ಬೆಂಗಳೂರು: ವಕ್ಫ್ (Waqf) ವಿಚಾರ ನಿಲ್ಲಿಸದಿದ್ದರೆ ರಕ್ತಕ್ರಾಂತಿ ಆಗುತ್ತೆ. ಸಾಮಾನ್ಯರಿಗೆ ನೀವು ತೊಂದರೆ ಕೊಡಬೇಡಿ. ಕರ್ನಾಟಕದಲ್ಲಿ ಮುಂದೆ ಏನೇನಾಗುತ್ತೋ ಗೊತ್ತಿಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ (V Somanna) ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಲ್ಲಿ (Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನಿಂತ ನೀರಾಗಿದೆ. ಜನರನ್ನು ಬೇರೆ ಕಡೆ ಡೈವರ್ಟ್ ಮಾಡುತ್ತಿದ್ದಾರೆ. ಹಿಂದೆ ಸಿದ್ದರಾಮಯ್ಯ (Siddaramaiah) ಸರ್ಕಾರ ನಾನು ನೋಡಿದ್ದೆ. ಆದರೆ ಈಗಿನ ಒಂದೂವರೆ ವರ್ಷದ ಆಡಳಿತ ಎಷ್ಟು ಮಾಡಿದೆ. ಸಿದ್ದರಾಮಯ್ಯ ಪಂಜರದ ಗಿಳಿ ಆಗಿದ್ದಾರೆ. ಮುಖ್ಯಕಾರ್ಯದರ್ಶಿಗಳು ಹೇಗೆ ನೋಟಿಸ್ ಕೊಡುತ್ತಾರೆ? ವಕ್ಫ್ ಬೋರ್ಡ್ ಆಸ್ತಿ ಕ್ರಮಕ್ಕೆ ಹೇಗೆ ಆದೇಶ ಮಾಡುತ್ತಾರೆ? ಅವರಿಗೆ ಸಿಎಂ ಅಭಯ ಇರಬೇಕಲ್ಲ. ಇನ್ನು ಮೇಲಾದರೂ ವಾಸ್ತವಾಂಶಕ್ಕೆ ಆದ್ಯತೆ ಕೊಡಿ. ನಿಮ್ಮ ಬಾಲ ಬಡುಕರನ್ನು ದೂರವಿಡಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: Tumakuru| 214 ಕೋಟಿ ರೂ. ವೆಚ್ಚದ ಕಾಮಗಾರಿಗೆ ಅನುಮೋದನೆ: ಪರಮೇಶ್ವರ್
Advertisement
Advertisement
ಸಿಎಂ ಕಣ್ಣಿದ್ದೂ ಕುರುಡರಾಗಿದ್ದಾರೆ. ಕಿವಿ ಇದ್ದೂ ಇಲ್ಲದಂತಾಗಿದೆ. ಬಿಜೆಪಿಯ ವ್ಯವಸ್ಥಿತ ಪಿತೂರಿ ಎನ್ನುತ್ತಾರೆ. ಎಲ್ಲಿದೆ ರೀ ಪಿತೂರಿ? ಬಿಜೆಪಿ ಇಲ್ಲದಿದ್ದರೆ ಎಷ್ಟು ಜನ ಸಾಯುತ್ತಿದ್ದರೋ? ನೀವು ಕರ್ನಾಟಕವನ್ನು ಉಳಿಸ್ತೀರಾ? ಹಿಂದೂ ದೇಶ ಹಿಂದೂ ದೇಶವಾಗಿ ಇರುತ್ತಾ? ಕಾಂಗ್ರೆಸ್ ಬಂದರೆ ಪಾಪದ ಕೊಡ ತುಂಬುತ್ತೆ. ಕೇರಳದ ಸಿಎಂ ಫುಡ್‌ಕಿಟ್ ಕೊಡೋದು ಸರಿಯಲ್ಲ ಎನ್ನುತ್ತಾರೆ. ಜನರ ಬಗ್ಗೆ ಕಾಳಜಿ ಇದ್ದರೆ ನೀವು ಮೊದಲು ಮನುಷ್ಯರಾಗಿ. ಅಹಿಂದ ನಾಯಕ ಅಂತ ಯಾಕೆ ಹೇಳ್ತೀರಾ? ನಿಮಗೆ ಕಷ್ಟಬಂದಾಗ ಅಹಿಂದ ಅಂತೀರಾ? ಯಾವಾಗ ಖುಷಿಯಾಗುತ್ತೆ ಆಗ ತಲೆಮೇಲೆ ಕೈ ಇಡುತ್ತೀರೀ ಎಂದು ಹರಿಹಾಯ್ದರು. ಇದನ್ನೂ ಓದಿ: Chikkaballapur| ಸಚಿವ ಡಾ.ಎಂಸಿ ಸುಧಾಕರ್ ನಿವಾಸದ ಬಳಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು
Advertisement
Advertisement
ಸಿದ್ದರಾಮಯ್ಯ ಹಳೆಯ ಸಿದ್ದರಾಮಯ್ಯ ಆಗಬೇಕು. ಎಲ್ಲರಿಂದ ಥೂ..ಛೀ ಅಂತಾ ಕರೆಸಿಕೊಳ್ಳಬೇಡಿ. ನೀವು ಮೊದಲು ಮನುಷ್ಯರಾಗಿ ಎಂದು ಹೇಳಿದರು. ಇದನ್ನೂ ಓದಿ: ಕಡ್ಲೇಪುರಿಯಂತೆ ಮುಡಾ ಸೈಟ್ ಹಂಚಿಕೆ – 1962ರಲ್ಲಿ ವಶಪಡಿಸಿಕೊಂಡ ಭೂಮಿಗೆ 2023ರಲ್ಲಿ ಪರಿಹಾರ!