ರಾಯಚೂರು: ಯಾದಗಿರಿ ((Yadgiri) ಪಿಎಸ್‌ಐ ಪರಶುರಾಮ್ (PSI Parshuram) ಸಾವಿನ ಪ್ರಕರಣವನ್ನ ಸಿಐಡಿಗೆ ಒಪ್ಪಿಸಿರುವುದನ್ನ ಪರಶುರಾಮ್ ಮಾವ ಎನ್ ವೆಂಕಟಸ್ವಾಮಿ ಸ್ವಾಗತಿಸಿದ್ದಾರೆ. ರಾಯಚೂರಿನಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿರುವ ಎನ್ ವೆಂಕಟಸ್ವಾಮಿ, ಪ್ರಕರಣ ಸಿಐಡಿಗೆ ಕೊಟ್ಟಿರುವುದು ಸ್ವಾಗತ. ಆದರೆ ನನ್ನ ಅಳಿಯನ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ಜನರಿಗೆ ಒಳ್ಳೆಯದಾಗಲಿ ಎಂದು ಶಾಸಕರನ್ನ ಆಯ್ಕೆ ಮಾಡುತ್ತೇವೆ. ಆದರೆ ಜನರನ್ನು ಕಾಪಾಡಬೇಕಾದ ಇಂಥವರು ನರಭಕ್ಷಕರಾಗಿಬಿಟ್ಟರೆ ಗತಿಯೇನು? ಇಂತಹ ಸಂದರ್ಭದಲ್ಲಿ ಸರ್ಕಾರ ಸುಮ್ಮನೆ ಕೂತರೆ ಸರಿಯಲ್ಲ. ನಮ್ಮ ಅಳಿಯನ ಸಾವಿಗೆ ನ್ಯಾಯ ಕೊಡಲೇಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಆಪ್‌ಗೆ ಹಿನ್ನಡೆ, ಎಂಸಿಡಿಗೆ ಸದಸ್ಯರ ನಾಮನಿರ್ದೇಶನದ ಅಧಿಕಾರ ಎಲ್‌ಜಿಗಿದೆ – ಸುಪ್ರೀಂ
ಯಾದಗಿರಿ ಶಾಸಕ ಹಾಗೂ ಅವರ ಪುತ್ರನ ಹಿಂಸೆಯಿಂದ ನನ್ನ ಅಳಿಯ ಸಾವನ್ನಪ್ಪಿದ್ದಾನೆ. 30 ಲಕ್ಷ ಕೊಡದಿದ್ದರೆ ಯಾದಗಿರಿಯಲ್ಲಿ ಇರಬಾರದು ಎಂದು ಹಿಂಸೆ ಕೊಟ್ಟಿದ್ದಾರೆ. ಜಾತಿ ನಿಂದನೆ ಮಾಡಿದ್ದಾರೆ. ಅದಕ್ಕೆ ನೊಂದು ಬಿಪಿ ಹೆಚ್ಚಾಗಿ ನನ್ನ ಅಳಿಯ ಮೃತಪಟ್ಟಿದ್ದಾರೆ ಎಂದಿದ್ದಾರೆ. ಸಿಐಡಿ ಅಧಿಕಾರಿಗಳ ಕರೆಗೆ ಕಾಯುತ್ತಿದ್ದೇವೆ. ಬರಲು ಹೇಳುತ್ತೇವೆ ಎಂದಿದ್ದಾರೆ. ಸರ್ಕಾರದ ಮೇಲೆ ಗೃಹ ಸಚಿವರ ಮೇಲೆ ಭರವಸೆ ಇಡುತ್ತೇವೆ. ನಮ್ಮ ಅಳಿಯನ ಸಾವಿಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿದೆ ಎಂದು ಹೇಳಿದರು. ಇದನ್ನೂ ಓದಿ: 1 ತಿಂಗಳ ಹಿಂದೆ ಸಿಸಿಬಿಗೆ ವರ್ಗಾವಣೆ – ಈಗ ಇನ್ಸ್‌ಪೆಕ್ಟರ್ ನೇಣಿಗೆ ಶರಣು
ಪರಶುರಾಮ ತನ್ನ ಮೇಲಿನ ಒತ್ತಡದ ಬಗ್ಗೆ ಹೇಳಿದ್ದ. ನಾವು ಮನವೊಲಿಸುವ ಪ್ರಯತ್ನ ಮಾಡಿದ್ದೆವು. ವೃತ್ತಿಯಲ್ಲಿ ಇದು ಸಾಮಾನ್ಯ. ರಾಜಕೀಯ ಒತ್ತಡಗಳು ಇದ್ದೆ ಇರುತ್ತದೆ. ಎಲ್ಲಿ ಕೊಡುತ್ತಾರೆ ಎಂಬುದನ್ನು ಕೇಳಿ, ಐಜಿ ಆಫೀಸ್‌ಗೆ ಹೋಗಿ ರಿಕ್ವೆಸ್ಟ್ ಮಾಡಿ ಮುಂದೆ ಜನರಲ್ ಟ್ರಾನ್ಸ್ಫರ್ ಟೈಮಲ್ಲಿ ನೋಡೋಣ ಎಂದು ಮನವರಿಕೆ ಮಾಡಿದ್ದೆವು. ಆದರೆ ಪರಶುರಾಮ್ ತುಂಬಾ ಒತ್ತಡದಲ್ಲಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಸಿಎಂ ಪರ ನಿಲ್ಲುವಂತೆ ಸುರ್ಜೇವಾಲ, ವೇಣುಗೋಪಾಲ್ ಸೂಚನೆ: ಪರಮೇಶ್ವರ್