– ಬಿಜೆಪಿ ಇಲ್ಲದೇ ಇದ್ದಿದ್ರೆ ದೇಶದಲ್ಲಿ ಗಲಭೆ, ಹಗರಣಗಳು ನಡೆಯುತ್ತಿರಲಿಲ್ಲ ಎಂದು ಟಾಂಗ್
ಮುಂಬೈ: ಕಾಂಗ್ರೆಸ್ ನಾಯಕತ್ವವಿಲ್ಲದೇ ದೇಶವು ಸ್ವಾತಂತ್ರ್ಯ ಗಳಿಸುತ್ತಿರಲಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸುತ್ತಿರಲಿಲ್ಲ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ನಾಯಕ ಸಂಜಯ್ ರಾವುತ್ (Sanjay Raut) ಅಭಿಪ್ರಾಯಪಟ್ಟಿದ್ದಾರೆ.
Advertisement
ದೇಶವನ್ನು ಒಗ್ಗಟ್ಟಿನಿಂದ ಇರಿಸಿದ್ದಕ್ಕಾಗಿ ಕಾಂಗ್ರೆಸ್‌ಗೆ (Congress) ಗೌರವ ಸಲ್ಲಿಸಿದ ರಾವುತ್, ಕಾಂಗ್ರೆಸ್ ಇಲ್ಲದಿದ್ದರೆ ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ. ದೇಶಕ್ಕೆ ನಾಯಕತ್ವ ಸಿಗುತ್ತಿರಲಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಾವು ಪ್ರಗತಿ ಸಾಧಿಸುತ್ತಿರಲಿಲ್ಲ. ಬಿಜೆಪಿಗೆ ಎಂದಿಗೂ ಅರ್ಥವಾಗದ ಇಂತಹ ಹಲವು ವಿಷಯಗಳಿವೆ. ಏಕೆಂದರೆ ಅವರು ದೇಶಕ್ಕಾಗಿ ಯೋಚಿಸುವುದಿಲ್ಲ. ಅವರು ಉದ್ಯಮಿಗಳ ಬಗ್ಗೆ ಮಾತ್ರ ಯೋಚಿಸುತ್ತಾರೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಸೋಮವಾರ ಬಿಜೆಪಿ ಸೇರ್ಪಡೆ: ಡಾ. ಮಂಜುನಾಥ್
Advertisement
Advertisement
ಕಾಂಗ್ರೆಸ್ ಇಲ್ಲದಿದ್ದರೆ, ಪಾಕಿಸ್ತಾನವು ಎರಡು ಭಾಗಗಳಾಗಿ ವಿಭಜನೆಯಾಗುತ್ತಿರಲಿಲ್ಲ. ದೇಶವು ಒಗ್ಗಟ್ಟಾಗಿ ಉಳಿಯುತ್ತಿರಲಿಲ್ಲ. ಆದರೆ ಬಿಜೆಪಿ ದೇಶವನ್ನು ಬಡವಾಗಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement
‘ಬಿಜೆಪಿ (BJP) ಇಲ್ಲದಿದ್ದಲ್ಲಿ ಬೇರೆ ವಿಷಯಗಳೇ ಇರುತ್ತಿರಲಿಲ್ಲ. ದೇಶದಲ್ಲಿ ಗಲಭೆಗಳು ನಡೆಯುತ್ತಿರಲಿಲ್ಲ. ದೇಶದ ರೂಪಾಯಿ ಗಟ್ಟಿಯಾಗುತ್ತಿತ್ತು. ಸಾಲವೂ ಕಡಿಮೆಯಾಗುತ್ತಿತ್ತು. ರಫೇಲ್‌ನಿಂದ ಚುನಾವಣಾ ಬಾಂಡ್‌ವರೆಗೆ ಹಗರಣಗಳು ನಡೆಯುತ್ತಿರಲಿಲ್ಲ ಎಂದು ರಾವುತ್ ಟೀಕಿಸಿದ್ದಾರೆ. ಇದನ್ನೂ ಓದಿ: ಸಿಎಂ ಕೇಜ್ರಿವಾಲ್‌ಗೆ ಬಿಗ್ ರಿಲೀಫ್ – ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಮತ್ತು ನಟಿ ಸ್ವರಾ ಭಾಸ್ಕರ್ ಭಾನುವಾರ ಮುಂಬೈನ ಮಣಿ ಭವನ ಸಂಗ್ರಹಾಲಯದಿಂದ ‘ಜನ್ ನ್ಯಾಯ್ ಪಾದಯಾತ್ರೆ’ ನಡೆಸಿದರು. ಯಾತ್ರೆಯು ಮಣಿಭವನದಿಂದ ಆಗಸ್ಟ್ ಕ್ರಾಂತಿ ಮೈದಾನದವರೆಗಿನ ನಡೆಯಿತು.