DistrictsHaveriKarnatakaLatestMain Post

ಇಸ್ರೇಲ್‌ನಲ್ಲಿ ಬೆಳಗ್ಗೆ ಇಂತಹ ಘಟನೆಯಾದರೆ, ಸಂಜೆ ನೇಣಿಗೆ ಹಾಕ್ತಾರೆ: ಬಸವರಾಜ್ ಹೊರಟ್ಟಿ

Advertisements

ಹಾವೇರಿ: ಕರಾವಳಿ ಭಾಗದಲ್ಲಿ ನಡೆದ ಘಟನೆ ಬಹಳ ನೋವು ತಂದಿದೆ. ಇಂತಹ ಕೃತ್ಯ ಮಾಡಿದವರಿಗೆ ಶಿಕ್ಷೆ ಆಗಿರುವುದು ಇವತ್ತಿನವರೆಗೂ ಗೊತ್ತಾಗಿಲ್ಲ. ಶಿಕ್ಷೆ ಆದರೆ ಮಾತ್ರ ಇಂತಹ ಘಟನೆಗಳು ಕಡಿಮೆ ಆಗುತ್ತವೆ. ಅದಕ್ಕೆ ನಮ್ಮಲ್ಲಿ ಆ ರಿಪೋರ್ಟ್, ಈ ರಿಪೋರ್ಟ್ ಎಂಬ 20 ಕಾನೂನುಗಳು ಇವೆ. 10-15 ವರ್ಷ ಆಗುವುದರಲ್ಲಿ ಜನರು ಅದನ್ನು ಮರೆತು ಬಿಡುತ್ತಾರೆ. ನಾನು ಸಹ ಇಸ್ರೇಲ್‌ಗೆ ಹೋಗಿದ್ದೆ. ಅಲ್ಲಿ ಬೆಳಗ್ಗೆ ಇಂತಹ ಘಟನೆಯಾದರೆ ಸಂಜೆ ಗಲ್ಲಿಗೆ ಹಾಕುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿಕೆ ನೀಡಿದರು.

ಹಾವೇರಿಯಲ್ಲಿ ಮಾತನಾಡಿದ ಅವರು, ಇಂತಹ ಘಟನೆಗಳು ಆಗಬಾರದು. ಇಂತಹ ಸಮಯದಲ್ಲಿ ಇಂಟೆಲಿಜೆನ್ಸಿಯವರು ಪೊಲೀಸರಿಗಿಂತ ಹೆಚ್ಚಿನ ಕೆಲಸ ಮಾಡಿ ಸರ್ಕಾರಕ್ಕೆ ಮಾಹಿತಿ ಕೊಡಬೇಕು. ಇವೆಲ್ಲಾ ನಡೆಯಬಾರದಾದರೂ ನಡಿಯುತ್ತಿವೆ. ಯಾವುದೇ ಜಾತಿ ಇರಲಿ, ಏನೇ ಇರಲಿ. ತಪ್ಪಿತಸ್ಥರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೊರಟ್ಟಿ ಹೇಳಿದರು.

ನಮ್ಮಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು. ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು. ಶಿಕ್ಷೆ ಆಗಿದ್ದನ್ನು ಜನರಿಗೆ ಗೊತ್ತು ಮಾಡಿಕೊಡಬೇಕು. ಹಾಗಾದರೆ ಮಾತ್ರ ಇದನ್ನು ತಡೆಯಬಹುದು. ಇಲ್ಲದಿದ್ದರೆ ಇಂತಹ ಘಟನೆಗಳು ಮತ್ತಷ್ಟು ಆಗುತ್ತವೆ. ಇಂತಹ ಸಮಯದಲ್ಲಿ ಎಲ್ಲಾ ಪಕ್ಷಗಳು ಒಂದಾಗಿ ಶಾಂತಿ ಕಾಪಾಡಬೇಕು. ನಾ ಹಾಗೆ ಮಾಡಿದೆ, ನೀ ಹೀಗೆ ಮಾಡಿದೆ ಎಂದು ಒಬ್ಬರನ್ನೊಬ್ಬರು ಎತ್ತಿ ಕಟ್ಟುವ ಪರಿಸ್ಥಿತಿ ಆಗಬಾರದು. ವಿರೋಧ ಪಕ್ಷ ಬರೀ ಟೀಕೆ ಮಾಡುತ್ತಾ ಕುಳಿತರೆ ಸರಿಯಲ್ಲ. ಸಿಎಂ ಎಲ್ಲಾ ರಾಜಕೀಯ ಪಕ್ಷಗಳ ಸಭೆ ಕರೆದು ಮುಂದೆ ಇಂತಹ ಘಟನೆಗಳು ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು. ಇದನ್ನೂ ಓದಿ: ಹಿಂದೂಗಳ ನರಮೇಧಕ್ಕೆ ಕಾರಣವೇ ಸಿದ್ದರಾಮಯ್ಯ – ಬಿಜೆಪಿ ಕಾರ್ಯಕರ್ತ ಚಂದ್ರಹಾಸ್

ನಾನು ಯೋಗಿಯಂತೆ ಮತ್ತೊಬ್ಬರನ್ನು ನೋಡಿಲ್ಲ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಕೊಡಬೇಕು. ಅದನ್ನು ಮಾಧ್ಯಮದವರ ಮೂಲಕ ಜನರಿಗೆ ಗೊತ್ತು ಮಾಡಬೇಕು. ಹಾಗಾದಾಗ ಇಂತಹ ಘಟನೆಗಳು ನಡೆಯುವುದಿಲ್ಲ. ಯಾವುದೇ ಪಕ್ಷ, ಸಂಘದಲ್ಲಿದ್ದವರನ್ನು ಕೊಲೆ ಮಾಡುವುದು ಸರಿಯಲ್ಲ. ಬಹಳ ನೋವಿನ ಸಂಗತಿಯಿದು. ಕೋಳಿ, ಕುರಿಯಂತೆ ಮನುಷ್ಯನ ಜೀವನ ಹೋಗುತ್ತಿದೆ. ಸರ್ಕಾರ ಗಟ್ಟಿಯಾದ ನಿರ್ಧಾರ ತೆಗೆದುಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹೈದರಾಬಾದ್‌ನಲ್ಲಿ ನಮ್ಮ ಸಜ್ಜನ ಶೂಟೌಟ್ ಮಾಡಲಿಲ್ಲವೇನು? ಇಂತಹ ಸಮಯದಲ್ಲಿ ಪೊಲೀಸರು ಸಣ್ಣ ತಪ್ಪು ಮಾಡಿದರೆ, ಇಂತಹ ಘಟನೆಗಳು ಆಗುವುದು ನಿಂತರೆ ನಾನೇನು ಅದನ್ನು ತಪ್ಪು ಎನ್ನುವುದಿಲ್ಲ ಎಂದು ಬಸವರಾಜ್ ಹೊರಟ್ಟಿ ಹೇಳಿದರು. ಇದನ್ನೂ ಓದಿ: ಮಂಗಳೂರಿನಲ್ಲಿ ರಾಜಕೀಯಕ್ಕಾಗಿ ಕೊಲೆ ನಡೆದಿವೆ: ಮಾಧುಸ್ವಾಮಿ

Live Tv

Leave a Reply

Your email address will not be published.

Back to top button