CinemaKarnatakaLatestMain PostSandalwood

ಜೊತೆ ಜೊತೆಯಲಿ ಟೀಮ್ ನನ್ನ ಹೊರ ಹಾಕಿದರೆ, ಪ್ರೆಸ್ ಮೀಟ್ ಮಾಡಿ ಉತ್ತರ ಕೊಡುವೆ : ನಟ ಅನಿರುದ್ಧ

ಟ ಅನಿರುದ್ಧ ಜನಪ್ರಿಯ ಧಾರಾವಾಹಿಯಿಂದ ಹೊರ ನಡೆದ ಸುದ್ದಿ ನಿನ್ನೆಯಿಂದಲೂ ಸಖತ್ ಸದ್ದು ಮಾಡುತ್ತಿದೆ. ಧಾರಾವಾಹಿಯಿಂದ ಅನಿರುದ್ಧ ಅವರೇ ಹೊರ ನಡೆದಿದ್ದಾರೆ ಎಂದು ಒಂದು ಕಡೆ ಸುದ್ದಿ ಆಗುತ್ತಿದ್ದರೆ, ಧಾರಾವಾಹಿ ತಂಡವೇ ಅವರನ್ನು ಹೊರ ಕಳುಹಿಸುತ್ತಿದೆ ಎಂದೂ ಹೇಳಲಾಗುತ್ತಿದೆ. ಆದರೆ, ಎರಡೂ ಕಡೆ ಈ ಕುರಿತು ಸ್ಪಷ್ಟತೆ ಇಲ್ಲ. ಧಾರಾವಾಹಿ ತಂಡದ ಸದಸ್ಯರು ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಅನಿರುದ್ಧ ಈ ಬೆಳವಣಿಗೆ ಕುರಿತು ಮಾತನಾಡಿದ್ದಾರೆ.

ಮನೆಯಲ್ಲೇ ಸಣ್ಣ ಪುಟ್ಟ ಮನಸ್ತಾಪಗಳು ಆಗುತ್ತವೆ. ಹಾಗೆಯೇ ಶೂಟಿಂಗ್ ಸೆಟ್ ನಲ್ಲೂ ಆಗಿವೆ ಎಂದು ಹೇಳುವ ಮೂಲಕ ಸದ್ಯ ಯಾವುದೂ ಸರಿಯಿಲ್ಲ ಎನ್ನುವುದನ್ನು ಪರೋಕ್ಷವಾಗಿಯೇ ಒಪ್ಪಿಕೊಂಡಿದ್ದಾರೆ. ಧಾರಾವಾಹಿಯಿಂದ ತಮ್ಮನ್ನು ಹೊರ ಹಾಕುತ್ತಿದ್ದಾರೆ ಎನ್ನುವ ವಿಷಯ ಗೊತ್ತಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ. ವಾಹಿನಿಯಾಗಲಿ ಅಥವಾ ಧಾರಾವಾಹಿ ತಂಡವಾಗಲಿ, ಈ ಕುರಿತು ಮಾತನಾಡಲು ತಮ್ಮನ್ನು ಸಂಪರ್ಕಿಸಿಲ್ಲ ಎಂದಿರುವ ಅವರು, ಈ ಸುದ್ದಿಯ ಕುರಿತಾಗಿ ಮಾತನಾಡಲು ಚಾನೆಲ್ ಗೆ ಹೋಗುತ್ತಿರುವುದಾಗಿಯೂ ತಿಳಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

ಧಾರಾವಾಹಿಯಿಂದ ಹೊರ ನಡೆಯುವ ವಿಚಾರದಲ್ಲಿ ಸ್ಪಷ್ಟತೆ ಇಲ್ಲದೇ ಇರುವ ಕಾರಣಕ್ಕಾಗಿ ತಂಡದೊಂದಿಗೆ ಮಾತನಾಡುವುದಾಗಿ ತಿಳಿಸಿರುವ ಅನಿರುದ್ಧ, ಒಂದು ವೇಳೆ ಆ ರೀತಿಯಲ್ಲಿ ಏನಾದರೂ ನಡೆದರೆ, ಪತ್ರಿಕಾಗೋಷ್ಠಿ ಮಾಡಿಯೇ ಎಲ್ಲ ವಿಷಯವನ್ನೂ ತಿಳಿಸುವುದಾಗಿ ಹೇಳಿಕೊಂಡಿದ್ದಾರೆ. ಈ ಎಲ್ಲ ನಿರ್ಧಾರವೂ ಧಾರಾವಾಹಿ ತಂಡದ ಮೇಲೆಯೇ ನಿಂತಿದೆ ಎಂದು ಅನಿರುದ್ಧ ತಿಳಿಸಿದ್ದಾರೆ.

Live Tv

Leave a Reply

Your email address will not be published.

Back to top button