ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಸ್ಟೇಟಸ್ ಹಾಕೋದೇ ತಪ್ಪಾ? ಕೊಲ್ಲುವುದೊಂದೇ ಮಾರ್ಗ ಅನ್ನೋದಾದ್ರೆ ಬಹಳಷ್ಟು ಜನರು ಬದುಕುವ ಅರ್ಹತೆ ಕಳೆದುಕೊಳ್ಳುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಉದಯಪುರದಲ್ಲಿ ಹಿಂದೂ ಟೈಲರ್ ಹತ್ಯೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಶಿಯಲ್ ಮಿಡಿಯಾದಲ್ಲಿ ಸ್ಟೇಟಸ್ ಹಾಕಿದ್ದು ತಪ್ಪಾ? ಕೊಲ್ಲೊದು ಒಂದೇ ಮಾರ್ಗ ಅನ್ನೊದಾದ್ರೆ ಬಹಳಷ್ಟು ಜನರು ಬದುಕೋ ಅರ್ಹತೆ ಕಳೆದುಕೊಳ್ಳುತ್ತಾರೆ. ಇಂತಹ ಅಸಹಿಷ್ಣುತೆ ಮಾನಸಿಕತೆಯನ್ನು ಕಿತ್ತುಹಾಕದಿದ್ದರೆ ಇನ್ನಷ್ಟು ಘಟನೆಗಳು ನಡೆಯುತ್ತವೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಉದಯಪುರ ಹತ್ಯೆ: ಆರೋಪಿಗಳಿಗೆ ಪಾಕ್ ಮೂಲದ ಉಗ್ರ ಸಂಘಟನೆ ಜೊತೆ ನಂಟು
Advertisement
ನಮ್ಮದೇ ನೆಲದಲ್ಲಿ ಮತಾಂಧತೆ ಕ್ರೌರ್ಯ ನಡೆದಿದೆ. ಹಿಂದೂಗಳ ಮೇಲೆ ಆಗಿರುವ ದೌರ್ಜನ್ಯಕ್ಕೆ ಹಾಗಿದ್ರೆ ಏನೇಲ್ಲ ಮಾಡಬಹುದಿತ್ತು? ಮೊದಲು ಪ್ರಚೋದನೆ ಕೊಡುವ ಮೂಲ ಹುಡುಕಿ ಜಾಲವನ್ನು ಬೇರು ಸಮೇತ ಕಿತ್ತುಹಾಕಬೇಕು ಒಂದು ಒತ್ತಾಯಿಸಿದ್ದಾರೆ.
Advertisement
Advertisement
ಸ್ವಧರ್ಮ ಪ್ರೀತಿಸಿ, ಪರಧರ್ಮ ಗೌರವಿಸಿ: ರಾಜಾಸ್ಥಾನದಲ್ಲಿ ಓಲೈಕೆ ರಾಜಕಾರಣ ನಿಲ್ಲಬೇಕು. ಏಕೆಂದರೆ ಓಲೈಕೆ ರಾಜಕಾರಣದಿಂದಲೇ ದೇಶ ಇಬ್ಭಾಗವಾಯ್ತು. ಆದರೆ ಇದು ಮಾನವೀಯತೆಗೆ ವಿರುದ್ಧವಾದ ಮಾನಸೀಕತೆ. ನಿತ್ಯ ದೇವರ ಅಪಮಾನ ಮಾಡಲಾಗುತ್ತಿದೆ. ಇದೆಲ್ಲವನ್ನು ಬಿಡಬೇಕು ಸ್ವಧರ್ಮವನ್ನು ಪ್ರೀತಿಸಬೇಕು, ಪರಧರ್ಮವನ್ನು ಗೌರವಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಪತಿ ಜೊತೆ ಸೇರಿ 7,894 ಕೋಟಿ ರೂ. ಸೋಲಾರ್ ಹಗರಣ ಮಾಡಿ ಸಿಕ್ಕಿಬಿದ್ಳು
ಇದೇ ವೇಳೆ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕುರಿತು ಮಾತನಾಡಿದ ಅವರು, ಮಹಾರಾಷ್ಟ್ರ ಅಘಾಡಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಅದನ್ನು ನಿರ್ಣಯಿಸುವ ಜಾಗ ವಿಧಾನಸಭೆ. ಏನೇ ಆದರು ಸುಪ್ರೀಂಕೋರ್ಟ್ ನಿರ್ಧರಿಸಲಿದೆ. ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸದೆ ಇದ್ರೆ ಸರ್ಕಾರ ಕಳೆದುಕೊಳ್ಳಲಿದ್ದಾರೆ. ಆದದರೆ ಶಿವಸೇನೆ ಸರ್ಕಾರ ಉಳಿಸಿಕೊಳ್ಳಲು ಅನರ್ಹತೆಯ ಅಡ್ಡದಾರಿ ಹಿಡಿಯುತ್ತಿದೆ ಎಂದು ಟೀಕಿಸಿದ್ದಾರೆ.