ಹಾಸನ: ಎಂಎಲ್‍ಸಿ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಕುಟುಂಬದವರಿಗೆ ಟಿಕೆಟ್ ಕೊಟ್ಟರೆ ನಮ್ಮ ಅಭ್ಯರ್ಥಿ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಜೆಡಿಎಸ್‍ನ ಕುಟುಂಬ ರಾಜಕಾರಣದಿಂದ ನಾವು ಗೆಲುವಿಗೆ ಹತ್ತಿರವಾಗಲಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ಎಂಎಲ್‍ಸಿ ಗೋಪಾಲಸ್ವಾಮಿ ಹಾಸನದ ಚನ್ನರಾಯಪಟ್ಟಣದಲ್ಲಿ ವ್ಯಂಗ್ಯವಾಡಿದ್ದಾರೆ.
Advertisement
ಹಾಸನದಲ್ಲಿ ಎಂಎಲ್‍ಸಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಜೆಡಿಎಸ್‍ನಿಂದ ಭವಾನಿ ರೇವಣ್ಣ ಅಥವಾ ಸೂರಜ್ ರೇವಣ್ಣ ಇಬ್ಬರಲ್ಲಿ ಒಬ್ಬರ ಹೆಸರು ಅಂತಿಮಗೊಳ್ಳಲಿದೆ. ಕಾಂಗ್ರೆಸ್‍ನಿಂದ ಹಾಲಿ ಎಂಲ್‍ಸಿ ಎಂ.ಎ.ಗೋಪಾಲಸ್ವಾಮಿ ಅಥವಾ ಎಂ.ಶಂಕರ್ ಅಭ್ಯರ್ಥಿ ಆಗೋದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಮಾತನಾಡಿದ ಗೋಪಾಲಸ್ವಾಮಿ ಅವರು, ನನಗೆ ಆರು ವರ್ಷ ಸಹಕಾರ ನೀಡಿದ ಎಲ್ಲರಿಗೂ ಅಬಾರಿಯಾಗಿದ್ದೇನೆ. ಈಗಾಗಲೇ ಡಿ.ಕೆ.ಸುರೇಶ್, ಧೃವನಾರಾಯಣ್ ನೇತೃತ್ವದಲ್ಲಿ ಹಾಸನ ಜಿಲ್ಲೆಯ ನೂರು ಜನ ಕಾಂಗ್ರೆಸ್ ಮುಖಂಡರನ್ನು ಕರೆದು ಸಭೆ ನಡೆಸಿದ್ದಾರೆ. ಹಾಸನದಿಂದ ನನ್ನ ಮತ್ತು ಎಮ್.ಶಂಕರ್ ಹೆಸರು ಅಂತಿಮಗೊಳಿಸಿದೆ. ಪಕ್ಷ ಹೇಳಿದರೆ ಮತ್ತೆ ಸ್ಪರ್ಧಿಸುತ್ತೇನೆ. ಪಕ್ಷ ಹೊಸಬರಿಗೆ ಅವಕಾಶ ಕೊಡಬೇಕು ಎಂಬುದಿದೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಗೃಹಮಂತ್ರಿಯಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ: ಸುರ್ಜೆವಾಲಾ
Advertisement
Advertisement
ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ, ಇಲ್ಲಾ ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೋ ಅವರ ಗೆಲುವಿಗೆ ಶ್ರಮಿಸುತ್ತೇನೆ. ಡಿಕೆಶಿ, ಸಿದ್ದರಾಮಯ್ಯ ಭಾನುವಾರ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ಅಭ್ಯರ್ಥಿ ಯಾರೆಂದು ಅಂತಿಮ ತೀರ್ಮಾನ ಆಗುತ್ತೆ. ಪಕ್ಷದ ಸೂಚನೆಯಂತೆ ಇಬ್ಬರು ಈಗಾಗಲೇ ಮೂರು ತಾಲೂಕುಗಳಿಗೆ ಭೇಟಿ ನೀಡಿದ್ದೇವೆ. ಜೆಡಿಎಸ್ ಪಕ್ಷದಂತೆ ಒಂದು ಓನರ್ ಪಕ್ಷವಾದರೆ ಯಾರು ಹೇಳುತ್ತಾರೋ ಅದು ತೀರ್ಮಾನ ಆಗುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷ. ಕಳೆದ ಬಾರಿ ಜೆಡಿಎಸ್ ಶಾಸಕರು, ಸಂಸದರಿದ್ದರೂ ನಾನು ಗೆದ್ದಿದ್ದೇನೆ ಎಂದು ಅಭಿಪ್ರಾಯ ಹಂಚಿಕೊಂಡರು. ಇದನ್ನೂ ಓದಿ: ಪ್ಯಾರಾ ಒಲಿಂಪಿಕ್ಸ್ ಆಟಗಾರ ಸುಹಾಸ್ ಯತೀರಾಜ್‍ಗೆ ಬಂಪರ್ – ವಿಶೇಷ ಗೌರವಕ್ಕೆ ಭಾಜನರಾದ ಕನ್ನಡಿಗ
Advertisement