ಖಾಸಗಿ ಕಂಪನಿಗಳು ಸ್ಥಳೀಯರಿಗೆ ಉದ್ಯೋಗಾವಕಾಶ ಕೊಡದಿದ್ದರೆ ಲೈಸೆನ್ಸ್ ರದ್ದು; ಸಚಿವ ಪರಮೇಶ್ವರ್ ಎಚ್ಚರಿಕೆ

Public TV
1 Min Read
G PARAMESHWAR

ತುಮಕೂರು: ಜಿಲ್ಲೆಯಲ್ಲಿರುವ ಖಾಸಗಿ ಕಂಪನಿಗಳು (Private Company) ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ (Employment) ಕೊಡದಿದ್ದರೇ ಅವರ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ನೂತನ ಸಚಿವ ಡಾ.ಜಿ ಪರಮೇಶ್ವರ್ (G Parameshwar) ಎಚ್ಚರಿಕೆ ನೀಡಿದ್ದಾರೆ.

congress

ತುಮಕೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶ ನೀಡುತ್ತಿಲ್ಲ ಎಂಬ ಸಾಕಷ್ಟು ದೂರುಗಳು ಬಂದಿದೆ. ಈ ಕುರಿತಂತೆ ಚಿಂತನೆ ನಡೆಸಿ ಅಂತಹ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ಯುವಕರು ಉದ್ಯೋಗ ದೊರೆಯುತ್ತಿಲ್ಲ ಎಂದು ಆತಂಕಪಡಬೇಕಿಲ್ಲ. ಕಾಂಗ್ರೆಸ್‌ ಸರ್ಕಾರ ನಿರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಿದೆ ಎಂಧು ಅಭಯ ನೀಡಿದ್ದಾರೆ. ಇದನ್ನೂ ಓದಿ: ಕೇಂದ್ರದ 5 ಕೆ.ಜಿ ಜೊತೆಗೆ ಒಟ್ಟು 15 ಕೆ.ಜಿ ಅಕ್ಕಿ ಕೊಡಬೇಕು: ಅಶ್ವಥ್ ನಾರಾಯಣ್ ಒತ್ತಾಯ

g parameshwara

ನಾನು ಯುವಕನಾಗಿದ್ದಾಗ ತುಮಕೂರು ನಗರದ ಜೂನಿಯರ್ ಕಾಲೇಜು ಗ್ರೌಂಡ್ ನಲ್ಲಿ ಅಥ್ಲೆಟಿಕ್ಸ್ ನಲ್ಲಿ ಪಾಲ್ಗೊಳ್ಳಲು ಅಭ್ಯಾಸ ಮಾಡುತ್ತಿದ್ದೆ. ಅಲ್ಲಿಂದ ಬೆಂಗಳೂರಿಗೆ ಹೋದೆ, ನಂತರ ಬೆಂಗಳೂರಿನಿಂದ ಆಸ್ಟ್ರೇಲಿಯಾಕ್ಕೆ ಹೋದೆ, ಕೊನೆಗೆ ನನ್ನ ಊರು ತುಮಕೂರಿಗೆ ಬಂದು ಸೇರಿದ್ದೇನೆ. ಎಲ್ಲೆಲ್ಲೋ ಹೋಗಿ ಬಂದರೂ ಏನೂ ಮಾಡೋಕೆ ಆಗ್ಲಿಲ್ಲ. ಹಾಗಾಗಿ ವಾಪಸ್ ತುಮಕೂರು ಹೊರವಲಯದ ಗೊಲ್ಲಳ್ಳಿಗೆ ಬಂದು ಸೇರಿದ್ದೇನೆ. ಇಲ್ಲಿನ ಜನರ ಪ್ರೀತಿ ವಿಶ್ವಾಸ ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಸುಮಲತಾರ ಚೊಚ್ಚಲ ತಮಿಳು ಚಿತ್ರದಲ್ಲಿ ನಟಿಸಿದ್ದರು ಶರತ್ ಬಾಬು : ನೆನಪು ಹಂಚಿಕೊಂಡ ಸಂಸದೆ

Share This Article