ವಕ್ಫ್ ಬೋರ್ಡ್ ಕಾಯ್ದೆ ರದ್ದು ಮಾಡಿದ್ರೆ ಕೋಟಿ-ಕೋಟಿ ಆಸ್ತಿ ಸರ್ಕಾರಕ್ಕೆ ಉಳಿತಾಯ: ಯತ್ನಾಳ್

Public TV
1 Min Read
BASANAGAUDA PATIL YATNAL 2

ವಿಜಯಪುರ: ವಕ್ಫ್ ಬೋರ್ಡ್ ಕಾಯ್ದೆಯನ್ನ (Waqf Board Act) ರದ್ದು ಮಾಡಿದರೆ ಕೋಟ್ಯಂತರ ರೂಪಾಯಿ ಬಾಳುವ ಆಸ್ತಿ ಸರ್ಕಾರಕ್ಕೆ ಉಳಿತಾಯವಾಗುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಕಾಯ್ದೆ ಇರೋದ್ರಿಂದ ಅದನ್ನ ಯಾರೂ ಪ್ರಶ್ನೆ ಮಾಡದಂತಾಗಿದೆ. ದೇಶದ ಹಲವೆಡೆ ಬೆಲೆ ಬಾಳುವ ಸರ್ಕಾರಿ ಆಸ್ತಿ (Government Property) ವಕ್ಫ್ ಬೋರ್ಡ್ ಪಾಲಾಗಿದೆ. ಆದ್ದರಿಂದ ವಕ್ಫ್ ಕಾಯ್ದೆಯನ್ನೇ ರದ್ದು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲು ಮುಂದಾಗಿದ್ದೇನೆ ಎಂದಿದ್ದಾರೆ.

Narendra Modi 1

ಇದೇ ವೇಳೆ `ಒನ್ ನೇಷನ್, ಒನ್ ಎಲೆಕ್ಷನ್’ಗೆ (ಒಂದು ದೇಶ-ಒಂದು ಚುನಾವಣೆ) ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಯತ್ನಾಳ್, ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ಆಗೋದ್ರಿಂದ ಸಾಕಷ್ಟು ಹಣ ಉಳಿತಾಯವಾಗುತ್ತೆ. ಅದೊಂದು ಮಹತ್ತರವಾದ ನಿರ್ಧಾರ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ:  One Nation, One Election – ಮಾಜಿ ರಾಷ್ಟ್ರಪತಿ ಕೋವಿಂದ್‌ ನೇತೃತ್ವದಲ್ಲಿ ಸಮಿತಿ ರಚನೆ

ಟೀಂ ಇಂಡಿಯಾ ಗೆಲುವು ಖಚಿತ: ಇನ್ನೂ ಶನಿವಾರ ನಡೆಯುವ ಇಂಡಿಯಾ-ಪಾಕಿಸ್ತಾನ (India-Pakistan) ಏಷ್ಯಾಕಪ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಬೇಕು. ಸೂರ್ಯ-ಚಂದ್ರ ಇರುವವರೆಗೂ ಇಂಡಿಯಾ ಮ್ಯಾಚ್ ಗೆಲುವು ಸಾಧಿಸುತ್ತದೆ. ನಾನು ಕ್ರಿಕೆಟ್ ಅಭಿಮಾನಿಯಲ್ಲ, ನಾನು ಕ್ರಿಕೆಟ್ ಮ್ಯಾಚ್ ನೋಡಲ್ಲ. ಆದ್ರೂ, ದೇಶ ಭಕ್ತನಾಗಿ ಇಂಡಿಯಾ ಪ್ರತಿಯೊಂದು ಮ್ಯಾಚ್‌ನಲ್ಲೂ ಗೆಲುವು ಸಾಧಿಸಬೇಕು ಎಂದು ಪ್ರಾರ್ಥಿಸುತ್ತೇನೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಜಿಡಿಪಿ ಬೆಳವಣಿಗೆಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದ ಭಾರತ – ಯಾವ ದೇಶದ್ದು ಎಷ್ಟು?

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article