ಧಾರವಾಡ: ಸಿದ್ದರಾಮಯ್ಯ (Siddaramaiah) ಅವರು ಕೂಡಲೇ ಮುಡಾ ಸೈಟ್‌ಗಳನ್ನು ವಾಪಸ್ ಕೊಡಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ (S R Hiremath) ಹೇಳಿದರು.
ಧಾರವಾಡದಲ್ಲಿ (Dharwad) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ನೈತಿಕತೆ ಎನ್ನುವುದು ಇದ್ದರೆ ಕೂಡಲೇ ಅವರು ಸೈಟ್‌ಗಳನ್ನು ವಾಪಸ್ ಕೊಡಬೇಕು. ಮುಡಾ ಸೈಟ್ (MUDA) ಸಿದ್ದರಾಮಯ್ಯನವರ ಹೆಸರಿನಲ್ಲಿಲ್ಲ, ಅವರ ಪತ್ನಿ ಹೆಸರಿನಲ್ಲಿದೆ. ಆದ ಕಾರಣ ಅವರು ಸೈಟ್‌ಗಳನ್ನು ವಾಪಸ್ ಕೊಡಬೇಕು ಎಂದು ತಿಳಿಸಿದರು.ಇದನ್ನೂ ಓದಿ: ರಾಜ್ಯದಲ್ಲಿ ಏನಾದರೂ ಗಲಾಟೆಯಾದರೆ ಅದಕ್ಕೆ ರಾಜ್ಯಪಾಲರೇ ಹೊಣೆ – ಜಮೀರ್ ಅಹ್ಮದ್ ಎಚ್ಚರಿಕೆ
ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೋ ಅಥವಾ ಬಿಡಬೇಕೋ ಎನ್ನುವುದು ರಾಜಕೀಯ ನಿರ್ಧಾರ. ಆದರೆ ಸಿದ್ದರಾಮಯ್ಯ ಅವರು ರಾಜೀನಾಮೆ ಬಗ್ಗೆ ನಮ್ಮ ಪಕ್ಷ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ. ಸಿಎಂ ಅವರು ಮುಡಾದಲ್ಲಿ ನನ್ನ ಸಹಿ ಎಲ್ಲೂ ಇಲ್ಲ ಎಂದು ಹೇಳುವ ಬದಲು ಸೈಟ್‌ಗಳನ್ನು ವಾಪಸ್ ಕೊಡಬೇಕು, ರಾಜಕೀಯದಲ್ಲಿ ಇರುವವರಿಗೆ ಜನರ ಬಗ್ಗೆ ಚಿಂತೆಯೇ ಇಲ್ಲದಂತಾಗಿದೆ. ಸಚಿವರು ಇರುವಾಗಲೇ ಅವರ ಗಮನಕ್ಕೆ ಬಾರದೇ ಹಗರಣ ಆಗುತ್ತದೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಸಿಎಂ ಅವರು ಮುಡಾದಲ್ಲಿ ನನ್ನ ಸಹಿ ಎಲ್ಲೂ ಇಲ್ಲ ಎಂದು ಹೇಳುವ ಬದಲು ಸೈಟ್‌ಗಳನ್ನು ವಾಪಸ್ ಕೊಡಬೇಕು, ರಾಜಕೀಯದಲ್ಲಿ ಇರುವವರಿಗೆ ಜನರ ಬಗ್ಗೆ ಚಿಂತೆಯೇ ಇಲ್ಲದಂತಾಗಿದೆ. ಸಚಿವರು ಇರುವಾಗಲೇ ಅವರ ಗಮನಕ್ಕೆ ಬಾರದೇ ಹಗರಣ ಆಗುತ್ತದೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಇನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಾ ಖಾವೋಂಗಾ ನಾ ಖಾನೆದೂಂಗಾ ಎಂದು ಹೇಳಿದ್ದರು. ಆದರೆ ರಾಜ್ಯದ ಗುತ್ತಿಗೆದಾರರು ರಾಜ್ಯ ಬಿಜೆಪಿ (BJP) ನಾಯಕರ ವಿರುದ್ಧವೇ ಮೋದಿ ಅವರಿಗೆ ಪತ್ರ ಬರೆದಿದ್ದರು. ಬಿಜೆಪಿಯಲ್ಲಿ ಎಲ್ಲಾ ಕೊಳೆತಿದೆ. ಮೊದಲು ಅದನ್ನು ಅವರು ಸ್ವಚ್ಛ ಮಾಡಿಕೊಳ್ಳಲಿ. ಆಗ ಮಾತ್ರ ಬಿಜೆಪಿಗೆ ಭವಿಷ್ಯ ಇದೆ. ಬಿಜೆಪಿ ತನ್ನ ನಾಟಕ ಬಿಟ್ಟು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ನನ್ನ ರಾಜೀನಾಮೆ ಕೇಳೋ ಅಶೋಕ್ ಮೊದಲು ವಾಸ್ತವಾಂಶ ತಿಳಿಯಲಿ: ಸಿದ್ದರಾಮಯ್ಯ
ಮುಡಾ ವಿಷಯದಲ್ಲಿ ಬಿಜೆಪಿಯವರು ಸಿಎಂ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಈ ಕೆಸರೆರಚಾಟ ಬೇಡ, ಬಿಜೆಪಿಯವರು ಏನು ಸಾಚಾನಾ, ಗಣಿ ಭ್ರಷ್ಟಾಚಾರದಲ್ಲಿ ತೊಡಗಿದವರು, ವಾಲ್ಮೀಕಿ ನಿಗಮದ ಹಗರಣದಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ಮೇಲೆ ಶೇ.40 ಕಮೀಷನ್ ಆರೋಪ ಮಾಡಿ ಕಾಂಗ್ರೆಸ್‌ನವರು (Congress) ಅಧಿಕಾರಕ್ಕೆ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.