ಬೆಂಗಳೂರು: ನನಗೆ ಅವಕಾಶ ಕೊಟ್ಟಿದ್ದು, ಬೆನ್ನೆಲುಬಾಗಿ ನಿಂತಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂದು ಮಾಜಿ ಸಂಸದೆ ರಮ್ಯಾ ಸರಣಿ ಟ್ವೀಟ್ ಮಾಡಿದ್ದಾರೆ.
Advertisement
ಬೆಳಗ್ಗಿನಿಂದ ರಮ್ಯಾ ಟ್ವೀಟ್ ವಾರ್ ಪ್ರಾರಂಭಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಟಾಂಗ್ ಕೊಟ್ಟಿದ್ದರು. ಈಗ ಮತ್ತೆ ಮುಂದುವರಿದ ಅವರು, ನನಗೆ ಅವಕಾಶ ಕೊಟ್ಟಿದ್ದು, ಬೆನ್ನೆಲುಬಾಗಿ ನಿಂತಿದ್ದು ರಾಹುಲ್ ಗಾಂಧಿ. ನನಗೆ ಅವಕಾಶ ನೀಡಲಾಗಿದೆ ಅಂತ ಯಾರದ್ರೂ ಹೇಳಿದ್ರೆ ಅವರು ಅವಕಾಶವಾದಿಗಳು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಯಾರ್ಯಾರಿಗೆ ಏನು ನೋವಿದೆಯೋ ಗೊತ್ತಿಲ್ಲ: ರಮ್ಯಾ ಟ್ವೀಟ್‍ಗೆ ಉತ್ತರ ಕೊಟ್ಟ ಡಿಕೆಶಿ
Advertisement
Advertisement
ಕಾಂಗ್ರೆಸ್ ನಿಂದ 8 ಕೋಟಿ ಪಡೆದಿದ್ದೇನೆ ಅಂತಾ ಸುಳ್ಳುಸುದ್ದಿ ಹರಿಬಿಡಲಾಗಿದೆ. ನಾನು ಓಡಿ ಹೋಗಿದ್ದೇನೆ ಅಂತಾ ಸುಳ್ಳು ಸುದ್ದಿ ಹರಡಿಸಿದ್ರು. ನನ್ನ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಲಾಯ್ತು. ನಾನು ಎಲ್ಲಿಯೂ ಓಡಿ ಹೋಗಿಲ್ಲ. ನನ್ನ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದೆ. ನಾನು ಮೌನವಾಗಿದ್ದೇ ತಪ್ಪಾಯ್ತು ಎಂದು ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
Humble request to @kcvenugopalmp to please clarify with the media about this whenever you’re in Karnataka next. The least you can do for me Venugopal ji, so I don’t have to live with this abuse and trolling for the rest of my life.
— Divya Spandana/Ramya (@divyaspandana) May 12, 2022
ವೇಣುಗೋಪಾಲ್ ಜೀ ಮುಂದಿನ ಬಾರಿ ರಾಜ್ಯಕ್ಕೆ ಭೇಟಿ ನೀಡಿದಾಗ ಈ ಬಗ್ಗೆ ಸ್ಪಷ್ಟನೆ ಕೊಡಿ. ಈ ಸುಳ್ಳು ಸುದ್ದಿಯಿಂದ ನನ್ನನ್ನು ಮುಕ್ತಗೊಳಿಸಿ. ಇದು ನೀವು ನನಗೆ ಮಾಡಬಹುದಾದ ಕನಿಷ್ಠ ಸಹಾಯ. ಇಲ್ಲದೇ ಹೋದರೆ ನಾನು ನನ್ನ ಜೀವನದುದ್ದಕ್ಕೂ ಈ ನಿಂದನೆ ಮತ್ತು ಟ್ರೋಲಿಂಗ್‍ನೊಂದಿಗೆ ಇರಬೇಕಾಗುತ್ತೆ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಿಂದಲೇ ಟ್ರೋಲ್‍ಗೆ ಕರೆ – ನನ್ನನ್ನು ನಾನೇ ಟ್ರೋಲ್ ಮಾಡ್ಕೋತಿನಿ ಎಂದ ರಮ್ಯಾ