ಕೋಲಾರ: ಮುಡಾದಲ್ಲಿ (Muda Case) ಸಿದ್ದರಾಮಯ್ಯ (Siddaramaiah) ಭ್ರಷ್ಟಾಚಾರ ಮಾಡಿಲ್ಲವೆಂದರೆ ನಿವೇಶನಗಳನ್ನು ಏಕೆ ವಾಪಸ್ ಕೊಟ್ಟರು, ಮುಡಾದಲ್ಲಿ 5,000 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಸಂಸದ ಎಸ್ ಮುನಿಸ್ವಾಮಿ (S Muniswamy) ಟಾಂಗ್ ಕೊಟ್ಟಿದ್ದಾರೆ.
Advertisement
ಇ.ಡಿಯನ್ನು ಕೇಂದ್ರ ಸರ್ಕಾರ ದರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಕೋಲಾರದ (Kolar) ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಮುಡಾ ಹಗರಣದಲ್ಲಿ 14 ನಿವೇಶನಗಳಿಗೆ ತಮಗೆ ಸಂಬಂಧವಿಲ್ಲವೆಂದು ಹೇಳಿದವರು, ನಂತರ 65 ಕೋಟಿ ಕೊಟ್ಟರೆ ಬಿಟ್ಟು ಕೊಡುವುದಾಗಿ ಹೇಳಿದರು. ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು ಮುಡಾ ಡಿನೋಟಿಫಿಕೇಷನ್ ಆಗುವಂತಹ ಸಂದರ್ಭದಲ್ಲಿ ಎಸ್‌ಸಿ ಭೂಮಿಯನ್ನು ಕಾನೂನು ಬಾಹಿರವಾಗಿ ಪ್ರಭಾವ ಬೀರಿ ತಮ್ಮ ಬಾಮೈದುನ ಹೆಸರಿಗೆ ಮಾಡಿದ್ದಾರೆ. ನಂತರ ದೇವರಾಜ್ ಅವರ ಮುಖಾಂತರ ಸಿದ್ದರಾಮಯ್ಯ ಅವರ ಪತ್ನಿ ಹೆಸರಿಗೆ ಮಾಡಿಸಿಕೊಂಡರು. ಇದರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರವಿಲ್ಲವಾ? ಮುಡಾ ದಾಖಲೆಗಳಲ್ಲಿ ವೈಟ್ ಲೆಡ್ ಹಾಕಿ ದಾಖಲೆ ತಿರುಚಿದವರು ಯಾರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: 2028ರ ವರೆಗೆ ಈ ಸರ್ಕಾರ ನಡೆಯಲ್ಲ, ಮತ್ತೆ ನಾನೇ ಸಿಎಂ: ಹೆಚ್‌ಡಿಕೆ
Advertisement
Advertisement
ಮುಡಾ ಹಗರಣದಲ್ಲಿ ಭ್ರಷ್ಟಾಚಾರ ಆಗಿರುವ ಕಾರಣ ಅದರ ಅಧ್ಯಕ್ಷ ಮರೀಗೌಡ ರಾಜೀನಾಮೆ ಕೊಟ್ಟಿದ್ದಾರೆ. ಭ್ರಷ್ಟಚಾರ ನಡೆದಿಲ್ಲವೆಂದರೆ ಅವರು ಏಕೆ ರಾಜೀನಾಮೆ ಕೊಟ್ಟರು? ಆದರೆ ಈಗ ಇ.ಡಿ ತನಿಖೆ ಮಾಡುವುದರಲ್ಲಿ ತಪ್ಪೇನಿದೆ? ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿರುವುದು ಒಪ್ಪಿಕೊಂಡು ಸಚಿವ ನಾಗೇಂದ್ರ ರಾಜೀನಾಮೆ ನೀಡಿಲ್ಲವಾ? ನಕಲಿ ಕೋ ಆಪರೇಟಿವ್ ಸೊಸೈಟಿಗಳನ್ನು ಓಪನ್ ಮಾಡಿ ಹಣ ವರ್ಗಾವಣೆ ಮಾಡಿದರು. ಇಷ್ಟೆಲ್ಲಾ ನಡೆದರೂ ರಾಜೀನಾಮೆ ನೀಡದ ಮೊಂಡು ಆಟವಾಡುತ್ತಿರುವ ಸಿದ್ದರಾಮಯ್ಯ ಅವರೇ ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಹರಿಹಾಯ್ದರು. ಇದನ್ನೂ ಓದಿ: ಮಠದಲ್ಲಿ ಹುಕ್ಕೇರಿ ಕೆಡಿಪಿ ಸಭೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ
Advertisement