ಬೆಂಗಳೂರು: ದೇಶದ ರಾಜಕೀಯದಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿರುವ ವಿಷಯ ‘ಆಕ್ಸಿಡೆಂಟಲ್ ಪಿಎಂ’ ಸಿನಿಮಾ. ಈ ಚಿತ್ರದ ಟ್ರೇಲರ್ ವಿವಾದಗಳನ್ನು ಸೃಷ್ಟಿಸಿದ ಸಂದರ್ಭದಲ್ಲೇ ರಾಜ್ಯ ಬಿಜೆಪಿ ಘಟಕ ಸಿಎಂ ಕುಮಾರಸ್ವಾಮಿ ಅವರನ್ನು ಆಕ್ಸಿಡೆಂಟಲ್ ಸಿಎಂ ಎಂದು ಕರೆದಿದೆ.
ಈ ಕುರಿತು ರಾಜ್ಯ ಘಟಕದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ಆಕ್ಸಿಡೆಂಟಲ್ ಸಿಎಂ ಎಂಬ ಚಿತ್ರ ಮಾಡಿದರೆ ಸಿಎಂ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂದು ಪ್ರಶ್ನೆ ಮಾಡಿ ಕುಮಾರಸ್ವಾಮಿ ಅವರಿಗೆ ಟ್ಯಾಗ್ ಮಾಡಿ ಕಾಲೆಳೆದಿದೆ.
Advertisement
If there was a movie titled #AccidentalCM who will play the role of @hd_kumaraswamy ?
— BJP Karnataka (@BJP4Karnataka) December 29, 2018
Advertisement
ಈ ಹಿಂದೆ ಹಲವು ಬಾರಿ ತಮ್ಮನ್ನು ತಾವು ‘ಸಾಂದರ್ಭಿಕ ಶಿಶು’ ಎಂದು ಕರೆದುಕೊಂಡಿರುವ ಸಿಎಂ ಕುಮಾರಸ್ವಾಮಿ ಅವರಿಗೆ ಬಿಜೆಪಿ ಈ ಮೂಲಕ ಟಾಂಗ್ ನೀಡಿದೆ. ಬಿಜೆಪಿಯ ಈ ಟ್ವೀಟ್‍ಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಪ್ರತಿಕ್ರಿಯೆ ನೀಡಿದ್ದು, ಸಿನಿಮಾಗೆ ‘ಸಾಂದರ್ಭಿಕ ಶಿಶು’ ಎಂದು ಕನ್ನಡಲ್ಲೇ ಹೆಸರಿಟ್ಟರೆ ಬೇಗ ಅರ್ಥವಾಗುತ್ತದೆ ಎಂದು ಸಲಹೆ ನೀಡಿದ್ದರೆ. ಈ ಪಾತ್ರವನ್ನು ಕುಮಾರಸ್ವಾಮಿ ಅವರೇ ನಿರ್ವಹಿಸಲು ಸೂಕ್ತ. ಸಿಎಂ ಎಚ್‍ಡಿಕೆ ಉತ್ತಮವಾಗಿ ನಟಿಸಬಲ್ಲರು ಎಂದು ಮತ್ತು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಬಿಜೆಪಿ ಟ್ವೀಟ್‍ಗೆ ಕೆಲ ಟ್ವಿಟ್ಟಿಗರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕುಮಾರಸ್ವಾಮಿರನ್ನು ಹೀಯಾಳಿಸುವ ಅರ್ಹತೆ ನಿಮಗೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧ ಟೀಕೆ ಮಾಡಿ ಬರೆದುಕೊಂಡಿದ್ದಾರೆ.
Advertisement
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 37 ಸ್ಥಾನ ಗೆದ್ದು, 80 ಸ್ಥಾನ ಪಡೆದಿರುವ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಸರ್ಕಾರ ರಚನೆ ಮಾಡಿರುವ ಸಿಎಂ ಕುಮಾರಸ್ವಾಮಿ ಅವರು ಹಲವು ಬಾರಿ ತಾವು ‘ಸಾಂದರ್ಭಿಕ ಶಿಶು’ ಎಂದು ಕರೆದುಕೊಂಡಿದ್ದರು. ಈ ವೇಳೆಯೂ ಬಿಜೆಪಿ ನಾಯಕರು ಸಿಎಂ ಮಾತನ್ನು ವ್ಯಂಗ್ಯ ಮಾಡಿ ಟೀಕೆ ಮಾಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv