ಬೆಂಗಳೂರು: ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿ ವಿಧೇಯಕ ಮಂಡನೆಯಾಗಲೇಬೇಕು. ವಿಧೇಯಕ ಮಂಡನೆಯಾಗದಿದ್ದರೆ ನಾನು ಸಚಿವ ಸ್ಥಾನದಲ್ಲಿ ಇರಲ್ಲ ಅಂತ ಸಿಎಂ ಎದುರೇ ಅಸಮಾಧಾನಗೊಂಡ ಆರೋಗ್ಯ ಸಚಿವ ರಮೇಶ್ ಕುಮಾರ್ ರಾಜೀನಾಮೆ ಬೆದರಿಕೆ ಹಾಕಿದ್ದಾರೆ.
ಯಾರದ್ದೋ ಪ್ರತಿಭಟನೆಗೆ ಹೆದರಿ ವಿಧೇಯಕ ಮಂಡನೆ ಆಗದಿದ್ದರೆ ಸರಿ ಹೋಗುವುದಿಲ್ಲ. ಜನಸಾಮಾನ್ಯರನ್ನ ನೋಡಿಕೊಂಡು ವಿಧೇಯಕ ಸಿದ್ಧಗೊಳಿಸಿರೋದು. ಸ್ಥಿತಿವಂತರ ಪರ ಸರ್ಕಾರ ನಿಲ್ಲಬಾರದು. ಮುಂದಿನ ವಾರ ವಿಧೇಯಕ ಮಂಡಿಸುವ ಬಗ್ಗೆ ಚರ್ಚೆ ಮಾಡೋಣ ಎಂದು ಸಿಎಂ ರಮೇಶ್ ಕುಮಾರ್ ಅವರನ್ನ ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ.
Advertisement
ಇದನ್ನೂ ಓದಿ: ಹತ್ತೇ ದಿನದಲ್ಲೇ ಎರಡನೇ ಬಾರಿ ಮುಷ್ಕರ – ಬೆಳಗಾವಿ ಚಲೋಗೆ ಖಾಸಗಿ ಆಸ್ಪತ್ರೆಗಳು ಬಂದ್
Advertisement
ಬೆಳಗಾವಿ ಕನ್ನಡ ಸೌಧದ ಮುಂದೆ ವೈದ್ಯರ ಮುಷ್ಕರ ಹಿನ್ನಲೆಯಲ್ಲಿ ಸಚಿವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ್ರು. ನೋ ರಿಯಾಕ್ಷನ್ ಎಂದು ಕೈ ಸನ್ನೆ ಮಾಡಿ ಹೊರಟು ಹೋದ್ರು. ವಿಧಾನಸಭೆ ಸಭಾಂಗಣದಲ್ಲಿ ಕಲಾಪ ಆರಂಭಕ್ಕೂ ಮುನ್ನ ಬಿಜೆಪಿ ಶಾಸಕರಾದ ಲಕ್ಷ್ಮಣ್ ಸವದಿ, ಸುರೇಶ್ ಕುಮಾರ್, ನಾರಾಯಣಸ್ವಾಮಿ, ಸತೀಶ್ ರೆಡ್ಡಿ, ತಿಪ್ಪಾರೆಡ್ಡಿ ಸಚಿವ ರಮೇಶ್ ಕುಮಾರ್ ಅವರನ್ನು ಸುತ್ತುವರಿದು ಮಾತುಕತೆ ನಡೆಸಿದ್ರು.
Advertisement
ಇದನ್ನೂ ಓದಿ: ಬೆಳಗಾವಿಯಲ್ಲಿ ಅಧಿವೇಶನ – ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಭಾರಿ ಚರ್ಚೆ!
Advertisement
ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಟಾಯ್ಲೆಟ್ ರೂಂ ಇಲ್ಲದೇ ಪೊಲೀಸರ ಪರದಾಟ