Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಂವಿಧಾನ ರಕ್ಷಿಸಿದ್ರೆ ದೇಶ ಸುಭದ್ರವಾಗಿ ಉಳಿಯುತ್ತೆ: ಸಿದ್ದರಾಮಯ್ಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಸಂವಿಧಾನ ರಕ್ಷಿಸಿದ್ರೆ ದೇಶ ಸುಭದ್ರವಾಗಿ ಉಳಿಯುತ್ತೆ: ಸಿದ್ದರಾಮಯ್ಯ

Bengaluru City

ಸಂವಿಧಾನ ರಕ್ಷಿಸಿದ್ರೆ ದೇಶ ಸುಭದ್ರವಾಗಿ ಉಳಿಯುತ್ತೆ: ಸಿದ್ದರಾಮಯ್ಯ

Public TV
Last updated: January 26, 2026 12:08 pm
Public TV
Share
6 Min Read
Siddaramaiah 3 1
SHARE

– ಸಂವಿಧಾನ ದುರ್ಬಲಗೊಳಿಸುವ ಪ್ರಯತ್ನ ವಿಷ ಉಣಿಸುವ ಸಂಚು ಎಂದು ಕಿಡಿ

ಬೆಂಗಳೂರು: ಸಂವಿಧಾನವನ್ನ (Constitution) ದುರ್ಬಲಗೊಳಿಸುವ ಪ್ರಯತ್ನ ನಡೆಸುವುದು ವಿಷ ಉಣಿಸುವ ಸಂಚು. ಸಂವಿಧಾನವನ್ನ ನಾವು ರಕ್ಷಿಸಿದ್ರೆ ಸಂವಿಧಾನ ನಮ್ಮನ್ನ ರಕ್ಷಿಸುತ್ತದೆ. ದೇಶ ಸುಭದ್ರವಾಗಿ ಉಳಿಯುತ್ತದೆ. ಹೀಗಾಗಿ ನಾವೆಲ್ಲರೂ ಗಣರಾಜ್ಯೋತ್ಸವದ ದಿನವಾದ ಇಂದು ಸಂವಿಧಾನವನ್ನ ರಕ್ಷಿಸುವ ಪ್ರತಿಜ್ಞೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕರೆ ನೀಡಿದರು.

ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದರು. ಭಾರತವು ತನ್ನನ್ನು ಆಳಿಕೊಳ್ಳಲು ರಚಿಸಿಕೊಂಡ ಸಂವಿಧಾನ ಜಾರಿಗೆ ಬಂದು ಇದೇ ಜನವರಿ 26ಕ್ಕೆ 76 ವರ್ಷಗಳು ಪೂರ್ಣಗೊಂಡಿದೆ. 77ನೇ ಗಣರಾಜ್ಯೋತ್ಸವದ ಶುಭ ದಿನವಾದ ಇಂದು ಸಂವಿಧಾನದ ಮಹತ್ವ ಮತ್ತು ಪ್ರಜಾಪ್ರಭುತ್ವವನ್ನ ಬಲಪಡಿಸುವ ಒಂದಿಷ್ಟು ಚಿಂತನೆಗಳನ್ನ ನನ್ನ ನಾಡಿನ ಜನತೆಯಲ್ಲಿ ಹಂಚಿಕೊಳ್ಳಬಯಸುತ್ತೇನೆ. ಭಾರತದ ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ನ್ಯಾಯವನ್ನು, ಚಿಂತನೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿಪಡಿಸಲು ಎಲ್ಲರ ನಡುವೆ ಭ್ರಾತೃತ್ವವನ್ನು ಉದ್ದೀಪನಗೊಳಿಸುವುದೇ ಸಂವಿಧಾನದ ಆಶಯವಾಗಿದೆ ಎಂದು ವಿವರಿಸಿದರು.

Siddaramaiah 10

ಅನುಭವ ಮಂಟಪ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾದರಿ
ಕರ್ನಾಟಕದಲ್ಲಿ 800 ವರ್ಷಗಳ ಹಿಂದೆಯೇ ಪ್ರಜಾರಾಜ್ಯದ ಬೀಜಾಂಕುರವಾಗಿತ್ತು ಅನ್ನೋದನ್ನ ನಾವು ನೆನಪು ಮಾಡಿಕೊಳ್ಳಬೇಕಾಗಿದೆ. ಅದು ಸಾಧ್ಯವಾಗಿರುವುದು ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ನೇತೃತ್ವದಲ್ಲಿ ನಡೆದಿದ್ದ ಶರಣ ಚಳವಳಿಯಿಂದ. ಕೂಡಲ ಸಂಗಮದ ಅನುಭವ ಮಂಟಪ ಪ್ರಪಂಚದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾದರಿ ಸ್ವರೂಪದ್ದು. ಸಮಾಜದ ಅತ್ಯಂತ ಕೆಳಸ್ತರದ ಜನರೂ ಕೂಡಾ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಅಭಿಪ್ರಾಯ, ಅಹವಾಲುಗಳನ್ನ ವ್ಯಕ್ತಪಡಿಸುವ ಸಮಾನವಕಾಶ ಅನುಭವ ಮಂಟಪದಲ್ಲಿತ್ತು. ಇದು ನಾವಿಂದು ಅನುಭವಿಸುತ್ತಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಗಲ್ಲು. 5) ಭಾರತದಲ್ಲಿ ನ್ಯಾಯಯುತ ಸಾಮಾಜಿಕ ವ್ಯವಸ್ಥೆಯನ್ನ ನಿರ್ಮಿಸುವ ಈ ತೀರ್ಮಾನ ಒಂದು ಚಾರಿತ್ರಿಕೆ ಸಂದರ್ಭದಲ್ಲಿ ಮೈದಾಳಿತು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಈಗಿನ ಸಂವಿಧಾನ ಅಂಗೀಕಾರವಾಗುವುದಕ್ಕಿಂತ ಮೊದಲು ಭಾರತದಲ್ಲಿ ಒಂದು ಅಲಿಖಿತ ಸಂವಿಧಾನ ಇತ್ತು. ಅದು ಅಸಮಾನತೆಯನ್ನ ಒಪ್ಪಿಕೊಂಡ, ಲಿಂಗ ಮತ್ತು ಜಾತಿ ಆಧಾರದಲ್ಲಿಯೇ ಮನುಷ್ಯನ ಯೋಗ್ಯತೆ, ಅವಕಾಶಗಳನ್ನು ನಿರ್ಧರಿಸುವ ಅಲಿಖಿತ ಸಂವಿಧಾನ. ಆ ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಕೆಲವು ವರ್ಗಗಳು ಅಂದರೆ ಶೂದ್ರರು, ಮಹಿಳೆಯರು ಮತ್ತು ಅಸ್ಪೃಶ್ಯರು ಸಂಪತ್ತನ್ನ ಹೊಂದುವ, ಜ್ಞಾನವನ್ನು ಗಳಿಸುವ, ಘನತೆಯಿಂದ ಬದುಕುವ ಹಕ್ಕಿನಿಂದ ವಂಚಿತರಾಗಿದ್ದರು. ಈ ಮನುಷ್ಯ ವಿರೋಧಿ ಅಲಿಖಿತ ಸಂವಿಧಾನವನ್ನು ತಿರಸ್ಕರಿಸಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೊಸದೊಂದು ಸಂವಿಧಾನವನ್ನು ಭಾರತಕ್ಕೆ ನೀಡಿದರು ಎಂದು ಹೇಳಿದರು.

Siddaramaiah 2 2

ನಮ್ಮ ಸರ್ಕಾರ ಸಂವಿಧಾನ ಬದ್ಧವಾಗಿ ನಡೆಯುತ್ತಿದೆ
ಭಾರತದಲ್ಲಿ ಆಧುನಿಕ ಹಾಗೂ ಪ್ರಜಾಪ್ರಭುತ್ವವಾದಿ ರಾಷ್ಟ್ರಪ್ರಭುತ್ವದ ಹುಟ್ಟಿನೊಂದಿಗೆ ಈ ಬಗೆಯ ತಡೆಗೋಡೆಗಳನ್ನ ಮುರಿಯುವ ಪ್ರಯತ್ನ ಪ್ರಾರಂಭವಾಯಿತು. ಯಾರು ಯಾವ ಸಾಮಾಜಿಕ ಮೂಲದಿಂದಲೇ ಬಂದಿರಲಿ, ಅಭಿವೃದ್ಧಿಯ ಹಾಗೂ ಪ್ರಗತಿಯ ಫಲ ಎಲ್ಲರಿಗೂ ಸೇರಬೇಕು ಎಂಬುದು ಸಂವಿಧಾನದಲ್ಲಿ ಸೂಚಿತವಾದ ಸರ್ವರನ್ನೂ ಒಳಗೊಳ್ಳುವ ಸಾಮಾಜಿಕ ಮರುರಚನೆಯ ನಿರ್ಣಯವಾಗಿದೆ. ಭಾರತ ಒಂದು ರಾಷ್ಟ್ರವಾಗಿ ಬೆಳೆಯಬೇಕಾದರೆ, ಸಾಮಾಜಿಕ ಸಂಘರ್ಷಗಳಿಂದ ಹೊರಬರಬೇಕಾದರೆ ಈ ಸಮಾಜದ ಪುರಾತನ ಕಾಲದ ಶ್ರೇಣಿಕೃತ ವ್ಯವಸ್ಥೆಗಳನ್ನ ಒಡೆದು ಸಮಾಜದ ಪುನರ್ ರಚನೆ ಮಾಡಲೇಬೇಕಾಗುತ್ತದೆ. ನಾಗರಿಕನೊಬ್ಬನ ಸ್ಥಾನಮಾನ ಆತನ ಸತ್ವ-ಸಾಧನೆಗಳಿಂದ ನಿರ್ಣಯವಾಗಬೇಕೇ ಹೊರತು, ಆತನ ಹುಟ್ಟು ಇಲ್ಲವೇ ಪುರಾತನ ಕಾಲದಿಂದ ಬಂದ ಸಾಮಾಜಿಕ ಮೂಲಗಳಿಂದ ಅಲ್ಲ ಎಂಬುದನ್ನು ಪ್ರತಿಪಾದಿಸುವ ನಾಗರಿಕ ಸಮಾಜದ ನಿರ್ಮಾಣ ನಮ್ಮ ಸಂವಿಧಾನದ ಮೂಲ ಆಶಯವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನ ದೇಶಕ್ಕೆ ಅರ್ಪಿಸುವಾಗ ಮುಂದಿನ ದಿನಗಳಲ್ಲಿ ದೇಶವನ್ನು ಆಳುವವರಿಗೆ ಎರಡು ಮುಖ್ಯವಾದ ಜವಾಬ್ದಾರಿಗಳನ್ನು ಒತ್ತು ಕೊಟ್ಟು ಹೇಳಿದ್ದರು. ಮೊದಲನೆಯದು ಈ ದೇಶದಲ್ಲಿ ರಾಜಕೀಯ ಪ್ರಜಾಪ್ರಭುತ್ವದ ರಕ್ಷಣೆ, ಆ ಮೂಲಕ ದೇಶದ ಸಾರ್ವಭೌಮತೆಯನ್ನ ಕಾಪಾಡುವುದು. ಎರಡನೆಯದಾಗಿ ಆರ್ಥಿಕ ಪ್ರಜಾಪ್ರಭುತ್ವವನ್ನು ಸಾಧಿಸುತ್ತಾ ಹೋಗುವುದು. ದೇಶ ನಿಜಕ್ಕೂ ಬಲಗೊಳ್ಳುವುದು ಮತ್ತು ಸದೃಢಗೊಳ್ಳುವುದು ಆರ್ಥಿಕ ಪ್ರಜಾಪ್ರಭುತ್ವದಿಂದ. ಇದನ್ನು ಸಾಧಿಸಬೇಕೆಂದರೆ ಸಾವಿರಾರು ಜಾತಿಗಳಾಗಿ, ಮೇಲು ಕೀಳು ಎಂಬ ತಾರತಮ್ಯಗಳಲ್ಲಿ ಛಿದ್ರವಾಗಿರುವ ಈ ದೇಶದಲ್ಲಿ ಸಾಮಾಜಿಕ ನ್ಯಾಯದ ಮೂಲಕ ಆರ್ಥಿಕ ಸಮಾನತೆಯನ್ನ ಸ್ಥಾಪಿಸಿ ದೇಶವನ್ನು ಆಂತರಿಕವಾಗಿ ಸಧೃಡಗೊಳಿಸಬೇಕಾಗಿದೆ. ಕೇವಲ ರಾಜಕೀಯ ಪ್ರಜಾತಂತ್ರದಿಂದ ನಾವು ತೃಪ್ತರಾಗಬಾರದು. ಅದನ್ನು ಸಾಮಾಜಿಕ ಪ್ರಜಾಪ್ರಭುತ್ವ ಮಾಡುವ ನಮ್ಮ ಪ್ರಯತ್ನ ಜಾರಿಯಲ್ಲಿರಬೇಕು ಎಂದು ಅವರು ಬುದ್ದಿ ಮಾತು ಹೇಳಿದ್ದರು. ನಮ್ಮ ಸರ್ಕಾರದ ಎಲ್ಲ ಯೋಚನೆ-ಯೋಜನೆಗಳಿಗೆ ಮಾರ್ಗದರ್ಶನ ನೀಡುತ್ತಾ ಬಂದಿರುವುದು ನಮ್ಮ ಸಂವಿಧಾನ. ಅದರೊಳಗಿನ ಅಕ್ಷರ-ಅಕ್ಷರಗಳಿಗೂ ನಾನು, ನಮ್ಮ ಪಕ್ಷ ಮತ್ತು ಸರ್ಕಾರ ಬದ್ಧವಾಗಿದೆ ಎಂದು ನುಡಿದರು.

ಜನರ ಆರೋಗ್ಯ ರಕ್ಷಣೆ ಆದ್ಯ ಕರ್ತವ್ಯ
ರಾಜ್ಯದ ಜನತೆಯ ಬಡತನ, ಅನಾರೋಗ್ಯ, ಅನಕ್ಷರತೆ, ಅಪೌಷ್ಠಿಕತೆಯನ್ನ ನಿವಾರಿಸಿ ಹಸಿವು ಮುಕ್ತ, ಅನಾರೋಗ್ಯ ಮುಕ್ತ, ಅನಕ್ಷರತೆ ಮುಕ್ತ ಮತ್ತು ಭಯ ಮುಕ್ತ ಸಮಾಜ ನಿರ್ಮಿಸುವುದು ಚುನಾಯಿತ ಸರ್ಕಾರದ ಸಂವಿಧಾನ ಬದ್ಧ ಕರ್ತವ್ಯವಾಗಿದೆ. ಬಡತನ ಎನ್ನುವುದು ಅಪರಾಧ ಅಲ್ಲ. ಇದು ಅಸಮಾನ ಸಂಪತ್ತು ಮತ್ತು ಅವಕಾಶ ಹಂಚಿಕೆಯ ಫಲ ಎನ್ನುವುದನ್ನ ನಾವು ಮರೆಯಬಾರದು. ನಮ್ಮ ಸಂಪತ್ತು ಮತ್ತು ಅವಕಾಶದ ಸಮಾನ ಹಂಚಿಕೆಯಾದಾಗ ಮಾತ್ರ ಸಮೃದ್ಧ, ಬಲಿಷ್ಠ ಮತ್ತು ಕ್ರಿಯಾಶಾಲಿಯಾದ ಸಮಾಜ ನಿರ್ಮಾಣ ಸಾಧ್ಯ ಎನ್ನುವುದನ್ನು ನಾನು ಬಲವಾಗಿ ನಂಬಿದ್ದೇನೆ. ಸಂವಿಧಾನದ ಪರಿಚ್ಛೇದ 39ರ ಪ್ರಕಾರ ಪ್ರತಿಯೊಬ್ಬ ಪ್ರಜೆಗೂ ಜೀವನ ನಿರ್ವಹಣೆಯ ಹಕ್ಕನ್ನ ಅಂದರೆ ಬದುಕುವ ಹಕ್ಕನ್ನು ನೀಡಬೇಕೆಂದು ಹೇಳುತ್ತದೆ. ಪರಿಚ್ಛೇದ 15 (3) ಪ್ರತಿಯೊಬ್ಬ ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಶೇಷ ಕಾನೂನು ಮಾಡಲು ಅವಕಾಶ ನೀಡಿದೆ. ಜನರ ಪೌಷ್ಠಿಕತೆ ಮತ್ತು ಜೀವನ ಮಟ್ಟವನ್ನು ಹೆಚ್ಚಿಸಿ ಆರೋಗ್ಯವನ್ನ ಅಭಿವೃದ್ದಿ ಪಡಿಸುವುದು ಒಂದು ಸರ್ಕಾರದ ಪ್ರಾಥಮಿಕ ಕರ್ತವ್ಯ ಎಂದು, ಸಂವಿಧಾನದ ಪರಿಚ್ಛೇದ 47 ರ ಡಿಯ ರಾಜನೀತಿಯ ನಿರ್ದೇಶಿತ ತತ್ವ ಹೇಳಿದೆ. ನಮ್ಮ ಸರ್ಕಾರ ತನ್ನ ಮೂಲಭೂತ ಕರ್ತವ್ಯವಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

Thawar Chand Gehlot 2

ಭವಿಷ್ಯಕ್ಕೆ ʻಗ್ಯಾರಂಟಿʼ ನೆರವು
ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯಡಿ (Universal Basic Income) ರೂಪಿತವಾದ ನಮ್ಮ ಗ್ಯಾರಂಟಿ ಯೋಜನೆಗಳು ಇಂದು ಅನ್ನಭಾಗ್ಯ ಯೋಜನೆಯ ಮೂಲಕ ಆಹಾರ ಭದ್ರತೆಯನ್ನ, ಗೃಹಜ್ಯೋತಿಯ ಮೂಲಕ ಇಂಧನ ಖಾತರಿಯನ್ನು ನಾಡಿನ ಜನತೆಗೆ ಒದಗಿಸಿವೆ. ಗೃಹಲಕ್ಷ್ಮಿ ಯೋಜನೆಯು ಆರ್ಥಿಕವಾಗಿ ಹಿಂದುಳಿದಿರುವ ಈ ನಾಡಿನ ಕುಟುಂಬಗಳ ಯಜಮಾನಿಯರಿಗೆ ಮಾಸಿಕ 2 ಸಾವಿರ ರೂಪಾಯಿ ಒದಗಿಸುವ ಮೂಲಕ ಅವರ ಕನಿಷ್ಠ ಅಗತ್ಯಗಳಿಗೆ ಬೆಂಗಾವಲಾಗಿದೆ. ಅದೇ ರೀತಿ, ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಪ್ರಯಾಣದ ಖಾತರಿಯನ್ನ ನೀಡಿ ಅವರನ್ನು ಸ್ವಾವಲಂಬಿಗಳಾಗಿಸಿದೆ. ಯುವನಿಧಿ ಯೋಜನೆಯು ಪದವೀಧರ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆಯನ್ನು ನೀಡುವ ಮೂಲಕ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಿ ಉತ್ತಮ ಉದ್ಯೋಗಾವಕಾಶಗಳಿಗೆ ತರಬೇತಿ ಪಡೆಯಲು ಅವಕಾಶ ಕಲ್ಪಿಸಿದೆ. ಕರ್ನಾಟಕದಲ್ಲಿ ಇಂದು ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಯೊಂದು ಕುಟುಂಬವು ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ತಿಂಗಳಿಗೆ 5-6 ಸಾವಿರ ರೂಪಾಯಿ ಉಳಿತಾಯ ಕಾಣುತ್ತಿದ್ದು, ವಾರ್ಷಿಕ 60 ರಿಂದ 70 ಸಾವಿರ ರೂಪಾಯಿ ಈ ಕುಟುಂಬಗಳಿಗೆ ಉಳಿತಾಯವಾಗುತ್ತಿದೆ. ಅದೇ ರೀತಿ, ಮಧ್ಯಮ, ಮೇಲ್ಮಧ್ಯಮ ವರ್ಗದ ಕುಟುಂಬಗಳಿಗೂ ಸಹ ಗೃಹಜ್ಯೋತಿ, ಶಕ್ತಿ, ಯುವನಿಧಿಯಂತಹ ಗ್ಯಾರಂಟಿ ಯೋಜನೆಗಳಿಂದಾಗಿ ವಾರ್ಷಿಕ 25 ರಿಂದ 30 ಸಾವಿರ ರೂಪಾಯಿ ಉಳಿತಾಯ ಕಾಣುತ್ತಿದ್ದಾರೆ. ಈ ಹಣವನ್ನು ಅವರು ತಮ್ಮ ಮಕ್ಕಳ ಶಿಕ್ಷಣಕ್ಕೆ, ಆರೋಗ್ಯಕ್ಕೆ, ಭವಿಷ್ಯದ ಉಳಿತಾಯಕ್ಕೆ ಬಳಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಪರಿಣಾಮ ಇಂದು ಸಮಾಜದಲ್ಲಿ ಭದ್ರತೆಯ ಭಾವನೆ ಮನೆ ಮಾಡಿದೆ.

ಸಂವಿಧಾನ ರಕ್ಷಿಸಲು ಸಿಎಂ ಕರೆ
ಮುಖ್ಯಮಂತ್ರಿಯಾಗಿ ಸಂವಿಧಾನದ ಆಶಯಗಳನ್ನ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ತಲೆಮಾರುಗಳ ಅಸಮಾನತೆ ಮತ್ತು ತಾರತಮ್ಯವನ್ನು ಅನುಭವಿಸಿದವರಿಗೆ ಅವಕಾಶಗಳನ್ನು ಒದಗಿಸುವ ಒಂದು ಅಸ್ತ್ರವಾಗಿ ಅಭಿವೃದ್ಧಿಯನ್ನ ನಾನು ಪರಿಗಣಿಸಿದ್ದೇನೆ. ಸಂವಿಧಾನ ವಿರೋಧಿಸುತ್ತಿರುವವರು ಸಾಮಾಜಿಕ ಬದಲಾವಣೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವವರು. ಅವರು ಬಡವರ, ರೈತರ, ಕಾರ್ಮಿಕರ, ದಲಿತರ, ಶೋಷಿತರ ಪರವಾದ ಕಾನೂನುಗಳು ಮತ್ತು ಕಾರ್ಯಕ್ರಮಗಳನ್ನು ವಿರೋಧಿಸುವವರು ಎನ್ನುವುದನ್ನು ಜನತೆ ಅರ್ಥಮಾಡಿಕೊಳ್ಳಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನವನ್ನು ಅರ್ಪಿಸಿದಾಗಲೂ ಅದನ್ನು ವಿರೋಧಿಸುವವರಿದ್ದರು. ಈಗಲೂ ಆಗಾಗ ಸಂವಿಧಾನವನ್ನು ಬದಲಾಯಿಸುವ, ಕಿತ್ತೊಗೆಯುವ ಕೂಗುಗಳು ಅಲ್ಲಲ್ಲಿ ಕೇಳಿಬರುತ್ತಿದೆ. ಆದರೆ ಇದು ಸುಲಭದ ಕೆಲಸ ಅಲ್ಲ ಎಂದು ಅರ್ಥಮಾಡಿಕೊಂಡವರು ಅದನ್ನು ನಿಧಾನವಾಗಿ ದುರ್ಬಲಗೊಳಿಸುವ ಪ್ರಯತ್ನದಲ್ಲಿದ್ದಾರೆ. ಇದು ನಿಧಾನವಾಗಿ ವಿಷ ಉಣಿಸುವ ಸಂಚು. ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನ ಕಿತ್ತುಕೊಳ್ಳುವ ಮೂಲಕ ಸಂವಿಧಾನವನ್ನು ಅಪ್ರಸ್ತುತ ಮಾಡುವ ಈ ಸಂಚಿನ ಬಗ್ಗೆ ನಾವು ಎಚ್ಚರದಿಂದ ಇರಬೇಕು. ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ, ದೇಶ ಸುಭದ್ರವಾಗಿ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಗಣರಾಜ್ಯೋತ್ಸವದ ದಿನವಾದ ಇಂದು ಸಂವಿಧಾನವನ್ನು ರಕ್ಷಿಸುವ ಪ್ರತಿಜ್ಞೆಯನ್ನು ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಸರ್ಕಾರದ ಯೋಜನೆಗಳು ನೂರಾರು. ಆದರೆ ಅವುಗಳ ಹಿಂದಿನ ಸದಾಶಯ ಮಾತ್ರ ಒಂದೇ. ಅದು ಸಮಸಮಾಜದ ನಿರ್ಮಾಣ, ಸರ್ವರಿಗೂ ಸಮಪಾಲು ಸಮಬಾಳು. ಸರ್ವರನ್ನು ಸಶಕ್ತರನ್ನಾಗಿಸಿ ಶಕ್ತಿಶಾಲಿ ರಾಜ್ಯ ಕಟ್ಟುವ ನಮ್ಮ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ, ಬೆಂಬಲ, ಆಶೀರ್ವಾದ ಇರಲಿ ಎಂದು ಕೋರಿದರು.

TAGGED:bengaluruConstitutionRepublic Day 2026siddaramaiahಗಣರಾಜ್ಯೋತ್ಸವ 2026ಬೆಂಗಳೂರುಸಂವಿಧಾನಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

Dharmendra Mammootty Alka Yagnik
ಧರ್ಮೇಂದ್ರಗೆ ಪದ್ಮವಿಭೂಷಣ; ಮಮ್ಮುಟ್ಟಿ, ಅಲ್ಕಾ ಯಾಗ್ನಿಕ್‌ಗೆ ಪದ್ಮಭೂಷಣ ಪ್ರಶಸ್ತಿ
Cinema Latest Main Post National
Shivaraj Kumar
ಶಿವಣ್ಣನ ಮನ ಗೆದ್ದ ʻಲವ್ ಯೂ ಮುದ್ದುʼ ಜೋಡಿ – ಹ್ಯಾಟ್ರಿಕ್‌ ಹೀರೋ ಹೇಳಿದ್ದೇನು?
Cinema Latest Sandalwood Top Stories
Ghaarga Film
`ಘಾರ್ಗಾ’ ಚಿತ್ರದ ಟ್ರೈಲರ್ ರಿಲೀಸ್‌ – ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಕಂಡು ಸಿನಿಪ್ರಿಯರು ಫುಲ್‌ ಖುಷ್‌
Cinema Latest Sandalwood
Darshan 7
ದರ್ಶನ್ ಹೆಚ್ಚುವರಿ ಬ್ಲಾಂಕೆಟ್‌ ಸೌಲಭ್ಯಕ್ಕೆ ಕುತ್ತು – ಕಾರಾಗೃಹ ಡಿಜಿಪಿ ಹೊಸ ಆದೇಶ
Bengaluru City Cinema Latest Sandalwood

You Might Also Like

Republic Day Celebration 2
Bengaluru City

ರಾಜ್ಯದಲ್ಲೆಡೆ 77ನೇ ಗಣರಾಜ್ಯೋತ್ಸವದ ಸಂಭ್ರಮ – ವಿವಿಧ ಜಿಲ್ಲೆಗಳಲ್ಲಿ ಧ್ವಜಾರೋಹಣ

Public TV
By Public TV
4 minutes ago
CM CUP
Bengaluru City

ಫೆ.21, 22 ರಂದು ಶಟಲ್‌ ಬ್ಯಾಡ್ಮಿಂಟನ್‌ ಟೂರ್ನಿ – `ಸಿಎಂ ಕಪ್‌ 2026’ರ ಜೆರ್ಸಿ ಅನಾವರಣ

Public TV
By Public TV
7 minutes ago
Lakshmi Hebbalkar
Districts

ಮೊದಲ ಬಾರಿಗೆ ಸೈಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣ – ಅದು ನನ್ನ ಭಾಗ್ಯ ಎಂದ ಹೆಬ್ಬಾಳ್ಕರ್‌

Public TV
By Public TV
17 minutes ago
Shubhanshu Shukla
Latest

ಗಗನಯಾತ್ರಿ ಶುಭಾಂಶು ಶುಕ್ಲಾಗೆ ʻಅಶೋಕ ಚಕ್ರʼ ಪ್ರದಾನ

Public TV
By Public TV
31 minutes ago
Ankola DOG 1
Districts

ಸರ್ಕಾರಿ ಅಧಿಕಾರಿಯ ನಿಸ್ವಾರ್ಥ ಸೇವೆ – ದೇಶದ ಗಡಿ ಕಾಯುತ್ತಿವೆ ಅಂಕೋಲದ 40 ಶ್ವಾನಗಳು!

Public TV
By Public TV
52 minutes ago
Republic Day 1
Latest

ಪರೇಡ್‌ನಲ್ಲಿ ಕರ್ನಾಟಕ ಮುಧೋಳ ಶ್ವಾನ ಆಕರ್ಷಣೆ; ಗಮನ ಸೆಳೆದ ಬ್ಯಾಕ್ಟ್ರಿಯನ್ ಒಂಟೆ, ಶಿಕಾರಿ ಪಕ್ಷಿ; ಇವುಗಳ ವಿಶೇಷತೆ ಏನು?

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?