ಬೆಂಗಳೂರು: ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಲಿ. ನಾನು ಸಚಿವ ಸ್ಥಾನ ಬಿಡೋಕೆ ಸಿದ್ಧನಿದ್ದೇನೆ ಎಂದು ಸಚಿವ ಕೆ.ಎನ್.ರಾಜಣ್ಣ (K.N.Rajanna) ಹೇಳಿದರು.
ಸರ್ಕಾರಕ್ಕೆ ಒಂದು ವರ್ಷ ಪೂರ್ಣ ಹಿನ್ನೆಲೆ ನಗರದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಒಬ್ಬರೇ ಇರ್ತಾರೆ ಅಂದಿದ್ರು. ಕೆ.ಸಿ.ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ರು. ಚುನಾವಣೆ ಫಲಿತಾಂಶ ಬರಲಿ. ಆಮೇಲೆ ಪೊಲರೈಸೇಷನ್ ಆಗಬಹುದು. ಅದು ಇಲ್ಲಷ್ಟೇ ಅಲ್ಲ ಎಲ್ಲಾ ಕಡೆಯೂ ಆಗಬಹುದು. ನನ್ನನ್ನ ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಲಿ. ನಾನು ಮಂತ್ರಿ ಸ್ಥಾನ ಬಿಡೋಕೆ ಸಿದ್ಧನಿದ್ದೇನೆ. ಅಧ್ಯಕ್ಷರ ಬದಲಾವಣೆ ಸನ್ನಿವೇಶ ಎದುರಾದರೆ ನಾನು ಸಿದ್ಧ. ಮುಂದೆ ನಾನು ಯಾವ ಚುನಾವಣೆಗೆ ನಿಲ್ಲಲ್ಲ. ಪಕ್ಷಕ್ಕಾಗಿ ತನು ಮನ ಅರ್ಪಿಸಿ ಸಂಘಟನೆ ಮಾಡುತ್ತೇನೆ. ನನ್ನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಅಲ್ಪಸಂಖ್ಯಾತರು ಗಲಭೆ ಮಾಡಿದ್ರೆ ಯಾಕೆ ಖಂಡನೆ ಮಾಡೋದಿಲ್ಲ – ಸಿಎಂಗೆ ಜೋಶಿ ಪ್ರಶ್ನೆ!
Advertisement
Advertisement
ಲೋಕಸಭಾ ಚುನಾವಣೆ ಕುರಿತು ಮಾತನಾಡಿ, 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಲವಿದೆ. ಹಾಸನ ನನ್ನ ಉಸ್ತುವಾರಿ ಜಿಲ್ಲೆ. ತುಮಕೂರು ನನ್ನ ತವರು ಜಿಲ್ಲೆ. ಹಾಸನದಲ್ಲಿ ಒಂದೇ ಕುಟುಂಬವಿತ್ತು. 25 ವರ್ಷಗಳಿಂದ ಅವರೇ ಇದ್ರು. ಈ ಭಾರಿ ನಮ್ಮ ಅಭ್ಯರ್ಥಿಗೆ ಅವಕಾಶವಿದೆ. ಪೆನ್‌ಡ್ರೈವ್ ಪ್ರಕರಣ ಇದಕ್ಕೆ ಪರಿಣಾಮ ಬೀರಲ್ಲ. ಪುಟ್ಟಸ್ವಾಮಿ ಗೌಡರು ರಾಜಕೀಯದಲ್ಲಿದ್ದವರು. ಶ್ರೇಯಸ್ ಪಟೇಲ್ 3,000 ಮತಗಳಿಂದ ಸೋತಿದ್ರು. ಹೊಳೆನರಸೀಪುರದಲ್ಲಿ ಹೆಚ್ಚಿನ ಮತ ಪಡೆದಿದ್ರು. ಅವರ ತಾಯಿ ಕೂಡ ಸೋತಿದ್ದರು. ಹೀಗಾಗಿ ಎಲ್ಲರ ಶ್ರೀರಕ್ಷೆ ನಮ್ಮ ಅಭ್ಯರ್ಥಿಗೆ ಗೆಲುವಾಗಲಿದೆ. ಪ್ರಜ್ವಲ್ ಕೇಸ್ ವಿಚಾರ ಪ್ರಜ್ವಲ್ ವಿರುದ್ಧ ಕ್ರಮ ಕೈಗೊಳ್ತಾರೆ. ಅವರ ಮೂವ್‌ಮೆಂಟ್ ಎಲ್ಲರಿಗೆ ಗೊತ್ತಿದೆ. ಪಾಸ್‌ಪೋರ್ಟ್ ರದ್ದು ಏಕಾಏಕಿ ಆಗಲ್ಲ. ಅವಕಾಶ ಮಾಡಿಕೊಡಬೇಕು. ಕಾನೂನಿನ ಲೋಪವಾಗದಂತೆ ನೋಡಿಕೊಳ್ತಿದ್ದಾರೆ. ಅವರೆಲ್ಲಿದ್ದಾರೆ ಎಲ್ಲರಿಗೂ ಗೊತ್ತಿರುತ್ತದೆ. ಕೇಂದ್ರಕ್ಕೂ ಗೊತ್ತು, ರಾಜ್ಯಕ್ಕೂ ಗೊತ್ತು. ಎಸ್‌ಐಟಿಯವರಿಗೂ ಗೊತ್ತಿರುತ್ತೆ. ಕಾನೂನಿನ ಪ್ರಕಾರವೇ ಮಾಡಬೇಕು. ಪೆನ್‌ಡ್ರೈವ್ ತೋರಿಸಿದ್ದು ಯಾರು? ಪೆನ್‌ಡ್ರೈವ್ ಪಿತಾಮಹನೇ ಕುಮಾರಸ್ವಾಮಿ. ಅವರ ಪೆನ್‌ಡ್ರೈವ್‌ನಲ್ಲಿದ್ದು ಅದೇ. ಪೆನ್‌ಡ್ರೈವ್ ಪಿತಾಮಹನೇ ಕುಮಾರಸ್ವಾಮಿ ಎಂದು ಆರೋಪಿಸಿದರು.
Advertisement
ದೇವರಾಜೇಗೌಡ, ಡಿಕೆಶಿ ಮಾತುಕತೆ ವಿಚಾರವಾಗಿ ಮಾತನಾಡಿ, ಯಾರೋ ಮಾಡಿರ್ತಾರೆ ಮಾತನಾಡಬೇಕಲ್ಲ. ಮಾತನಾಡೋಕೆ ಆಗಲ್ಲ ಅಂತಾ ಹೇಳೋಕೆ ಆಗುತ್ತಾ? ನಮ್ಮನ್ನ ಸಿಕ್ಕಿಸಲು ಪ್ರಯತ್ನ ಮಾಡ್ತಾರೆ. ಹೆಣ್ಣುಮಕ್ಕಳು ಮಾಡಿದ್ರೆ ನಾನೇ ಬ್ಲಾಕ್ ಮಾಡ್ತೇನೆ. ಯಾಕೆ ಬೇಕಪ್ಪ ಇದು ಅಂತಾ ಬ್ಲಾಕ್ ಮಾಡ್ತೀನಿ. ನಾನು ಮೊಬೈಲ್ ಎಕ್ಸ್ಪರ್ಟ್ ಅಲ್ಲ. ಫೋನ್ ಮಾಡೋದು ಅಷ್ಟೇ ನನಗೆ ಗೊತ್ತಿರೋದು. ಹನಿಟ್ರ‍್ಯಾಪ್ ಯಾಕೆ ಆಗುತ್ತದೆ? ಪ್ರಜ್ವಲ್ ಮಾಡಿರೋದು ಘೋರ ಅಪರಾಧ. ರಿಲೀಸ್ ಆಗಿರೋದು ಅಪರಾಧವೇ. ರಮೇಶ್ ಜಾರಕಿಜೊಳಿ ಕೇಸ್‌ನಲ್ಲಿ ಏನಾಯ್ತು? ಅವನಿಗೂ ಇದೇ ಟ್ರ‍್ಯಾಪ್ ತಾನೇ ಮಾಡಿದ್ದು. ಅದರ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಿಜೆಪಿಯಿಂದ ಮಾಜಿ ಶಾಸಕ ರಘುಪತಿ ಭಟ್ ಉಚ್ಚಾಟನೆ
Advertisement
ರಮೇಶ್ ಜಾರಕಿಹೊಳಿ ಕೇಸ್ ಅಲ್ಲೂ ಕ್ರಮವಿಲ್ಲ. ಯಾರು ಮಾಡಿದ್ರು ಅದು ತಪ್ಪೇ ಅಲ್ವೇ. ಪ್ರೈವಸಿಗೆ ಅಲ್ಲೂ ಹೊಡೆತ ಬಿದ್ದಿಲ್ವೇ. ಯಾಕೆ ಆಗ ಕ್ರಮ ಜರುಗಿಸಲಿಲ್ಲ. ರೇವಣ್ಣ ಕಿಡ್ನ್ಯಾಪ್ ಕೇಸ್‌ನಲ್ಲಿ ಏನಾಗಿದ್ಯೋ? ಜೆಸಿಗೆ ಕಳಿಸ್ತಾರೆ ಅಂದ್ರೆ ಏನೋ ಇರಬೇಕು. ಕುಮಾರಸ್ವಾಮಿ ನಮ್ಮ ಕುಟುಂಬ ಬೇರೆ, ಅವರದ್ದು ಬೇರೆ ಅಂದಿದ್ದಾರಲ್ಲಾ. ದೇವೇಗೌಡರ ಪತ್ರಕ್ಕೆ ಇನ್ನೇನಿದೆ ಮಾನ್ಯತೆ. ನಮ್ಮ ಕುಟುಂಬ ಅಂದ್ರೆ ಹೇಗೆ? ಕುಮಾರಸ್ವಾಮಿ ಎರಡು ಬೇರೆ ಬೇರೆ ಅಂತಾರಲ್ಲ. ಯಾವ ಕುಟುಂಬಕ್ಕೆ ಅಗೌರ ಆಗ್ತಿದೆ ಹೇಳಬೇಕಲ್ಲ. ರೇವಣ್ಣನದೋ, ಕುಮಾರಸ್ವಾಮಿದೋ ಹೇಳಬೇಕಲ್ಲ ಎಂದರು.
ತಲೆ ಹಿಡಿಯೋರು ಅವರೇ ಎಂಬ ಕುಮಾರಸ್ಚಾಮಿ ಟೀಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಸುತ್ತ ಇರೋರು ಯಾರು? ಅಲ್ಲಿರುವವರು ಅವರೇ ತಾನೇ. ಅದರ ಬಗ್ಗೆ ಕುಮಾರಸ್ವಾಮಿ ಕೇಳಿ. ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಸರಿಯಿದೆ. ವಿಪಕ್ಷದಲ್ಲಿರೋರು ಅರೋಪ ಮಾಡೋಕೆ ಇರೋರು. ಅವರ ಪರವಾಗಿ ಮಾತನಾಡೋಕೆ ಅಂತಾ ಹೇಳೋಕೆ ಆಗುತ್ತಾ. ಕುಮಾರಸ್ವಾಮಿಗೆ ಬುದ್ಧಿಭ್ರಮಣೆ ಆಗಿದೆ ಅದಕ್ಕೆ ಹೀಗೆ ಮಾತಾಡ್ತಿದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹರೀಶ್ ಪೂಂಜಾ ಎಂಎಲ್‍ಎ ಅಂತಾ ಬಿಟ್ಟು ಬಿಡೋಕೆ ಆಗುತ್ತಾ: ಪ್ರತಿಪಕ್ಷಗಳಿಗೆ ಸಿಎಂ ಪ್ರಶ್ನೆ
ಕುಟುಂಬನೇ ಬೇರೆ ಬೇರೆ ಆಗಿದೆ ಅಲ್ವಾ? ಕುಮಾರಸ್ವಾಮಿನೇ ನಮ್ಮದು ಬೇರೆ ಕುಟುಂಬ ಎಂದಿದ್ದಾರೆ. ಈಗ ರೇವಣ್ಣ ಕುಟುಂಬಕ್ಕೆ ತೊಂದರೆಯಾಗಿದ್ಯಾ? ಹೆಚ್‌ಡಿಕೆ ಕುಟುಂಬಕ್ಕಾ? ಯಾವ ಕುಟುಂಬಕ್ಕೆ ಅಗೌರವ ಆಗ್ತಿದೆ ಅದನ್ನ ಹೇಳಲಿ. ಎಲ್ಲಾ ಗೊಂದಲ ಬಗೆಹರಿಯುತ್ತೆ. ರಾಕೇಶ್ ವಿಚಾರದಲ್ಲಿ ಯಾರಿಗೂ ಏನ್ ಗೊತ್ತಿಲ್ಲ. ನಾವ್ ಹೇಳಿದ್ರೆ ನೂರ್ ಇದೆ ಹೇಳೋಕೆ. ಬೇರೆಯವರ ಮನಸ್ಸನ್ನ ನೋಯಿಸೋದು ಸರಿಯಲ್ಲ ಎಂದು ಹೆಚ್‌ಡಿಕೆಗೆ ಟಾಂಗ್ ಕೊಟ್ಟರು.