪಾಸ್ ಪೋರ್ಟ್, ವೀಸಾ ಮಾಡಿ ಕಳುಹಿಸುತ್ತಾರೆ ಎಂದು ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ.
Advertisement
Advertisement
ಟ್ವೀಟ್‍ನಲ್ಲಿ ಏನಿದೆ?
ಸೋ ಸಿಂಪಲ್. ಯಾರು ಸ್ವರ್ಗಕ್ಕೆ ತಲುಪಲು ಇಚ್ಛಿಸುತ್ತಾರೋ ಅವರು ದೇವೇಗೌಡರನ್ನು ವಿರೋಧಿಸಿದರೆ ಸಾಕು. ದೇವೇಗೌಡರೇ ಪಾಸ್ ಪೋರ್ಟ್, ವೀಸಾ ಎಲ್ಲವನ್ನೂ ವ್ಯವಸ್ಥೆ ಮಾಡಿ ಸ್ವರ್ಗಕ್ಕೆ ತಲುಪಿಸುತ್ತಾರೆ. Any takers! ಎಂದು ವ್ಯಂಗ್ಯವಾಡಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ದೇವೇಗೌಡರ ಹೇಳಿಕೆಯ ಫೋಟೋ ಜೊತೆಗೆ ಟ್ವೀಟ್ ಮಾಡಿದ್ದಾರೆ.
Advertisement
Advertisement
ಈ ಟ್ವೀಟ್‍ಗೆ ಬಹಳಷ್ಟು ಮಂದಿ ರೀ-ಟ್ವಿಟ್ ಮಾಡಿದ್ದು, ಸುರೇಶ್ ಕುಮಾರ್ ಜೊತೆಗೆ ನೆಟ್ಟಿಗರು ಕೂಡ ವ್ಯಂಗ್ಯಭರಿತ ಡೈಲಾಗ್ ಹೊಡೆದು ಹೆಚ್‍ಡಿಡಿ ಅವರ ಕಾಲೆಳೆಯುತ್ತಿದ್ದಾರೆ.